‘ಜೀ ನನ್ನ ಕುಟುಂಬ ಇದ್ದಂತೆ’; ರುಕ್ಮಿಣಿ ವಸಂತ್ ಹೀಗೆ ಹೇಳಲು ಕಾರಣ ಏನು?

Edited By:

Updated on: Oct 15, 2025 | 10:38 AM

Rukmini Vasanth: ರುಕ್ಮಿಣಿ ವಸಂತ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ರುಕ್ಮಿಣಿ ವಸಂತ್ ಅವರು ಜೀ ಕನ್ನಡದ ‘ಜೀ ಕುಟುಂಬ’ ಅವಾರ್ಡ್ಸ್​ನ ಭಾಗ ಆಗಿದ್ದಾರೆ. ಆ ವಿಡಿಯೋ ಇಲ್ಲಿದೆ.

ರುಕ್ಮಿಣಿ ವಸಂತ್ (Rukmini Vasanth) ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈಗ ಅವರು ಜೀ ಕನ್ನಡದ ‘ಜೀ ಕುಟುಂಬ ಅವಾರ್ಡ್ಸ್’ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈ ವೇದಿಕೆ ಮೇಲೆ ಅವರು ಮನ ಬಿಚ್ಚಿ ಮಾತನಾಡಿದರು. ರುಕ್ಮಿಣಿ ವಸಂತ್ ಸಿನಿಮಾದ ಹಕ್ಕುಗಳು ಜೀ ಕನ್ನಡದ ಬಳಿಯೇ ಇವೆಯಂತೆ. ಹೀಗಾಗಿ ಪ್ರತಿಬಾರಿಯೂ ಜೀ ಈವೆಂಟ್​ಗೆ ಬರುತ್ತಾರೆ. ಇದರಿಂದ ಅವರಿಗೆ ಇದು ಕುಟುಂಬದಂತೆ ಭಾಸವಾಗಿದೆ. ಆ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Oct 15, 2025 10:36 AM
Loading...
Unable to load recommendations.
Follow Us
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More