ತುಳು ಭಾಷೆಗೆ ವಿರೋಧ ಇದೆಯೇ? ಸ್ಪಷ್ಟನೆ ಕೊಟ್ಟ ನಟ ಝೈದ್ ಖಾನ್
Cult Kannada movie: ನಟ ಝೈದ್ ಖಾನ್ ತಮ್ಮ ನಟನೆಯ ‘ಕಲ್ಟ್’ ಸಿನಿಮಾ ಪ್ರಚಾರದಲ್ಲಿದ್ದು, ಝೈದ್ ಖಾನ್ ಅವರಿಗೆ ಶಿಡ್ಲಘಟ್ಟದಲ್ಲಿ ನಡೆದಿರುವ ಘಟನೆಯಿಂದ ಹಿನ್ನಡೆ ಆಗಿದೆ.ಇದೀಗ ಝೈದ್ ಖಾನ್ಗೆ ತುಳು ಭಾಷೆಯ ಬಗ್ಗೆ ವಿರೋಧ ಇದೆ ಎಂಬ ಆರೋಪವೂ ಎದುರಾಗಿದ್ದು, ಆ ಬಗ್ಗೆ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಝೈದ್ ಖಾನ್ ನಟನೆಯ ‘ಕಲ್ಟ್’ (Cult) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಝೈದ್ ಖಾನ್ (Zaid Khan) ಅವರು ಸಿನಿಮಾಕ್ಕಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಶಿಡ್ಲಘಟ್ಟದಲ್ಲಿ ನಡೆದಿರುವ ಘಟನೆ ಝೈದ್ ಖಾನ್ಗೆ ನೆಗೆಟಿವ್ ಆಗಿದೆ. ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ, ಮಹಿಳಾ ಅಧಿಕಾರಿಗೆ ಹಾಕಿರುವ ಬೆದರಿಕೆಗೆ ಇದೀಗ ಝೈದ್ ಖಾನ್ ಸಹ ಕ್ಷಮೆ ಕೋರಿದ್ದಾರೆ. ಝೈದ್ ಖಾನ್ ಅವರು ಪ್ರಚಾರದ ಸಮಯದಲ್ಲಿಯೂ ಸಹ ಸತತವಾಗಿ ಇಂಥಹಾ ಪ್ರಶ್ನೆಗಳನ್ನೇ ಎದುರಿಸುತ್ತಿದ್ದು, ಇದೀಗ ಝೈದ್ ಖಾನ್ಗೆ ತುಳು ಭಾಷೆಯ ಬಗ್ಗೆ ವಿರೋಧ ಇದೆ ಎಂಬ ಆರೋಪವೂ ಎದುರಾಗಿದ್ದು, ಆ ಬಗ್ಗೆ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
