ದಾವಣಗೆರೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದ ಪ್ರಜಾಧ್ವನಿ ಯಾತ್ರೆ ದಾವಣೆಗೆರೆ ಜಿಲ್ಲೆಯಲ್ಲಿ ಮುಂದುವರಿದಿದೆ. ಹೊನ್ನಾಳಿಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ (Zameer Ahmed) ಮಾತಾಡಿದರು. ಅವರು ಕನ್ನಡ ಚೆನ್ನಾಗೇ ಮಾತಾಡುತ್ತಾರೆ, ಅದರಲ್ಲಿ ಅನುಮಾನ ಬೇಡ. ಆದರೆ ಕೆಲ ಪದಗಳ ಉಚ್ಛಾರಣೆ ಅಪಭ್ರಂಶಗೊಳ್ಳುವುದನ್ನು ನೀವೆಲ್ಲ ಹಲವಾರು ಬಾರಿ ಕೇಳಿಸಿಕೊಂಡಿರಬಹುದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿ ಹೇಳುವಾಗ ಎಲ್ಲ ಭಾಗ್ಯಗಳನ್ನು ಸರಿಯಾಗಿ ಉಚ್ಛರಿಸುವ ಜಮೀರ್ ಕ್ಷೀರಭಾಗ್ಯ ಅನ್ನುವಾಗ ಮಾತ್ರ ಎಡವುತ್ತಾರೆ. ಕ್ಷೀರಭಾಗ್ಯವನ್ನು ಅವರು ಯಾವಾಗಲೂ ‘ಶೀಲಭಾಗ್ಯ’ ಅಂತ ಉಚ್ಛರಿಸುತ್ತಾರೆ. ಸದನದಲ್ಲಿ ಎಲ್ಲರ ವ್ಯಾಕರಣ ಸರಿಮಾಡುವ ಸಿದ್ದರಾಮಯ್ಯ ಮೇಷ್ಟ್ರು ತಮ್ಮ ಪಟ್ಟದ ಶಿಷ್ಯನನ್ನು ಯಾಕೆ ತಿದ್ದುತ್ತಿಲ್ಲವೋ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ