Mysuru: ಬೈಕ್​ಗೆ ಪೆಟ್ರೋಲ್​ ಹಾಕಿಸಿ ಹಣ ಕೊಡದೆ ಯುವಕರು ಪರಾರಿ

Edited By:

Updated on: Sep 27, 2025 | 9:28 AM

ಬೈಕ್​ಗೆ ಪೆಟ್ರೋಲ್​ ಹಾಕಿಸಿ ಹಣ ಕೊಡದೆ ಯುವಕರು ಪರಾರಿಯಾಗಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಬದನವಾಳು ಪೆಟ್ರೋಲ್​ ಬಂಕ್​ಗೆ ಬೈಕ್​ನಲ್ಲಿ ಬಂದಿದ್ದ ಯುವಕರು ಹಣ ಪಾವತಿ ಮಾಡುವ ನಾಟಕ ಮಾಡಿ ಸ್ಥಳದಿಂದ ಎಸ್ಕೇಪ್​ ಆಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೈಸೂರು, ಸೆಪ್ಟೆಂಬರ್​ 27: ಪೆಟ್ರೋಲ್​ ಬಂಕ್​ನಲ್ಲಿ ಪೆಟ್ರೋಲ್​ ಹಾಕಿಸಿಕೊಂಡು ಹಣ ಕೊಡದೆ ಯುವಕರು ಪರಾರಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಬದನವಾಳುವಿನಲ್ಲಿ ನಡೆದಿದೆ. ಬಂಕ್​ ಗೆ ಬೈಕ್​ನಲ್ಲಿ ಬಂದ ಯುವಕರು 1,200 ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಆ ಬಳಿಕ ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ಹಣ ಪಾವತಿಸುವ ನಾಟಕ ಮಾಡಿದ್ದಾರೆ. ಅಂತಿಮವಾಗಿ ಹಣ ಪಾವತಿ ಮಾಡದೆ ಯುವಕರು ಪರಾರಿ ಆಗಿರುವ ದೃಶ್ಯ ಪೆಟ್ರೋಲ್​ ಬಂಕ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More