ಸಿದ್ದರಾಮಯ್ಯನವರ ಆಶೀರ್ವಾದದಿಂದಲೇ ಹುಬ್ಬಳ್ಳಿ ಗಲಭೆ ಆರೋಪಿತರ ಕುಟುಂಬಗಳಿಗೆ ಜಮೀರ್ ಸಹಾಯ ಮಾಡುತ್ತಿದ್ದಾರೆ: ಪ್ರತಾಪ್ ಸಿಂಹ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 30, 2022 | 12:06 AM

ಕಾಂಗ್ರೆಸ್ ಪಕ್ಷದ ಯಾವುದೇ ನಾಯಕ ಹಿಂದೂಗಳ ಪರ ನಿಂತುಕೊಳ್ಳುವುದಿಲ್ಲ. ಮುಸಲ್ಮಾನರನ್ನು ಓಲೈಸುವುದಷ್ಟೇ ಅವರಿಗೆ ಬೇಕು. ಹಿಂದೂಗಳು ನಮಗೆ ವೋಟು ಹಾಕೇ ಹಾಕುತ್ತಾರೆ, ಅವರ ಬಗ್ಗೆ ಚಿಂತಿಸುವ ಅವಶ್ಯಕತೆಯಿಲ್ಲ ಅಂತ ಅವರು ಅಂದುಕೊಂಡಿದ್ದಾರೆ ಎಂದು ಸಿಂಹ ಹೇಳಿದರು.

ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ಎರಡು ಟೀಮ್ ಗಳಿವೆ, ಒಂದು ಟೀಮಿಗೆ ಸಿದ್ದರಾಮಯ್ಯ (Siddaramaiah) ಕ್ಯಾಪ್ಟನ್ ಅಗಿದ್ದರೆ ಮತ್ತೊಂದಕ್ಕೆ ಡಿಕೆ ಶಿವಕುಮಾರ (DK Shivakumar); ಈ ಕ್ಯಾಪ್ಟನ್ ಗಳು ಮುಸಲ್ಮಾನರನ್ನು ತಮ್ಮ ವೈಸ್ ಕ್ಯಾಪ್ಟನ್ ಗಳಾಗಿ ಇಟ್ಟುಕೊಂಡಿದ್ದಾರೆ. ಜಮೀರ್ ಅಹ್ಮದ್ (Zameer Ahmed), ಸಿದ್ದರಾಮಯ್ಯನವರ ಉಪನಾಯಕನಾದರೆ, ಮೊಹಮ್ಮದ್ ನಲಪಾಡ್ ಶಿವಕುಮಾರ ಅವರ ಡೆಪ್ಯುಟಿ. ಕ್ಯಾಪ್ಟನ್ ಗಳ ಅಣತಿಯ ಮೇರೆಗೆ ಜಮೀರ್ ಮತ್ತು ನಲಪಾಡ್ ಕಾರ್ಯನಿರ್ವಹಿಸುತ್ತಾರೆ, ಇದನ್ನು ಮೊದಲಿನಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಮೈಸೂರಲ್ಲಿ ಶುಕ್ರವಾರ ಹೇಳಿದರು. ಮತೀಯ ಗಲಭೆಗಳಾದಾಗ ಸಿದ್ದರಾಮಯ್ಯ ಮುಸ್ಲಿಮರ ಪರ ನಿಂತುಕೊಳ್ಳುತ್ತಾರೆ ಮತ್ತು ಶಿವಕುಮಾರ ಮುಸಲ್ಮಾನರು ಹಾಗೂ ಕ್ರೈಸ್ತರನ್ನು ವಹಿಸಿಕೊಂಡು ಮಾತಾಡುತ್ತಾರೆ ಎಂದು ಅವರು ಹೇಳಿದರು.

ಕೋಮು ಗಲಭೆ ನಡೆದಾಗ ಸಿದ್ದರಾಮಯ್ಯನವರಾಗಲೀ ಶಿವಕುಮಾರ ಅಗಲೀ ಹಿಂದೂಗಳ ಪರ ಮಾತಾಡುತ್ತಾರೆಯೇ? ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಯಾವುದೇ ನಾಯಕ ಹಿಂದೂಗಳ ಪರ ನಿಂತುಕೊಳ್ಳುವುದಿಲ್ಲ. ಮುಸಲ್ಮಾನರನ್ನು ಓಲೈಸುವುದಷ್ಟೇ ಅವರಿಗೆ ಬೇಕು. ಹಿಂದೂಗಳು ನಮಗೆ ವೋಟು ಹಾಕೇ ಹಾಕುತ್ತಾರೆ, ಅವರ ಬಗ್ಗೆ ಚಿಂತಿಸುವ ಅವಶ್ಯಕತೆಯಿಲ್ಲ ಅಂತ ಅವರು ಅಂದುಕೊಂಡಿದ್ದಾರೆ ಎಂದು ಸಿಂಹ ಹೇಳಿದರು.

ಹುಬ್ಬಳ್ಳಿಯಲ್ಲಿ ಗಲಭೆ ನಡೆಸಿದ ಅರೋಪ ಹೊತ್ತವರ ಕುಟುಂಬಗಳಿಗೆ ಜಮೀರ್ ಅಹ್ಮದ್ ಸಹಾಯ ಮಾಡುತ್ತಿರುವುದು ಸಿದ್ದರಾಮಯ್ಯನವರ ಆಶೀರ್ವಾದದಿಂದಲೇ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಾಟೆ ನಡೆದಾಗ ಜಮೀರ್ ಯಾರಿಗೆಲ್ಲ ಸಹಾಯ ಮಾಡಿದರು ಅಂತ ಎಲ್ಲರಿಗೂ ಗೊತ್ತಿದೆ, ಅವರ ಮನಸ್ಥಿತಿಯೇ ಹಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ:   ಸಮಾಜದ ಲೀಡರ್ ಆಗಿ ಜಮೀರ್ ಅಹ್ಮದ್ ಸಮಾಜಘಾತುಕ ಶಕ್ತಿಗಳಿಗೆ ನೆರವಾಗುತ್ತಿರುವುದು ಖಂಡನೀಯ: ಆರಗ ಜ್ಞಾನೇಂದ್ರ