ಮೈಸೂರಿನ ವರುಣಾದಲ್ಲಿ ಯುವಕನೊಬ್ಬನ ಭೀಕರ ಹತ್ಯೆ, ಒಬ್ಬ ಹೆಣ್ಣುಮಗಳು ಕೊಲೆಗೆ ಕಾರಣಳಾದಳೇ?

Updated on: May 05, 2025 | 3:57 PM

ಪ್ರವೀಣ್ ಯಾವುದೋ ಹುಡುಗಿಯ ಜೊತೆ ಅಫೇರ್ ಇಟ್ಟುಕೊಂಡಿದ್ದನಂತೆ. ಅದರೆ, ಅದು ಎಲ್ಲರಿಗೂ ಗೊತ್ತಾಗಿ ಅಥವಾ ಯಾವುದೋ ಕಾರಣಕ್ಕೆ ಜಗಳವಾಗಿ ಅಫೇರ್ ನಿಂತುಹೋಗಿದೆ. ಅದು ನಡೆದು ಒಂದು ಮುಕ್ಕಾಲು ವರ್ಷ ಗತಿಸಿದೆ ಮತ್ತು ಈ ಅವಧಿಯಲ್ಲಿ ಕಾರ್ತೀಕ್ ಅಮ್ಮ ಪ್ರವೀಣ್ ನನ್ನು ನೋಡೇ ಇರಲಿಲ್ಲವಂತೆ. ಒಮ್ಮೆ ಕಾರ್ತೀಕ್ ಮತ್ತು ಪ್ರವೀಣ್ ಲವ್ ಮಾಡುತ್ತಿದ್ದ ಯುವತಿ ಫೋನಲ್ಲಿ ಮಾತಾಡುತ್ತಿದ್ದುದನ್ನು ಪ್ರವೀಣ್ ಕೇಳಿಸಿಕೊಂಡಿದ್ದನಂತೆ. ಅದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಕಾರ್ತೀಕ್ ಅಮ್ಮ ಹೇಳುತ್ತಾರೆ.

ಮೈಸೂರು ಮೇ 5: ರವಿವಾರ ರಾತ್ರಿ ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಕಾರ್ತೀಕ್ (Karthik) ಹೆಸರಿನ ಯುವಕನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯಾರು ಕೊಂದಿರಬಹುದು ಅನ್ನೋದರ ಬಗ್ಗೆ ಅಸ್ಪಷ್ಟವಾಗಿ ಯುವಕನ ಅಮ್ಮ ಹೇಳುತ್ತಾರೆ. ನಿನ್ನೆ ರಾತ್ರಿ ಅವರು ಸುಮಾರು 10.30 ಕ್ಕೆ ತಾಯಿ ಊಟ ಮಾಡಿಕೊಂಡು ಹೋಗಲು ಮನೆಯಿಂದ ಆಚೆಯಿದ್ದ ಮಗನನ್ನು ಕರೆದಿದ್ದಾರೆ. ಕಾರ್ತೀಕ್ 11.00 ರ ನಂತರ ಬಂದು ಊಟ ಮಾಡ್ಕೊಂಡು ಪುನಃ ಹೊರಹೋಗಿದ್ದಾನೆ. ರಾತ್ರಿಯೆಲ್ಲ ಕಾರ್ತೀಕ್ ಮನೆಗೆ ಬಂದಿಲ್ಲ. ಬೆಳಗಿನ ಜಾವ ಸುಮಾರು ಮೂರು ಗಂಟೆ ಹೊತ್ತಿಗೆ ಕಾರ್ತೀಕ್ ಲವ್ ಮಾಡುತ್ತಿದ್ದ ಯುವತಿಯೊಬ್ಬಳು ಕಾರ್ತೀಕ್ ಅಮ್ಮನಿಗೆ ಫೋನ್ ಮಾಡಿದ್ದಾಳೆ ಆದರೆ ಇವರು ರಿಸೀವ್ ಮಾಡಿಲ್ಲ. ಬೆಳಗ್ಗೆ ಹೊತ್ತು ಸ್ನೇಹಿತನೊಬ್ಬ ಮನೆಗೆ ಬಂದು ಕಾರ್ತೀಕ್​ ಕೊಲೆಯಾಗಿರುವ ವಿಷಯ ತಿಳಿಸಿದ್ದಾನೆ. ಪ್ರವೀಣ್ ಅನ್ನುವವನ ಮೇಲೆ ಕಾರ್ತೀಕ್ ನ ಅಮ್ಮ ಅನುಮಾನ ವ್ಯಕ್ತಪಡಿಸುತ್ತಾರಾದರೂ ಯಾವುದನ್ನೂ ನಿಖರವಾಗಿ ಹೇಳಲ್ಲ.

ಇದನ್ನೂ ಓದಿ:  2ನೇ ಹೆಂಡ್ತಿ ಮಾತು ಕೇಳಿ ಮೊದಲ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿರಾಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 05, 2025 03:17 PM