ಬಾಲಿವುಡ್ನಲ್ಲಿ ಕಲ್ಟ್ ನಿರ್ದೇಶಕ, ದಕ್ಷಿಣದಲ್ಲಿ ಬೇಡಿಕೆಯ ವಿಲನ್
Anurag Kashyap: ಬಾಲಿವುಡ್ನ ಪ್ರತಿಭಾವಂತ ಆದರೆ ಅಂಡರ್ ರೇಟೆಡ್ ನಿರ್ದೇಶಕ ಅನುರಾಗ್ ಕಶ್ಯಪ್, ಇತ್ತೀಚೆಗಿನ ಸಂದರ್ಶನದಲ್ಲಿ ತಾವು ಬಾಲಿವುಡ್ ತೊರೆದು ದಕ್ಷಿಣ ಭಾರತ ಚಿತ್ರರಂಗಕ್ಕೆ ಶಿಫ್ಟ್ ಆಗುವುದಾಗಿ ಹೇಳಿಕೊಂಡಿದ್ದರು. ಇಲ್ಲಿ ನಿರ್ದೇಶಕನಾಗಿ ನೆಲೆಗೊಳ್ಳುವ ಮೊದಲೇ ನಟನಾಗಿ ಬ್ಯುಸಿಯಾಗಿದ್ದಾರೆ. ಅನುರಾಗ್ ಕಶ್ಯಪ್ ನಟಿಸುತ್ತಿರುವ ಸಿನಿಮಾ ಯಾವುದು? ಪಾತ್ರ ಯಾವುದು?

ಬಾಲಿವುಡ್ನ ಬಲು ಹೆಸರಾಂತ ನಿರ್ದೇಶಕ ಅನುರಾಗ್ ಕಶ್ಯಪ್. ‘ಗ್ಯಾಂಗ್ ಆಫ್ ವಸೇಪುರ್’ ಸೇರಿದಂತೆ ಹಲವು ಕಲ್ಟ್ ಸಿನಿಮಾಗಳನ್ನು ಬಾಲಿವುಡ್ಗೆ ನೀಡಿದ್ದಾರೆ. ಮೊದಲಿನಿಂದಲೂ ಬಾಲಿವುಡ್ನ ರೀತಿ-ಪದ್ಧತಿಗಳನ್ನು ಟೀಕಿಸುತ್ತಾ, ವಿರೋಧಿಸುತ್ತಾ ಬಂದಿರುವ ಅನುರಾಗ್ ಕಶ್ಯಪ್, ದಕ್ಷಿಣ ಭಾರತದವರ ಸಿನಿಮಾ ಮೇಕಿಂಗ್ ಅನ್ನು ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಸಹ ತಮ್ಮ ಸಂದರ್ಶನದಲ್ಲಿ ತಾವು, ದಕ್ಷಿಣ ಭಾರತ ಚಿತ್ರರಂಗಕ್ಕೆ ಶಿಫ್ಟ್ ಆಗುವುದಾಗಿ ಹೇಳಿದ್ದರು. ನಿರ್ದೇಶಕರಾಗಿ ದಕ್ಷಿಣ ಭಾರತದಲ್ಲಿ ಇನ್ನೂ ಕೆಲಸ ಆರಂಭಿಸಿಲ್ಲ ಅನುರಾಗ್, ಆದರೆ ನಟರಾಗಿ ಬ್ಯುಸಿ ಆಗುತ್ತಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಇಶೇಷವಾಗಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹಲವು ಗೆಳೆಯರನ್ನು ಹೊಂದಿರುವ ಅನುರಾಗ್ ಕಶ್ಯಪ್, ಈ ಹಿಂದೆ ತಮಿಳಿನ ‘ಇಮೈಕ ನೋಡಿಗಲ್’ ಥ್ರಿಲ್ಲರ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರಿಗೆ ಭರ್ಜರಿ ಹೆಸರು ತಂದುಕೊಟ್ಟ ಸಿನಿಮಾ ಕಳೆದ ವರ್ಷ ಬಿಡುಗಡೆ ಆದ ತಮಿಳಿನ ‘ಮಹಾರಾಜ’ ಸಿನಿಮಾ. ಆ ಸಿನಿಮಾದಲ್ಲಿ ಅನುರಾಗ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.
ಆ ಸಿನಿಮಾದ ಬಳಿಕ ಅನುರಾಗ್ ಕಶ್ಯಪ್ಗೆ ಹಲವು ಸಿನಿಮಾ ಅವಕಾಶಗಳು ಬರುತ್ತಿವೆ. ಇದೀಗ ತೆಲುಗು ಸಿನಿಮಾ ಒಂದರ ಅವಕಾಶ ಅನುರಾಗ್ ಕಶ್ಯಪ್ಗೆ ಬಂದಿದ್ದು, ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಅಡವಿ ಶೇಷ್ ನಾಯಕನಾಗಿ ನಟಿಸಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿರುವ ‘ಡಕೋಯ್ಟ್’ ಸಿನಿಮಾದ ವಿಲನ್ ಪಾತ್ರದಲ್ಲಿ ಅನುರಾಗ್ ಕಶ್ಯಪ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಅವರದ್ದು ಇನ್ಸ್ಪೆಕ್ಟರ್ ಸ್ವಾಮಿ ಪಾತ್ರ. ಮಾಲೆ ಧರಿಸಿ, ಕಪ್ಪು ಉಡುಗೆ ತೊಟ್ಟು ಭಯ ಹುಟ್ಟಿಸುವಂತೆ ಕಾಣಿಸುತ್ತಿದ್ದಾರೆ ಅನುರಾಗ್ ಕಶ್ಯಪ್.
ಇದನ್ನೂ ಓದಿ:ಒಂದೇ ಸಿನಿಮಾದಿಂದ ನೂರು ಕೋಟಿ ರೂಪಾಯಿ ಕಳೆದಿದ್ದ ಅನುರಾಗ್ ಕಶ್ಯಪ್
‘ಡಕೋಯ್ಟ್’ ಸಿನಿಮಾದ ಜೊತೆಗೆ ತಮಿಳಿನಲ್ಲಿ ‘ಒನ್ ಟು ಒನ್’ ಹೆಸರಿನ ಸಿನಿಮಾದಲ್ಲಿಯೂ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಮಾತ್ರವಲ್ಲದೆ ಆಸ್ಕರ್ ವಿಜೇತ ನಿರ್ದೇಶಕನ ಮುಂದಿನ ಹಾಲಿವುಡ್ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ನಟಿಸುತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಅಲೆಕ್ಸಾಂಡ್ರಿಯೊ ಗಾಂಜಾಲ್ವೆಸ್ ಹಿನ್ಯಾರಿತೊ ಅವರ ಮುಂದಿನ ಸಿನಿಮಾದಲ್ಲಿ ಅನುರಾಗ್ ಕಶ್ಯಪ್ ನಟಿಸಲಿದ್ದಾರೆ. ಈ ಅವಕಾಶವೂ ಸಹ ಅವರಿಗೆ ‘ಮಹಾರಾಜ’ ಸಿನಿಮಾದಿಂದಲೇ ದೊರೆತಿದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Fri, 28 February 25




