ZTE Nubia Z50S Pro: ಪ್ರೊ ಲೆವೆಲ್ ಕ್ಯಾಮೆರಾ ಹೊಂದಿದೆ ಹೊಸ ಝೆಡ್​​​ಟಿಇ ಫೋನ್!

ZTE Nubia Z50S Pro: ಪ್ರೊ ಲೆವೆಲ್ ಕ್ಯಾಮೆರಾ ಹೊಂದಿದೆ ಹೊಸ ಝೆಡ್​​​ಟಿಇ ಫೋನ್!

ಕಿರಣ್​ ಐಜಿ
|

Updated on: Jul 25, 2023 | 9:30 AM

ಝೆಡ್​ಟಿಇ ಕಂಪನಿ, ಚೀನಾದಲ್ಲಿ ಹೊಸ ಸರಣಿಯ ಝೆಡ್​ಟಿಇ ನುಬಿಯಾ Z50S Pro ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. 35mm ಕಸ್ಟಮ್ ಆಪ್ಟಿಕಲ್ ಸೆನ್ಸಾರ್ ಇರುವ ಕ್ಯಾಮೆರಾ ಈ ಸ್ಮಾರ್ಟ್​ಫೋನ್​ ವಿಶೇಷತೆ. ಪ್ರೊ ಕ್ಯಾಮೆರಾದಲ್ಲಿ ಮೂಡಿಬರುವಂತಹ ಸುಂದರ ಚಿತ್ರಗಳು ಹೊಸ ಝೆಡ್​ಟಿಇ ನುಬಿಯಾ Z50S Pro ಫೋನ್ ವಿಶೇಷತೆಯಾಗಿದೆ.

ಚೀನಾ ಮೂಲದ ಝೆಡ್​ಟಿಇ ಭಾರತದಲ್ಲಿ ಸೀಮಿತ ಸಂಖ್ಯೆಯ ಸ್ಮಾರ್ಟ್​ಫೋನ್​ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಅದರಲ್ಲೂ ಗೇಮಿಂಗ್ ಮತ್ತು ಕ್ಯಾಮೆರಾ ಪ್ರಿಯರನ್ನು ಗಮನದಲ್ಲಿರಿಸಿಕೊಂಡು ಹೊಸ ಹೊಸ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಝೆಡ್​ಟಿಇ ಕಂಪನಿ, ಚೀನಾದಲ್ಲಿ ಹೊಸ ಸರಣಿಯ ಝೆಡ್​ಟಿಇ ನುಬಿಯಾ Z50S Pro ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. 35mm ಕಸ್ಟಮ್ ಆಪ್ಟಿಕಲ್ ಸೆನ್ಸಾರ್ ಇರುವ ಕ್ಯಾಮೆರಾ ಈ ಸ್ಮಾರ್ಟ್​ಫೋನ್​ ವಿಶೇಷತೆ. ಪ್ರೊ ಕ್ಯಾಮೆರಾದಲ್ಲಿ ಮೂಡಿಬರುವಂತಹ ಸುಂದರ ಚಿತ್ರಗಳು ಹೊಸ ಝೆಡ್​ಟಿಇ ನುಬಿಯಾ Z50S Pro ಫೋನ್ ವಿಶೇಷತೆಯಾಗಿದೆ.