Assembly Polls: ಜಮೀರ್ ತೆಲಂಗಾಣ ಹೋಗಿದ್ದು ವೈಯಕ್ತಿಕ ವಿಚಾರ, ಅದನ್ನೆಲ್ಲ ನಾನು ವಿಚಾರಿಸುವುದು ಸರಿಯಲ್ಲ: ಡಿಕೆ ಶಿವಕುಮಾರ್

|

Updated on: Jan 21, 2023 | 11:34 AM

ಜಮೀರ್ ಒಬ್ಬ ಉದ್ಯಮಿ ಕೂಡ ಆಗಿದ್ದಾರೆ, ಬಿಸಿನೆಸ್ ವಿಚಾರದಲ್ಲಿ ಭೇಟಿಯಾಗಿರುವ ಸಾಧ್ಯತೆಯಿದೆ. ಪಕ್ಷದ ಅಧ್ಯಕ್ಷನಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಕೇಳುವುದು ಸರಿಯಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.

ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿವಾದಾತ್ಮಕ ಶಾಸಕ ಜಮೀರ್ ಅಹ್ಮದ್ (Zameer Ahmed) ಅವರು ಇತ್ತೀಚಿಗೆ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಅವರನ್ನು ಹೈದರಾಬಾದ್ ನಲ್ಲಿ ಭೇಟಿಯಾಗಿದ್ದು ಪಕ್ಷದ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಈ ವದಂತಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಂತ ಕಾಣುತ್ತೆ. ಬೆಂಗಳೂರಲ್ಲಿ ಮಾಧ್ಯಮದವರು ಜಮೀರ್ ಅವರು ಚಂದ್ರಶೇಖರ್ ಅವರನ್ನು ಭೇಟಿಯಾದ ಬಗ್ಗೆ ವಿಚಾರಿಸಿದಾಗ ಶಿವಕುಮಾರ್, ಯಾಕೆ ಭೇಟಿಯಾದರು ಅಂತ ತನಗೆ ಗೊತ್ತಿಲ್ಲ. ಅದು ಜಮೀರ್ ಅವರ ವೈಯಕ್ತಿಕ ವಿಚಾರ. ಅವರೊಬ್ಬ ಉದ್ಯಮಿ ಕೂಡ ಆಗಿದ್ದಾರೆ, ಬಿಸಿನೆಸ್ ವಿಚಾರದಲ್ಲಿ ಭೇಟಿಯಾಗಿರುವ ಸಾಧ್ಯತೆಯಿದೆ. ಪಕ್ಷದ ಅಧ್ಯಕ್ಷನಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಕೇಳುವುದು ಸರಿಯಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.