ಕೊಪ್ಪಳದಲ್ಲಿ ಫೋಟೋಗಾಗಿ ಜನರ ದುಸ್ಸಾಹಸ; ಕಪಾಳ ಮೋಕ್ಷ ಮಾಡಿದ್ದರೂ ಡೋಂಟ್ ಕೇರ್
ಈ ಸೇತುವೆ ಮುನಿರಾಬಾದ್ - ಟಿಬಿ ಡ್ಯಾಂಗೆ ಸಂಪರ್ಕ ಕಲ್ಪಿಸುತ್ತದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಸೇತುವೆ ಮೇಲೆ ಓಡಾಡುತ್ತಿದ್ದ ಯುವಕರಿಗೆ ಇಇ ಅಧಿಕಾರಿ ಕರೆದು ಕಪಾಳ ಮೋಕ್ಷ ಮಾಡಿದ್ದರು.
ರಭಸವಾಗಿ ನೀರು ಹರಿಯುತ್ತಿದ್ದರೂ ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್ ಬಳಿ ಜನರು ದುಸ್ಸಾಹಸ ಮೆರೆಯುತ್ತಿದ್ದಾರೆ. ಕಿರು ಸೇತುವೆ ಮೇಲೆ ನಿಂತು ಫೋಟೋ (Photo) ತೆಗೆದುಕೊಳ್ಳುತ್ತಿದ್ದಾರೆ. ತುಂಗಭದ್ರಾ ಜಲಾಶಯದ ಮುಂಭಾಗ ಕಿರು ಸೇತುವೆ ಇದೆ. ಈ ಸೇತುವೆ ಮುನಿರಾಬಾದ್ – ಟಿಬಿ ಡ್ಯಾಂಗೆ ಸಂಪರ್ಕ ಕಲ್ಪಿಸುತ್ತದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಸೇತುವೆ ಮೇಲೆ ಓಡಾಡುತ್ತಿದ್ದ ಯುವಕರಿಗೆ ಇಇ ಅಧಿಕಾರಿ ಕರೆದು ಕಪಾಳ ಮೋಕ್ಷ ಮಾಡಿದ್ದರು. ಆದರೂ ಯುವಕ, ಯುವತಿಯರು ಮತ್ತೆ ಅದೇ ಸೇತುವ ಮೇಲೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಅಪಾಯ ಲೆಕ್ಕಿಸದೇ ಕಿರು ಸೇತುವೆ ಮೇಲೆ ನಿಂತು ಪೋಸ್ ಕೊಡುತ್ತಿದ್ದಾರೆ. ಸೇತುವೆ ಬಿರುಕು ಬಿಟ್ಟಿದ್ದು, ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಿದ್ದರೂ ಜನರು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ.
ಇದನ್ನೂ ಓದಿ: Sini Shetty: ಮಿಸ್ ಇಂಡಿಯಾ ಸುಂದರಿ ಸಿನಿ ಶೆಟ್ಟಿ ಬಂದು ಪೋಸ್ ಕೊಟ್ಟರೂ ಡೋಂಟ್ ಕೇರ್ ಎಂದ ಬಾಲಕ