‘ಸುಳ್ಳು ಹೇಳುವವರ ಜೊತೆ ಜೀವನ ಮಾಡಲು ಸಾಧ್ಯವಿಲ್ಲ’; ತಮನ್ನಾಗೆ ಏನಾಯ್ತು?
ತಮನ್ನಾ ಹಾಗೂ ವಿಜಯ್ ವರ್ಮಾ ಅವರ ಪ್ರೀತಿಗೆ ಹಲವು ವರ್ಷಗಳು ಕಳೆದಿವೆ. ಇವರು ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮೊದಲು ಅವರಿಗೆ ಹಾರ್ಟ್ಬ್ರೇಕ್ ಆಗಿದೆ. ಇದರಿಂದ ಅವರು ಜೀವನದ ಪಾಠವನ್ನು ಕಲಿತಿದ್ದಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ತಮನ್ನಾ ಭಾಟಿಯಾ ಅವರು ಬಾಲಿವುಡ್ನಲ್ಲಿ, ದಕ್ಷಿಣದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಇತ್ತೀಚೆಗೆ ವಿಶೇಷ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಸ್ತ್ರೀ 2’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ಜೊತೆಗೆ ಅವರು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಅವರು ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಮೊದಲು ಅವರಿಗೆ ಹಾರ್ಟ್ಬ್ರೇಕ್ ಆಗಿದೆ. ಇದರಿಂದ ಅವರು ಜೀವನದ ಪಾಠವನ್ನು ಕಲಿತಿದ್ದಾರೆ.
‘ನಿಮ್ಮ ಪಾರ್ಟ್ನರ್ನ ಬದಲಿಸುವ ಪ್ರಯತ್ನವನ್ನು ನೀವು ಮಾಡಬಾರದು. ನಿಮಗೆ ಹೇಗೆ ಪರ್ಫೆಕ್ಟ್ ಕಾಣುತ್ತಾರೋ ಹಾಗೆ ಇರಿ ಎನ್ನಬಾರದು. ಅದು ನಿಯಂತ್ರಣದ ಸೂಚನೆ. ಅದು ಅಪಾಯದ ಸೂಚನೆ. ಸುಳ್ಳು ಹೇಳುವುದು ರೆಡ್ ಫ್ಲ್ಯಾಗ್. ಸುಳ್ಳು ಹೇಳುವವರ ಜೊತೆ ಜೀವನ ಮಾಡಲು ಸಾಧ್ಯವಿಲ್ಲ. ಸಣ್ಣ ವಿಚಾರಕ್ಕೂ ಸುಳ್ಳು ಹೇಳುತ್ತಾರೆ. ಅವರು ಮುಂದೆ ದೊಡ್ಡ ದೊಡ್ಡ ಸುಳ್ಳು ಹೇಳುತ್ತಾರೆ’ ಎಂದಿದ್ದಾರೆ ಅವರು.
ಒಳ್ಳೆಯ ಸಂಬಂಧಕ್ಕೆ ಏನು ಮಾಡಬಹುದು ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದರು. ‘ನಿಮ್ಮ ಹುಡುಗಿ ಹೇಳುವ ಸಮಸ್ಯೆಗಳನ್ನು ಕೇಳಿ. ಹೆಚ್ಚಿನ ಸಮಯ ಅವರು ಪರಿಹಾರದ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ ಮಾತನಾಡುವುದಿಲ್ಲ. ಅವರಿಗೆ ಸಮಸ್ಯೆಯನ್ನು ಪರಿಹರಿಸುವುದು ಸಹ ಮುಖ್ಯವಲ್ಲ. ನೀವು ಅವಳ ಸಮಸ್ಯೆಗಳನ್ನು, ಅವಳ ಆಕಾಂಕ್ಷೆಗಳನ್ನು ಕೇಳುವುದು ಮುಖ್ಯವಾಗುತ್ತದೆ. ಅವಳು ನಿಮಗೆ ಮುಖ್ಯವೆಂದು ಅರಿತುಕೊಂಡಿದ್ದಾಳೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ’ ಎಂದಿದ್ದಾರೆ ತಮನ್ನಾ.
ತಮನ್ನಾ ಅವರು ಈ ಹಿಂದಿನ ಬ್ರೇಕಪ್ಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ. ಈ ಅನುಭವಗಳು ತಮ್ಮ ಬೆಳವಣಿಗೆಗೆ ಹೇಗೆ ಸಹಾಯ ಮಾಡಿದವು ಎಂದು ವಿವರಿಸಿದರು. ‘ಈ ಮೊದಲು ನಾನು ಹೀಗೆ ಇರಲಿಲ್ಲ. ಅವರು (ಪಾರ್ಟ್ನರ್) ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂದು ಪರಿಗಣಿಸದೆ ನಾನು ಸದಾ ಅವರಿಗೆ ಎಲ್ಲವನ್ನೂ ನೀಡುತ್ತಿದ್ದೆ. ಇದು ಸರಿ ಅಲ್ಲ. ಕೊಡು-ಕೊಳ್ಳುವಿಕೆ ವಿನಿಮಯವೇ ಸಂಬಂಧವನ್ನು ಬಿಗಿಯಾಗಿಸುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ತಮನ್ನಾ ಭಾಟಿಯಾಗೆ ಬಾಲಿವುಡ್ನಲ್ಲಿ ಹೆಚ್ಚಾಯ್ತು ಬೇಡಿಕೆ, ಆದರೆ ನಾಯಕಿಯಾಗಿ ಅಲ್ಲ!
ತಮನ್ನಾ ಹಾಗೂ ವಿಜಯ್ ವರ್ಮಾ ಅವರ ಪ್ರೀತಿಗೆ ಹಲವು ವರ್ಷಗಳು ಕಳೆದಿವೆ. ಇವರು ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆರಂಭದಲ್ಲಿ ಇವರು ತಮ್ಮ ಸಂಬಂಧ ಮುಚ್ಚಿಟ್ಟಿದ್ದರು. ನಂತರ ಇದನ್ನು ಓಪನ್ ಆಗಿ ಹೇಳಿಕೊಂಡಿದ್ದರು. ಆ ಬಳಿಕ ಇಬ್ಬರೂ ಓಪನ್ ಆಗಿ ಸುತ್ತಾಟ ನಡೆಸುತ್ತಾ ಇದ್ದಾರೆ. ‘ಸ್ತ್ರೀ 2’ ಚಿತ್ರದಲ್ಲಿ ತಮನ್ನಾ ಆವರು ಡ್ಯಾನ್ಸ್ ಮಾಡಿದ ವಿಶೇಷ ಹಾಡು ಹಿಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.