ಬೆಳಗಾವಿ: ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಮಳೆಗಾಲದಲ್ಲಿ ಜಲಪಾತಗಳ ಸನಿಹಕ್ಕೂ ಹೋಗಬಾರದು. ಮೇಲಿಂದ ನೀರು ರಭಸದಿಂದ ಕೆಳಕ್ಕೆ ಬೀಳುವುದರಿಂದ ಕಲ್ಲು ಬಂಡೆಗಳು ನುಣುಪಾಗಿರುತ್ತವೆ. ಕಾಲು ಜಾರುವ ಅಪಾಯವಂತೂ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ಅರಣ್ಯ ಇಲಾಖೆಯು ಎಚ್ಚರಿಕೆಯ ಬೋರ್ಡ್ ಗಳನ್ನು ಜಲಪಾತಗಳ ಬಳಿ ಅಳವಡಿಸಿರುತ್ತದೆ. ಆದರೆ ಅದನ್ನು ಗಮನಿಸುವ ಓದುವ ಮತ್ತು ಗ್ರಹಿಸಿಕೊಳ್ಳುವ ವ್ಯವಧಾನ ಯುವಕರಲ್ಲಿ ಇರಲ್ಲ.
ಬೆಳಗಾವಿ: ಈ ಜಲಪಾತವನ್ನು ನೋಡಿದರೆ ಪಿಬಿ ಶ್ರೀನಿವಾಸ್ ಮತ್ತು ಪಿ ಸುಶೀಲಾ ಹಾಡಿರುವ …ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ ದುಂಬಿಯ ಹಾಡಿನ ಝೇಂಕಾರದಲ್ಲೂ….. ಹಾಡಿನ ಸಾಲುಗಳು ನೆನಪಾಗಬೇಕು. ಇದು ಪುಟ್ಟಣ ಕಣಗಾಲ್ ನಿರ್ದೇಶನದ ‘ಒಲವೇ ಜೀವನ ಸಾಕ್ಷಾತ್ಕಾರ’ ಚಿತ್ರ ಮತ್ತು ಆ ಜಮಾನಾದ ಸುಮಧುರ ಸೂಪರ್ ಹಿಟ್ ಹಾಡು. ಚಿತ್ರದ ಸನ್ನಿವೇಶ ಬೇರೆ ಇದೆ ಆ ವಿಚಾರ ಬೇರೆ. ಅಲ್ಲಿ ಜಲಪಾತ ನಮಗೆ ಕಾಣಲಾರದು, ನಾಯಕಿಯ ಕಣ್ಣೀರು ಕಾಣುತ್ತದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಗೋಡಚಿನಮಲ್ಕಿ ಜಲಪಾತ ನೋಡುವಾಗ ಈ ಹಾಡು ನೆನಪಾದರೆ ಆಶ್ಚರ್ಯವಿಲ್ಲ. ಅದರೆ ರಭಸದಿಂದ ಧುಮ್ಮುಕ್ಕುತ್ತಿರುವ ಜಲಪಾತದಲ್ಲಿ ಯುವಕನೊಬ್ಬ ಹುಚ್ಚು ಸಾಹಸಕ್ಕಿಳಿದಿದ್ದಾನೆ. ಮತ್ತೂ ಸೋಜಿಗದ ಸಂಗತಿಯೆಂದರೆ ಅವನು ಮೀನು ಹಿಡಿಯುವ ಉದ್ದೇಶದಿಂದ ಈ ಕಸರತ್ತು ಮಾಡುತ್ತಿದ್ದಾನೆ. ಹಿಡಿದ ಮೀನುಗಳನ್ನು ಅವನು ಬ್ಯಾಗೊಂದರಲ್ಲಿ ಹಾಕುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ. ಮೀನು ಹಿಡಿಯಲು ಅವನಿಗೆ ಯಾವುದೇ ಕೆರೆ, ಹಳ್ಳ-ಕೊಳ್ಳ ಸಿಗಲಿಲ್ಲವೇ? ಬಹಳ ಅಪಾಯಕಾರಿ ರಿಸ್ಕ್ ಯುವಕ ತೆಗೆದುಕೊಂಡಿದ್ದಾನೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Shocking Video: ಪಿಕ್ನಿಕ್ ಹೋದ ಒಂದೇ ಕುಟುಂಬದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್