ಈ ದಿನ ಯಾವ ರಾಶಿ ಮೇಲೆ ಯಾವ ಗ್ರಹದ ಪ್ರಭಾವ ಬೀರಲಿದೆ ತಿಳಿಯಿರಿ

Updated on: Jun 30, 2025 | 6:42 AM

ಜೂನ್ 30ರ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಮೇಷದಿಂದ ಮೀನ ರಾಶಿವರೆಗೆ ಪ್ರತಿಯೊಂದು ರಾಶಿಯ ಫಲಾಫಲವನ್ನು ವಿವರಿಸಲಾಗಿದೆ. ಪ್ರತಿ ರಾಶಿಗೂ ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಮಂತ್ರವನ್ನು ಸೂಚಿಸಲಾಗಿದೆ. ಆರ್ಥಿಕ, ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಗ್ರಹಗಳ ಪ್ರಭಾವದ ಬಗ್ಗೆ ತಿಳಿಸಲಾಗಿದೆ.

ಬೆಂಗಳೂರು, ಜೂನ್ 30: ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 12 ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಪ್ರತಿಯೊಂದು ರಾಶಿಗೂ ಈ ದಿನದ ಗ್ರಹಗಳ ಸ್ಥಿತಿಯ ಆಧಾರದ ಮೇಲೆ ಭವಿಷ್ಯವನ್ನು ತಿಳಿಸಲಾಗಿದೆ. ಮೇಷ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭ ಮತ್ತು ವೃತ್ತಿಪರ ಯಶಸ್ಸು, ಆದರೆ ಕುಟುಂಬದಲ್ಲಿ ಸ್ವಲ್ಪ ಅಸಮ್ಮತಿ ಇರಬಹುದು ಎಂದು ಹೇಳಲಾಗಿದೆ. ವೃಷಭ ರಾಶಿಯವರಿಗೆ ಉದ್ಯಮ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಹೀಗೆ ಪ್ರತಿ ರಾಶಿಯವರಿಗೂ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರವನ್ನು ಸೂಚಿಸಲಾಗಿದೆ.

 

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More