National Youth Festival: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅವರಣದಲ್ಲಿ ಬೇರೆ ಬೇರೆ ರಾಜ್ಯಗಳ ಯುವಕ-ಯುವತಿಯರು

National Youth Festival: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅವರಣದಲ್ಲಿ ಬೇರೆ ಬೇರೆ ರಾಜ್ಯಗಳ ಯುವಕ-ಯುವತಿಯರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 12, 2023 | 1:17 PM

ರಾಜಸ್ತಾನದಿಂದ ಬಂದಿರುವ ಯುವಕರೊಬ್ಬರು ಪ್ರತಿನಿಧಿಗಳಿಗೆ ಮಾಡಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ (UAS Dharwad) ಅವರಣವು ದೇಶದ ಎಲ್ಲ ರಾಜ್ಯಗಳಿಂದ ಬಂದಿರುವ ಸುಂದರ ಮತ್ತು ಲವಲವಿಕೆಯಿಂದ ಪುಟಿಯುತ್ತಿರುವ ಯುವಕ ಯುವತಿಯರಿಂದ ಕಂಗೊಳಿಸುತ್ತಿದೆ. ಅವರೆಲ್ಲ ಅಗಮಿಸಿರುವ ಕಾರಣ ನಿಮಗೆ ಗೊತ್ತಿದೆ. ಇಂದಿನಿಂದ 5 ದಿನಗಳ ಕಾಲ ಯುವಜನೋತ್ಸವ (Youth Festival) ನಡೆಯಲಿದ್ದು ಯುಬ ಪ್ರತಿನಿಧಿಗಳಿಗೆ ತಂಗುವ ವ್ಯವಸ್ಥೆ ಕೃಷಿ ವಿವಿಯಲ್ಲಿ ಮಾಡಲಾಗಿದೆ. ಟಿವಿ9 ಧಾರವಾಡ ವರದಿಗಾರ ಕ್ಯಾಂಪಸ್ ನಲ್ಲಿ (campus) ಮೂಡ್ ಹೇಗಿದೆ ಅನ್ನೋದನ್ನು ಈ ವರದಿಯಲ್ಲಿ ತಿಳಿಸಿದ್ದಾರೆ ಮತ್ತು ಬೇರೆ ರಾಜ್ಯದ ಕೆಲ ಯುವಕರೊಂದಿಗೆ ಮಾತಾಡಿದ್ದಾರೆ. ರಾಜಸ್ತಾನದಿಂದ ಬಂದಿರುವ ಯುವಕರೊಬ್ಬರು ಪ್ರತಿನಿಧಿಗಳಿಗೆ ಮಾಡಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದ್ದಾರೆ. ಅವರು ಹೇಳುವುದನ್ನು ಕೇಳಿಸಿಕೊಳ್ಳಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ