AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kolkata
    Kolkata 21 Jun, 05:30 PM
    30.8°C

    Humidity 84%

    Wind 1.9 KMPH

    Sunrise

    Sunrise

    04:53 am

    Sunset

    Sunset

    06:24 pm

    Moonrise

    Moonrise

    12:51 am

    Moonset

    Moonset

    02:07 pm

    Next 6 days Min Max

    22 Jun (Sun)

    2025-06-22 SunPartly cloudy sky with possibility of moderate rain or Thunderstorm
    28.0°c 34.0°c

    23 Jun (Mon)

    2025-06-23 MonPartly cloudy sky with possibility of moderate rain or Thunderstorm
    27.0°c 32.0°c

    24 Jun (Tue)

    2025-06-24 TuePartly cloudy sky with possibility of moderate rain or Thunderstorm
    27.0°c 31.0°c

    25 Jun (Wed)

    2025-06-25 WedPartly cloudy sky with possibility of moderate rain or Thunderstorm
    27.0°c 32.0°c

    26 Jun (Thu)

    2025-06-26 ThuGenerally cloudy sky with possibility of rain or Thunderstorm
    27.0°c 32.0°c

    ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್

    ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದೆ. ಭಾನುವಾರ, ಸೋಮವಾರ, ಬುಧವಾರ ಮತ್ತು ಗುರುವಾರ ರಾಜ್ಯದ ಪ್ರತ್ಯೇಕ ಭಾಗಗಳಲ್ಲಿ ಭಾರೀ ಅಥವಾ ಅತಿ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಮಂಗಳವಾರ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹಳದಿ ಅಲರ್ಟ್ ನೀಡಿದೆ.

    ಇಂದಿನಿಂದ ಲೀಡ್ಸ್​ನಲ್ಲಿ ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್

    Leeds Weather Report, IND vs ENG: ಲೀಡ್ಸ್ ಪಿಚ್​ನಲ್ಲಿ ವೇಗದ ಬೌಲರ್‌ಗಳಿಗೆ ಸಾಕಷ್ಟು ಸಹಾಯ ಸಿಗುವ ನಿರೀಕ್ಷೆಯಿದೆ. ಆದಾಗ್ಯೂ, ಟೆಸ್ಟ್ ಪಂದ್ಯದಲ್ಲಿ, ಪಿಚ್ ಪ್ರತಿ ಸೆಷನ್‌ಗೆ ಬದಲಾಗುವ ನಿರೀಕ್ಷೆಯಿದೆ. ಇನ್ನೂ ಆಸಕ್ತಿದಾಯಕ ವಿಷಯವೆಂದರೆ ಪಂದ್ಯದ ದಿನದಂದು ಇಲ್ಲಿ ಹವಾಮಾನ ಹೇಗಿರುತ್ತೆ ಎಂದು ಊಹಿಸಲು ಕಷ್ಟ. ಇಂಗ್ಲೆಂಡ್‌ನ ಹವಾಮಾನ ಯಾವಾಗ ಬದಲಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ.

    ಕರ್ನಾಟಕದ ಕರಾವಳಿಗೆ ಯೆಲ್ಲೋ ಅಲರ್ಟ್​, ಜೂ.26ರವರೆಗೂ ಹುಚ್ಚು ಮಳೆ

    ಕರ್ನಾಟಕದಾದ್ಯಂತ ಜೂನ್ 26ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಜೂನ್ 26ರವರೆಗೂ ಮಳೆಯಾಗಲಿದೆ.ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

    ಇಂದಿನಿಂದ ಕರ್ನಾಟಕದಾದ್ಯಂತ ಕಡಿಮೆಯಾಗಲಿದೆ ಮಳೆ ಅಬ್ಬರ

    ಕರ್ನಾಟಕದಾದ್ಯಂತ ಮುಂಗಾರು ಇಂದಿನಿಂದ ಕೊಂಚ ಬಿಡುವು ಪಡೆಯಲಿದೆ, ಕರಾವಳಿಯಲ್ಲಿ ಮಳೆ ಹೆಚ್ಚಿದ್ದರೂ ಉಳಿದ ಜಿಲ್ಲೆಗಳಲ್ಲಿ ಕಡಿಮೆಯಾಗಲಿದೆ. ಜೂನ್ 25ರವರೆಗೆ ಸಾಧಾರಣ ಮಳೆ ಮುಂದುವರೆಯಲಿದೆ. ಉಪ್ಪಿನಂಗಡಿ, ಮೂಡುಬಿದಿರೆ, ಕ್ಯಾಸಲ್​​ರಾಕ್, ಕೊಟ್ಟಿಗೆಹಾರ, ಭಾಗಮಂಡಲ, ಕಾರ್ಕಳ, ಬೆಳ್ತಂಗಡಿ, ಲೋಂಡಾ, ಧರ್ಮಸ್ಥಳ, ಕಾರ್ಕಳ, ಕಳಸ, ಸುಳ್ಯ, ಕಮ್ಮರಡಿ, ಶೃಂಗೇರಿ, ನಾಪೋಕ್ಲು, ಬಂಟವಾಳ, ಸಿದ್ದಾಪುರ, ಪುತ್ತೂರು,ಮಾಣಿ, ಗೇರುಸೊಪ್ಪ, ಶಕ್ತಿನಗರ, ಮುಲ್ಕಿ, ಜಯಪುರ, ಸೋಮವಾರಪೇಟೆ, ಎನ್​ಆರ್​ಪುರ, ಭದ್ರಾವತಿ, ಅಂಕೋಲಾ, ಯಲ್ಲಾಪುರ, ಕುಮಟಾ, ಹಾರಂಗಿ, ಮಂಕಿ, ತರಿಕೆರೆ, ಅರಕಲಗೂಡು, ಹೊನ್ನಾಳಿ, ಶಿವಮೊಗ್ಗ, ಹಾವೇರಿ, ಬೆಳಗಾವಿಯಲ್ಲಿ ಮಳೆಯಾಗಿದೆ.

    ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ,ಯಾರಿಗೆ ಎಷ್ಟು ಹಣ?

    ಮುಂಗಾರು ಮುನ್ನವೇ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಕೆಲವರು ಮನೆ, ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಇದರಿಂದ ರಾಜ್ಯ ಸರ್ಕಾರ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ 1 ತಿಂಗಳಿನಲ್ಲಿ ಉಂಟಾದ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಿದೆ.

    ಗುಜರಾತ್​​ನಲ್ಲಿ ಭಾರೀ ಮಳೆಯಿಂದ 48 ಗಂಟೆಗಳಲ್ಲಿ 22 ಜನ ಸಾವು

    ಗುಜರಾತ್ ರಾಜ್ಯದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ರಾಜ್ಯಾದ್ಯಂತ ಧಾರಾಕಾರ ಮಳೆಯಿಂದ 48 ಗಂಟೆಗಳಲ್ಲಿ 22 ಜನರು ಸಾವನ್ನಪ್ಪಿದ್ದಾರೆ. ಇನ್ನೂ NDRF ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಗುಜರಾತ್‌ನ ಹಲವಾರು ಜಿಲ್ಲೆಗಳಲ್ಲಿ ಮುಖ್ಯವಾಗಿ ಸೌರಾಷ್ಟ್ರ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ತಲುಪಿದೆ ಎಂಬುದು ಖಚಿತವಾಗಿದೆ.

    ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ

    ಮಂಗಳೂರಿನ ಬೀಚ್​ಗಳೆಲ್ಲ ಖಾಲಿ ಖಾಲಿಯಾಗಿವೆ. ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಅಷ್ಟೇ ಅಲ್ಲದೆ, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಮಂಗಳೂರಿನ ಎಲ್ಲ ಬೀಚ್​​ಗಳಿಗೆ ಎಂಟ್ರಿ ನಿಷೇಧಿಸಲಾಗಿದೆ.

    • Ashok
    • Updated on: Jun 18, 2025
    • 11:55 AM

    ಕರ್ನಾಟಕದ ಕರಾವಳಿ ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆ

    ಕರ್ನಾಟಕದಾದ್ಯಂತ ಜೂನ್ 24ರವರೆಗೂ ಮಳೆಯ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾಗಮಂಡಲ, ಗೇರುಸೊಪ್ಪ, ಆಗುಂಬೆ, ಸಿದ್ದಾಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸುಳ್ಯ, ಕಾರ್ಕಳ, ಕೋಟಾ, ಧರ್ಮಸ್ಥಳ, ಬೆಳ್ತಂಗಡಿ, ಸಿದ್ದಾಪುರ, ಉಪ್ಪಿನಂಗಡಿ, ಕುಂದಾಪುರ, ಹೊನ್ನಾವರ, ಕ್ಯಾಸಲ್​​ರಾಕ್, ಉಡುಪಿ, ಮಾಣಿ, ಮಂಕಿ, ಕಮ್ಮರಡಿ, ನಾಪೋಕ್ಲು, ಜಯಪುರ, ಶೃಂಗೇರಿ, ಪೊನ್ನಂಪೇಟೆ, ಕೊಟ್ಟಿಗೆಹಾರ, ವಿರಾಜಪೇಟೆ, ಪುತ್ತೂರು, ಮಂಗಳೂರು, ಕುಮಟಾ, ಸೋಮವಾರಪೇಟೆಯಲ್ಲಿ ಮಳೆಯಾಗಿದೆ. ಪಣಂಬೂರು, ಕಾರವಾರ, ಕಳಸ, ಕೊಪ್ಪ, ಹುಂಚದಕಟ್ಟೆ, ತ್ಯಾಗರ್ತಿ, ಬನವಾಸಿ, ಲೋಂಡಾ, ಖಾನಾಪುರ್, ಮುಲ್ಕಿ, ಶಿರಾಲಿ, ಬಾಳೆಹೊನ್ನೂರು, ಎನ್​ಆರ್​ ಪುರ, ಕೋಣನೂರು, ಮುಂಡಗೋಡು, ಕಿರವತ್ತಿ, ಹಾರಂಗಿ, ಅರಕಲಗೂಡು, ಬೇಲೂರು, ಅಜ್ಜಂಪುರ, ರಾಯಚೂರು, ಲಕ್ಷ್ಮೇಶ್ವರ, ಹಾವೇರಿಯಲ್ಲಿ ಮಳೆಯಾಗಿದೆ.

    ಚಿಕ್ಕಮಗಳೂರಿನಲ್ಲಿ ಗುಡ್ಡ ಕುಸಿತ: ಸೊಲ್ಲಾಪುರ-ಮಂಗಳೂರು ಹೆದ್ದಾರಿ ಬಂದ್

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಅಪಾರ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿತದಿಂದಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ. ಮರಗಳು ಬಿದ್ದು ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ನಿರಂತರ ಮಳೆ-ಗಾಳಿಯಿಂದ ಜನರು ಹೈರಾಣಾಗಿದ್ದಾರೆ.

    ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು

    ಬಿಹಾರದಲ್ಲಿ ಭಾರೀ ಮಳೆಯಿಂದ 14 ಜನರು ಸಾವನ್ನಪ್ಪಿದ್ದಾರೆ. ಮಿಂಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಎಂಡಿ ಆರೆಂಜ್ ಅಲರ್ಟ್ ನೀಡಿದೆ. ಬಿಹಾರದ ಪಾಟ್ನಾ, ಗಯಾ, ಭಾಗಲ್ಪುರ್, ಮುಂಗೇರ್, ಪೂರ್ವ ಮತ್ತು ಪಶ್ಚಿಮ ಚಂಪಾರಣ್, ಸಿವಾನ್, ಸರನ್ ಮತ್ತು ಕತಿಹಾರ್ ಸೇರಿದಂತೆ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.