ಪುನೀತ್ ರಾಜ್ಕುಮಾಗೆ ವಾಚ್ಗಳ ಹಾಗೆ, ಕಾರು ಮತ್ತು ಬೈಕ್ಗಳ ಮೇಲೂ ಅಪಾರ ವ್ಯಾಮೋಹವಿತ್ತು!
ಪ್ರಿನ್ಸ್ ಥರವೇ ಬೆಳೆದ ಪುನೀತ್ ಅವರಿಗೆ ವಾಚ್ ಗಳ ಹಾಗೆಯೇ, ಕಾರು ಮತ್ತು ಬೈಕ್ ಗಳ ಮೇಲೂ ಅಪಾರ ವ್ಯಾಮೋಹ. ಐಷಾರಾಮಿ ಕಾರುಗಳ ದಂಡೇ ಅವರಲ್ಲಿದೆ.
ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಸಾಮ್ರಾಟರಾಗಿದ್ದರೆ ಅವರ ಮಗ ಪುನೀತ್ ರಾಜ್ ಕುಮಾರ್ ಪ್ರಿನ್ಸ್ ಆಗಿರಲೇಬೇಕು ತಾನೇ? ಹೌದು, ಅಪ್ಪು ತಮ್ಮ ಬಾಯಲ್ಲಿ ಬೆಳ್ಳಿ ಚಮಚೆಯಿಟ್ಟುಕೊಂಡೇ ಹುಟ್ಟಿದವರು. ರಾಜ್ ಕುಟುಂಬದಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಅಣ್ಣಾವ್ರು ಬೇಕಾದಷ್ಟು ಸಂಪಾದನೆ ಮಾಡಿದ್ದರು ಮತ್ತು ಪಾರ್ವತಮ್ಮ ರಾಜಕುಮಾರ ಹೆಸರಾಂತ ನಿರ್ಮಾಪಕಿಯಾಗಿದ್ದರು. ವಜ್ರೇಶ್ವರಿ ಕಂಬೈನ್ಸ್ ಅವರೇ ಹುಟ್ಟುಹಾಕಿದ ಸಂಸ್ಥೆ. ಇದನ್ನು ಯಾಕೆ ಹೇಳಬೇಕಾಗಿದೆ ಅಂದರೆ, ಪ್ರಿನ್ಸ್ ಥರವೇ ಬೆಳೆದ ಪುನೀತ್ ಅವರಿಗೆ ವಾಚ್ ಗಳ ಹಾಗೆಯೇ, ಕಾರು ಮತ್ತು ಬೈಕ್ ಗಳ ಮೇಲೂ ಅಪಾರ ವ್ಯಾಮೋಹ. ಐಷಾರಾಮಿ ಕಾರುಗಳ ದಂಡೇ ಅವರಲ್ಲಿದೆ. ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ.
ಅವರ ಮನೆಯ ಪಾರ್ಕಿಂಗ್ ಲಾಟ್ ನಲ್ಲಿ ಪಾರ್ಕ್ ಅಗಿರುವ ನೀಲಿ ಬಣ್ಣದ ಈ ಎರಡು ಕಾರುಗಳನ್ನು ನೋಡಿ. ನೀಲಿ ಬಣ್ಣ ಅವರಿಗೆ ತುಂಬಾ ಇಷ್ಟವಾಗಿತ್ತು ಅಂತ ಕಾಣುತ್ತೆ. ಅವರಲ್ಲಿರುವ ಕಾರುಗಳ ಪೈಕಿ ಹೆಚ್ಚಿನವು ನೀಲಿ ಬಣ್ಣದವುಗಳಾಗಿವೆ. ಅವರ ಫ್ಲೀಟ್ ನಲ್ಲಿರುವ ಒಂದು ಐಷಾರಾಮಿ ಆಡಿ ಕ್ಯೂ ಎಸ್ 7 ಕಾರಿದೆ. ಇದರ ಬೆಲೆ ರೂ 81.11 ಲಕ್ಷ. ಅವರ ಇನ್ನೊಂದು ಲಕ್ಸುರಿ ಕಾರು ರೂ. 94.15 ಲಕ್ಷ ಬೆಲೆಯ ಬಿ ಎಮ್ ಡಬ್ಲ್ಯೂ ಎಕ್ಸ್6 ಎಸ್ ಯುವಿ.
ಅವರಲ್ಲಿರುವ ಹಳದಿ ಜಾಗ್ವಾರ್ ಸಹ ಪ್ರತಿಷ್ಠಿತ ಮತ್ತು ಐಷಾರಾಮಿ ಕಾರಾಗಿದ್ದು ಅದರ ಬೆಲೆ ರೂ. 49.78 ಲಕ್ಷ. ರೇಂಜ್ ರೋವರ್ ವೋಗ್ ಎಸ್ ಯು ವಿ ಕಾರಿನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅದೂ ಸಹ ಪುನೀತ್ ಅವರ ಮನೆಯಲ್ಲಿದೆ. ಅಂದಹಾಗೆ, ಅದರ ಬೆಲೆ ಬರೋಬ್ಬರಿ 80 ಲಕ್ಷ ರೂ.
ಒಮ್ಮೆ ಮಹಿಳಾ ದಿನಾಚರಣಯೆ ಸಂದರ್ಭದಲ್ಲಿ ಪುನೀತ್ ತಮ್ಮ ಪ್ರಿಯ ಮಡದಿ ಅಶ್ವಿನಿ ಅವರಿಗೆ ಲ್ಯಾಂಬ್ರೊಜಿನಿ ಉರಸ್ ಕಾರು ಗಿಫ್ಟ್ ಮಾಡಿದ್ದರು. ಇದರ ಆರಂಭಿಕ ಬೆಲೆಯೇ ರೂ. 3.15 ಕೋಟಿ!
ಇದಲ್ಲದೆ, ಪುನೀತ್ ಅವರು ರೂ. 13.45 ಲಕ್ಷ ಬೆಲೆಯ ಒಂದು ಇಂಡಿyನ್ ಸ್ಕೌಟ್ ಬೊಬರ್ ಸಹ ಹೊಂದಿದ್ದರು. ಆದರೆ, ಸ್ಟಾರ್ ಆಗುವ ಮೊದಲು ಅವರು ರಾಜದೂತ್ ಬೈಕ್ ಮೇಲೆ ಬೆಂಗಳೂರು ಪ್ರದಕ್ಷಿಣೆ ಹಾಕುತ್ತಿದ್ದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ನಾನ್ವೆಜ್ ಎಂದರೆ ಅದೆಷ್ಟು ಪ್ರೀತಿಯಾಗಿತ್ತು; ಇಲ್ಲಿದೆ ವಿಡಿಯೋ