ರಷ್ಯಾದ ಪರ್ಮ್ ಸ್ಟೇಟ್ ವಿಶ್ಯವಿದ್ಯಾಲಯದಲ್ಲಿ ಅಪರಿಚಿತನೊಬ್ಬ ಗುಂಡಿನ ಗುಂಡಿನ ದಾಳಿ ನಡೆಸಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ ಬಂದೂಕು ಅಷ್ಟೊಂದು ಮಾರಕವಾಗಿರಲಿಲ್ಲ ಎಂದು ರಷ್ಯಾದ ಸ್ಥಳೀಯ ಮಾಧ್ಯಮ ಟಿಎಎಸ್ಎಸ್ ವರದಿ ಮಾಡಿದೆ. ಇನ್ನು ವ್ಯಕ್ತಿ ಯೂನಿವರ್ಸಿಟಿಯನ್ನು ಪ್ರವೇಶಿಸಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಲಾಸ್ ರೂಂಗೆ ಹೋಗಿ ಒಳಗಿನಿಂದ ಬೀಗ ಹಾಕಿಕೊಂಡಿದ್ದಾರೆ. ಉಳಿದಂತೆ ಕೆಲವು ವಿದ್ಯಾರ್ಥಿಗಳು ಕಿಟಕಿಗಳ ಮೂಲಕ ಜಿಗಿದು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ರಷ್ಯಾದಲ್ಲಿ ನಡೆದ ದಾಳಿಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣ ಸಿಗಲಿಲ್ಲ. ದುಷ್ಕರ್ಮಿ ಮಾರಕವಲ್ಲದ ಬಂದೂಕು ಬಳಿಸಿದ್ದ ಎಂದು ಕೆಲವು ವರದಿಗಳು ಹೇಳಿದ್ದರೆ, ಇಲ್ಲ ಆತ ಮಾರಕವಾದ ಗನ್ ಬಳಿಸಿಯೇ ದಾಳಿ ನಡೆಸಿದ್ದಾನೆ ಎಂದೂ ಹೇಳಲಾಗಿದೆ. ಭದ್ರತಾ ಸಿಬ್ಬಂದಿ ಯೂನಿವರ್ಸಿಟಿ ಕ್ಯಾಂಪಸ್ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಅಪರಿಚಿತ ದಾಳಿ ನಡೆಸುತ್ತಿದ್ದಂತೆ ಇತ್ತ ಕೆಲವು ವಿದ್ಯಾರ್ಥಿಗಳು ಕಿಟಕಿಯಿಂದ ಜಿಗಿದು, ಓಡಿ ಹೋಗುತ್ತಿರುವ ವಿಡಿಯೋಗಳು ಟ್ವಿಟರ್ನಲ್ಲಿ ವೈರಲ್ ಆಗಿವೆ.
#UPDATE | Eight people were confirmed killed, six injured in a shooting on the campus of a university in the Russian city of Perm: Russia’s RT
— ANI (@ANI) September 20, 2021
reports of another school shooting in Russia; this time at Perm State University. Russian agencies say there are casualties. pic.twitter.com/jkeyGDLO05
— Mike Eckel (@Mike_Eckel) September 20, 2021
ಇದನ್ನೂ ಓದಿ: ಪ್ರತಿನಿತ್ಯ ರನ್ನಿಂಗ್ ಮಾಡುವ ಅಭ್ಯಾಸ ಇದೆಯೇ? ಈ ವಿಷಯಗಳನ್ನು ನೀವು ತಿಳಿಯಲೇಬೇಕು
(Russia Firing 8 People Killed after Gunman opens fire in Perm State University of Russia 6 Injured)
Published On - 1:28 pm, Mon, 20 September 21