ಫ್ಯಾಶನ್ ಐಕಾನ್ ಆಗಿದ್ದ ಪುನೀತ್ ರಾಜಕುಮಾರ್ಗೆ ಕೈಗಡಿಯಾರಗಳ ಮೇಲೆ ವಿಪರೀತ ಅನ್ನುವಷ್ಟು ವ್ಯಾಮೋಹವಿತ್ತು!
ಅಪ್ಪು ಅವರ ಬಳಿ ಕೈಗಡಿಯಾರಗಳ ದೊಡ್ಡ ಸಂಗ್ರಹವಿತ್ತು. ಹಾಗಂತ, ಅವರು ದುಬಾರಿ ವಿದೇಶೀ ವಾಚ್ ಗಳನ್ನು ಮಾತ್ರ ಧರಿಸುತ್ತಿದ್ದರು ಅಂತೇನಿಲ್ಲ. ಭಾರತದಲ್ಲಿ ತಯಾರಾಗುವ ಅಪ್ಪಟ ಮೇಕ್ ಇನ್ ಇಂಡಿಯಾ ವಾಚ್ ಗಳು ಅವರ ಬಳಿ ಬೇಕಾದಷ್ಟು ಸಂಖ್ಯೆಯಲ್ಲಿದ್ದವು.
ಶುಕ್ರವಾರದಂದು ನಮ್ಮನ್ನಗಲಿದ ಪುನೀತ್ ರಾಜ್ ಕುಮಾರ್ ನಿಸ್ಸಂದೇಹವಾಗಿ ಯೂಥ್ ಐಕಾನ್ ಆಗಿದ್ದರು. ಉಡುಗೆ-ತೊಡುಗೆ ಅವರ ವ್ಯಕ್ತಿತ್ವಕ್ಕೆ ವಿಶಿಷ್ಟ ಮೆರಗು ನೀಡುವಂತಿರುತ್ತಿದ್ದವು. ಹಲವಾರು ಉತ್ಪಾದನೆಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಮತ್ತು ಹಲವಕ್ಕೆ ಬ್ರ್ಯಾಂಡ್ ಅಂಬ್ಯಾಸಿಡರ್ ಕೂಡ ಆಗಿದ್ದರು. ಅಂದಹಾಗೆ, ಅವರಿಗೆ ಕೈಗಡಿಯಾರಗಳ ಬಗ್ಗೆಯಿದ್ದ ವ್ಯಾಮೋಹ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸೆಲಿಬ್ರಿಟಿಗಳ ಬದುಕು ಮತ್ತು ಜೀವನ ಶೈಲಿಯನ್ನು ಗಮನಿಸಿದ್ದೇಯಾದರೆ, ಅವರಿಗೆ ಭಿನ್ನ ಭಿನ್ನ ಹವ್ಯಾಸ, ವ್ಯಾಮೋಹ ಆಥವಾ ಯಾವುದೋ ವಸ್ತುವಿನ ಮೇಲೆ ಬಣ್ಣಿಸಲಾಗದಷ್ಟು ಪ್ರೀತಿ ಇರೋದು ಗೊತ್ತಾಗುತ್ತದೆ. ಕೆಲವರಿಗೆ ಕಾರು, ಬೇರೆ ಕೆಲವರಿಗೆ ಬೈಕ್ ಹೀಗೆ ಒಬ್ಬೊಬ್ಬರ ವ್ಯಾಮೋಹ ಒಂದೊಂದು ಬಗೆಯದ್ದಾಗಿರುತ್ತದೆ. ಅಪ್ಪುಗೆ ಕಾರುಗಳ ಹವ್ಯಾಸವಿತ್ತು ನಿಜ ಆದರೆ, ವಾಚ್ ಗಳ ಮೇಲೆ ಆವರಿಗಿದ್ದ ಉತ್ಕಟ ಪ್ರೀತಿ ಕಾರುಗಳ ಮೇಲಿನ ಪ್ರೀತಿಗಿಂತ ಬಹುಪಾಲು ಹೆಚ್ಚಿತ್ತು.
ಅಪ್ಪು ಅವರ ಬಳಿ ಕೈಗಡಿಯಾರಗಳ ದೊಡ್ಡ ಸಂಗ್ರಹವಿತ್ತು. ಹಾಗಂತ, ಅವರು ದುಬಾರಿ ವಿದೇಶೀ ವಾಚ್ ಗಳನ್ನು ಮಾತ್ರ ಧರಿಸುತ್ತಿದ್ದರು ಅಂತೇನಿಲ್ಲ. ಭಾರತದಲ್ಲಿ ತಯಾರಾಗುವ ಅಪ್ಪಟ ಮೇಕ್ ಇನ್ ಇಂಡಿಯಾ ವಾಚ್ ಗಳು ಅವರ ಬಳಿ ಬೇಕಾದಷ್ಟು ಸಂಖ್ಯೆಯಲ್ಲಿದ್ದವು. ದುಬಾರಿ ಅಂದಾಕ್ಷಣ ನೆನಪಾಗೋದು ಅವರ ಬಳಿಯಿದ್ದ ದಿ ಇಂಡಿಯನ್ ಹಾರೊಲೊಜಿ ವಾಚು. ಆದರ ಕಿಮ್ಮತ್ತು ನಾಲ್ಕೂವರೆ ಲಕ್ಷಕ್ಕಿಂತ ಜಾಸ್ತಿಯಂತೆ. ಅದಕ್ಕಿಂತಲೂ ದುಬಾರಿ ವಾಚ್ ಅಪ್ಪು ಅವರಲಿದ್ದಿರಬೇಕು. ನಮಗೆ ಗೊತ್ತಾಗಿರೋದು ಈ ವಾಚಿನ ಬೆಲೆ ಮಾತ್ರ.
ಸಮಾರಂಭಕ್ಕೆ ಅನುಗುಣವಾಗಿ ಅಪ್ಪು ವಾಚ್ ಧರಿಸುತ್ತಿದ್ದರು. ಸಿನಿಮಾ ಮುಹೂರ್ತಕ್ಕೆ ಒಂದು ಬಗೆಯ ವಾಚು, ಅವಾರ್ಡ್ ಫಂಕ್ಷನ್ ಗಳಿಗೆ ಬೇರೊಂದು ಬಗೆ. ಕನ್ನಟ ಕೋಟ್ಯಾಧಿಪತಿ ನಡೆಸುವಾಗ ಅವರು ಧರಿಸುತ್ತಿದ್ದ ವಾಚುಗಳನ್ನು ನೀವು ಗಮನಿಸಿರಬಹುದು. ಬಗೆಬಗೆಯ ವಾಚ್ ಗಳನ್ನು ಅವರ ಮುಂಗೈಯಲ್ಲಿ ಮಿಂಚುತ್ತಿದ್ದವು.
ಅಪ್ಪುಗೆ ವಾಚ್ ಗಳನ್ನು ಗಿಫ್ಟ್ ಮಾಡುವ ಅಭ್ಯಾಸವೂ ಇತ್ತು, ನಿರ್ದೇಶಕರಿಗೆ, ತಮ್ಮ ಆತ್ಮೀಯರಿಗೆ ಅವರು ಬೆಲೆಬಾಳುವ ಗಡಿಯಾರಗಳನ್ನು ನೀಡುತ್ತಿದ್ದರು. ಅವರಿಂದ ಗಿಫ್ಟ್ ಪಡೆದವರು ಅದನ್ನು ಧರಿಸುವಾಗಲೆಲ್ಲ ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ: ಜಿಮ್ನಲ್ಲಿ ಪುನೀತ್ ರಾಜ್ಕುಮಾರ್ ವರ್ಕೌಟ್: ಹೇಗಿರುತ್ತಿತ್ತು ಗೊತ್ತಾ ಅಪ್ಪು ಕಸರತ್ತು? ಇಲ್ಲಿದೆ ವಿಡಿಯೋ