Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಸಿನಿಮಾದಿಂದ ನೂರು ಕೋಟಿ ರೂಪಾಯಿ ಕಳೆದಿದ್ದ ಅನುರಾಗ್ ಕಶ್ಯಪ್

ಅನುರಾಗ್ ಕಶ್ಯಪ್ ಅವರ ವೃತ್ತಿ ಜೀವನದ ದೊಡ್ಡ ಫ್ಲಾಪ್ ಎಂದರೆ ಅದು ‘ಬಾಂಬೆ ವೆಲ್ವೆಟ್’ ಚಿತ್ರ. ಈ ಸಿನಿಮಾ ರಿಲೀಸ್ ಆಗಿದ್ದು 2015ರಲ್ಲಿ. ಈ ಚಿತ್ರದ ಬಜೆಟ್ ಬರೋಬ್ಬರಿ 125 ಕೋಟಿ ರೂ.. ಸಣ್ಣ ಬಜೆಟ್​ನ ಸಿನಿಮಾ ಮಾಡುತ್ತಿದ್ದ ಅವರು ಒಮ್ಮೆಲೇ ದೊಡ್ಡ ಬಜೆಟ್ ಸಿನಿಮಾ ಮಾಡಿದ್ದರು.

ಒಂದೇ ಸಿನಿಮಾದಿಂದ ನೂರು ಕೋಟಿ ರೂಪಾಯಿ ಕಳೆದಿದ್ದ ಅನುರಾಗ್ ಕಶ್ಯಪ್
ಅನುರಾಗ್ ಕಶ್ಯಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 10, 2024 | 7:39 AM

ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಇಂದು (ಸೆಪ್ಟೆಂಬರ್ 10) ಬರ್ತ್​ಡೇ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟನೆಯ ಮೂಲಕ ಅವರು ಗಮನ ಸೆಳೆದಿದ್ದಾರೆ. ಅವರು ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದು ಕಡಿಮೆ. ಇದಕ್ಕೆ ಕಾರಣ ಏನು ಎಂದು ಅವರು ಹೇಳಿದ್ದರು. 1997ರಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ದೊಡ್ಡ ಬಜೆಟ್ ಸಿನಿಮಾ ಮಾಡಿ ಈ ಮೊದಲು ಕೈ ಸುಟ್ಟುಕೊಂಡಿದ್ದರು.

ಅನುರಾಗ್ ಕಶ್ಯಪ್ ಅವರ ದೊಡ್ಡ ಫ್ಲಾಪ್ ಎಂದರೆ ಅದು ‘ಬಾಂಬೆ ವೆಲ್ವೆಟ್’ ಸಿನಿಮಾ. ಈ ಸಿನಿಮಾ ರಿಲೀಸ್ ಆಗಿದ್ದು 2015ರಲ್ಲಿ. ಈ ಚಿತ್ರದ ಬಜೆಟ್ ಬರೋಬ್ಬರಿ 125 ಕೋಟಿ ರೂಪಾಯಿ. ಸಣ್ಣ ಬಜೆಟ್​ನ ಸಿನಿಮಾ ಮಾಡುತ್ತಿದ್ದ ಅವರು ಒಮ್ಮೆಲೇ ದೊಡ್ಡ ಬಜೆಟ್ ಸಿನಿಮಾ ಮಾಡಿದ್ದರು. ಈ ಸಿನಿಮಾದ ಕಲೆಕ್ಷನ್ 25 ಕೋಟಿ ರೂಪಾಯಿ ಕೂಡ ದಾಟಿರಲಿಲ್ಲ. ಈ ಸಿನಿಮಾದಿಂದ ನಿರ್ಮಾಪಕರಿಗೆ 100 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು. ಇದು ಅನುರಾಗ್ ಕಶ್ಯಪ್ ವೃತ್ತಿ ಜೀವನದ ದೊಡ್ಡ ಸೋಲುಗಳಲ್ಲಿ ಒಂದು.

ಅನುರಾಗ್ ಕಶ್ಯಪ್ ಅವರಿಗೆ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅಂಥ ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ, ವರ್ಷ ಕಳೆದಂತೆ ಅದು ಕಡಿಮೆ ಆಯಿತು. ಇದಕ್ಕೆ ಕಾರಣ ಆಗಿರೋದು  ಸ್ಟಾರ್​ಗಳಿಗೆ ಇರೋ ಅಭಿಮಾನಿ ಬಳಗದ ಮೇಲಿನ ಭಯದಿಂದ. ಮಾಡಿದ ಸಿನಿಮಾ ಯಶಸ್ಸು ಕಾಣಲಿಲ್ಲ ಅಥವಾ ಹೀರೋಗೆ ಬೇಕಾದ ರೀತಿಯ ಪಂಚ್ ಲೈನ್​ಗಳನ್ನು ಇಟ್ಟಿಲ್ಲ ಎಂದರೆ ಫ್ಯಾನ್ಸ್ ಕೋಪ ಮಾಡಿಕೊಳ್ಳುತ್ತಾರೆ. ಈ ಭಯ ಅವರಿಗೆ ಇದೆ.

‘ಸ್ಲಂ ಡಾಗ್ ಮಿಲಿಯನೇರ್’ ಹೆಸರಿನ ಸಿನಿಮಾ ಆಸ್ಕರ್ ಗೆದ್ದಿತ್ತು. ಇದರ ನಿರ್ದೇಶಕ ಮಾತನಾಡುವಾಗ ಅನುರಾಗ್ ಕಶ್ಯಪ್ ಅವರು ಬರೆದ ‘ಸತ್ಯ’ ಹಾಗೂ ಅವರು ನಿರ್ದೇಶಿಸಿದ ‘ಬ್ಲ್ಯಾಕ್ ಫ್ರೈಡೇ’ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿರೋದಾಗಿ ಹೇಳಿದ್ದರು.

ಇದನ್ನೂ ಓದಿ: ಸಲ್ಮಾನ್, ಶಾರುಖ್ ಜೊತೆ ಸಿನಿಮಾ ಮಾಡಲ್ಲ ಅನುರಾಗ್ ಕಶ್ಯಪ್; ಕಾರಣ ತಿಳಿಸಿದ ನಿರ್ದೇಶಕ

ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ ‘ಗ್ಯಾಂಗ್ ಆಫ್ ವಸ್ಸೇಪುರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆಯಿತು. ಈ ಸಿನಿಮಾದಿಂದ ಅನೇಕ ಕಲಾವಿದರ ಬದುಕು ಯಶಸ್ಸು ಕಂಡಿತು. ಸದ್ಯ ಅನುರಾಗ್ ಕಶ್ಯಪ್ ಅವರ ನಟನೆಯ ‘ಮಹರಾಜ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇಡೀ ಸಿನಿಮಾದುದ್ದಕೂ ಅವರು ಕಾಣಿಸಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ