Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾರ್ಟರ್​​​ ಕೊಡ್ತೀಯಾ, ಚಾಕು ಹಾಕಲಾ? ವೈನ್ ಶಾಪ್​ನಲ್ಲಿ ಯುವಕನ ರಂಪಾಟ! ವಿಡಿಯೋ ವೈರಲ್

ಕ್ವಾರ್ಟರ್​​​ ಕೊಡ್ತೀಯಾ, ಚಾಕು ಹಾಕಲಾ? ವೈನ್ ಶಾಪ್​ನಲ್ಲಿ ಯುವಕನ ರಂಪಾಟ! ವಿಡಿಯೋ ವೈರಲ್

ಸಾಧು ಶ್ರೀನಾಥ್​
|

Updated on: Aug 28, 2023 | 2:42 PM

Viral Video: ಅದಾಗಲೇ ಕುಡಿದ ಮತ್ತಿನಲ್ಲಿದ್ದ ಮಧು ಬಾರ್ ಶಾಪ್ ಗೆ ಬಂದು ಎಣ್ಣೇ ಬಾಟಲಿ ಕೇಳಿದ್ದಾನೆ. ಸಿಬ್ಬಂದಿ ಹಣ ಕೇಳಿದಾಗ ‘ನನ್ನನ್ನೇ ಹಣ ಕೇಳುತ್ತೀರಾ’ ಎಂದು ಕೂಗಾಡಿ, ಅಲ್ಲಿಂದ ತೆರಳಿದ್ದಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ಚಾಕು ಹಿಡಿದು ಬಂದು ಕ್ಯಾಷಿಯರ್ ಗೆ ಕ್ವಾರ್ಟರ್ ಕೊಡಿ ಇಲ್ಲವಾದಲ್ಲಿ ಸಾಯಿಸಿಬಿಡುವೆ ಎಂದು ತಲವಾರ್ ಝಳಪಿಸುತ್ತಾ, ಬೆದರಿಕೆ ಹಾಕಿದ್ದಾನೆ.

ವಾರಂಗಲ್ ನಗರದ ಬಾರ್ ಅಂಗಡಿಯೊಂದರಲ್ಲಿ ಮಧು ಎಂಬ ವ್ಯಕ್ತಿ ತಲ್ವಾರ್ ಹಿಡಿದು ಗಲಾಟೆ ಮಾಡಿದ್ದಾನೆ.. ಇಡೀ ಬಾರ್ ಶಾಪ್ ತುಂಬಿತುಳುಕುತ್ತಿದ್ದಾಗ ಈ ರಾದ್ಧಾಂತ ಮಾಡಿದ್ದಾನೆ. ಮಧು ಎಂಬ ಸದರಿ ಯುವಕ (Youth) ಎಳನೀರು ವ್ಯಾಪಾರ ಮಾಡುತ್ತಾನೆ. ಅದಾಗಲೇ ಕುಡಿದ ಮತ್ತಿನಲ್ಲಿದ್ದ ಮಧು ಬಾರ್ ಶಾಪ್ (Wine Shop) ಗೆ ಬಂದು ಎಣ್ಣೇ ಬಾಟಲಿ (Liquor) ಕೇಳಿದ್ದಾನೆ.

ಸಿಬ್ಬಂದಿ ಹಣ ಕೇಳಿದಾಗ ‘ನನ್ನನ್ನೇ ಹಣ ಕೇಳುತ್ತೀರಾ’ ಎಂದು ಕೂಗಾಡಿ, ಅಲ್ಲಿಂದ ತೆರಳಿದ್ದಾನೆ. ಆದರೆ ಸ್ವಲ್ಪ ಹೊತ್ತಿನ ನಂತರ ಚಾಕು (Knife) ಹಿಡಿದು ಬಂದು ಕ್ಯಾಷಿಯರ್ ಗೆ ಕ್ವಾರ್ಟರ್ ಕೊಡಿ ಇಲ್ಲವಾದಲ್ಲಿ ಸಾಯಿಸಿಬಿಡುವೆ ಎಂದು ತಲವಾರ್ ಝಳಪಿಸುತ್ತಾ, ಬೆದರಿಕೆ ಹಾಕಿದ್ದಾನೆ. ಕ್ಯಾಷಿಯರ್ ರಂಜಿತ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ