Sharath remains untraceable: 24 ಗಂಟೆ ಕಳೆದರೂ ಅರಿಶಿನಗುಂಡಿ ಜಲಪಾತದಲ್ಲಿ ಜಾರಿಬಿದ್ದ ಭದ್ರಾವತಿ ಯುವಕ ಪತ್ತೆಯಾಗಿಲ್ಲ

Sharath remains untraceable: 24 ಗಂಟೆ ಕಳೆದರೂ ಅರಿಶಿನಗುಂಡಿ ಜಲಪಾತದಲ್ಲಿ ಜಾರಿಬಿದ್ದ ಭದ್ರಾವತಿ ಯುವಕ ಪತ್ತೆಯಾಗಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 26, 2023 | 12:20 PM

ಶರತ್ ಬಂಡೆಗಳ ನಡುವೆ ಅಥವಾ ಅವುಗಳನ್ನು ಅಸರೆಯಾಗಿಸಿಕೊಂಡು ಸಿಲುಕಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಉಡುಪಿ: ಹುಚ್ಚು ಸಾಹಸ ಮಾಡಹೋಗಿ ಜಿಲ್ಲೆಯ ಅರಿಶಿನಗುಂಡಿ ಜಲಪಾತದಲ್ಲಿ ಮಂಗಳವಾರ ಬೆಳಗ್ಗೆ ಜಾರಿಬಿದ್ದ ಭದ್ರಾವತಿ (Bhadravati) ಮೂಲದ ಯುವಕ ಶರತ್ (Sharath) 24 ಗಂಟೆಗಿಂತ ಹೆಚ್ಚಿನ ಸಮಯ ತಜ್ಞರ ಹುಡುಕಾಟದ ಹೊರತಾಗಿಯೂ ಪತ್ತೆಯಾಗಿಲ್ಲ ಅನ್ನೋದು ಕಳವಳಕಾರಿ ಸಂಗತಿ. ಅವನ ತಂದೆ-ತಾಯಿ ಮತ್ತು ಸಂಬಂಧಿಕರು ಅನುಭವಿಸುತ್ತಿರುವ ನೋವು, ಆಘಾತ, ಗಾಬರಿ ಮತ್ತು ಭಯದ ಬಗ್ಗೆ ಯೋಚಿಸುವುದು ಕೂಡ ಸಾಧ್ಯವಾಗದು. ಚಿತ್ರದುರ್ಗದ ಜ್ಯೋತಿರಾಜ್ ತಂಡ (Jyothiraj team) ನಿನ್ನೆಯಿಂದ ಅವನ ಹುಡುಕಾಟ ನಡೆಸುತ್ತಿದೆಯಾದರೂ ಪ್ರಯೋಜನವಾಗಿಲ್ಲ. ನೀರಿನ ರಭಸ ಜೋರಾಗಿದೆ ಎಂದು ತಜ್ಞರು ಹೇಳುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹುಡುಕಾಟಕ್ಕೆ ರಾಜ್ಯ ಸರ್ಕಾರ (state government) ಹೆಲಿಕಾಪ್ಟರ್ ಒದಗಿಸಿದರೆ ಅಥವಾ ತಜ್ಞರ ತಂಡವನ್ನು ಅದರಲ್ಲಿ ಕಳಿಸಿದರೆ ಉಪಯೋಗವಾಗಬಹುದು. ಶರತ್ ಬಂಡೆಗಳ ನಡುವೆ ಅಥವಾ ಅವುಗಳನ್ನು ಅಸರೆಯಾಗಿಸಿಕೊಂಡು ಸಿಲುಕಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 26, 2023 12:03 PM