ಬೈಡೆನ್ ಸರ್ಕಾರ ಹೊಸ ಪ್ರಯಾಣ ನೀತಿ ನವೆಂಬರ್​ನಿಂದ ಜಾರಿ, ಲಸಿಕೆ ಹಾಕಿಸಿಕೊಂಡವರು ಷರತ್ತುಗಳೊಂದಿಗೆ ಯುಎಸ್​ಗೆ ಪ್ರಯಾಣಿಸಬಹುದು

ಪ್ರಸ್ತುತವಾಗಿ, ಕೇವಲ ಅಮೆರಿಕದ ನಾಗರಿಕರು, ಮತ್ತು ವಿಶೇಷ ವಿಸಾಗಳನ್ನು ಹೊಂದಿರುವ ಬಹತೇಕ ಯುರೋಪಿಯನ್ ದೇಶಗಳ ನಾಗರಿಕರು ಮಾತ್ರ ಅಮೆರಿಕಾಗೆ ಪ್ರಯಾಣಿಸಲು ಅನುಮತಿ ಗಿಟ್ಟಿಸುತ್ತಾರೆ.

ಬೈಡೆನ್ ಸರ್ಕಾರ ಹೊಸ ಪ್ರಯಾಣ ನೀತಿ ನವೆಂಬರ್​ನಿಂದ ಜಾರಿ, ಲಸಿಕೆ ಹಾಕಿಸಿಕೊಂಡವರು ಷರತ್ತುಗಳೊಂದಿಗೆ ಯುಎಸ್​ಗೆ ಪ್ರಯಾಣಿಸಬಹುದು
ಶ್ವೇತ ಭವನ

ವಾಷಿಂಗ್ಟನ್: ಅಮೇರಿಕಾಗೆ ಪ್ರಯಾಣಿಸುವವರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡಿದ್ದು ಟೆಸ್ಟಿಂಗ್ ಮತ್ತು ಕಂಟ್ಯಾಕ್ಟ್ ಟ್ರೇಸಿಂಗ್ ಗೆ ಸಮ್ಮತಿಸುವ ಹಾಗಿದ್ದರೆ ನವೆಂಬರ್ನಿಂದ ಪ್ರಯಾಣದ ಮೇಲೆ ತಾನು ಹೇರಿರುವ ನಿಷೇಧವನ್ನು ತೆರವುಗೊಳಿಸುವುದಾಗಿ ಯುಎಸ್ ಸರ್ಕಾರ ಸೋಮವಾರ ಪ್ರಕಟಿಸಿದೆ. ಅಧ್ಯಕ್ಷ ಜೋ ಬೈಡೆನ್ ಅವರ ಕೊರೊನಾ ವೈರಸ್ ಸ್ಫಂದನೆ ಸಮನ್ವಯಾಧಿಕಾರಿ ಆಗಿರುವ ಜೆಫ್ರಿ ಜೀಂಟ್ಸ್ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತಾಡುತ್ತಾ, ಹೊಸ ಧೋರಣೆ ನವೆಂಬರ್ ಮೊದಲ ಭಾಗದಿಂದ ಶುರುವಾಗಲಿದೆ ಎಂದು ಹೇಳಿದರು. ಅಮೇರಿಕನಲ್ಲಿ ಕೊವಿಡ್ ಪಿಡುಗು ಅವ್ಯಾಹತವಾಗಿ ಹಬ್ಬಿದ ನಂತರ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣ ನಿಷೇಧವನ್ನು ಹೇರಿದ್ದರು. ಯುರೋಪಿಯನ್ ರಾಷ್ಟ್ರಗಳೊಂದಿಗೆ ಅಮೆರಿಕದ ಸಂಬಂಧಗಳು ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಜೋ ಬೈಡೆನ್ ಸರ್ಕಾರದ ಈ ನಿರ್ಧಾರ ಬಹಳ ಮಹತ್ವಪೂರ್ಣದ್ದೆನಿಸಿದೆ.

ಈಗ ಜಾರಿಯಲ್ಲಿರುವ ಸುರಕ್ಷಾ ಕ್ರಮಗಳು ಮುಂದುವರಿಯಲಿವೆ. ತನ್ನ ದೇಶದ ಸುಮಾರು 7 ಲಕ್ಷ ಜನರನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ವಿರುದ್ಧ ಬೈಡೆನ್ ಸರ್ಕಾರ ಯಾವುದೇ ಚಾನ್ಸ್ ತೆಗೆದುಕೊಳ್ಳಲು ತಯಾರಿಲ್ಲ. ದೇಶದಲ್ಲಿ ವೈರಸ್ ಹಾವಳಿ ಕೊನೆಗೊಂಡಿದೆ ಅಂತ ಹೇಳಲಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

‘ಎಲ್ಲಕ್ಕಿಂತ ಪ್ರಮುಖವಾದ ಸಂಗತಿಯೆಂದರೆ ಅಮೇರಿಕಾಗೆ ಪ್ರಯಾಣ ಬೆಳಸಲಿಚ್ಛಿಸುವ ವಿದೇಶಿಯರು, ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರಬೇಕು,’ ಎಂದು ಜೀಂಟ್ಸ್ ಹೇಳಿದ್ದಾರೆ.

ಅಮೇರಿಕದಿಂದ ಅನುಮೋದನೆ ಪಡೆದಿರುವ ಲಸಿಕೆ ತೆಗೆದುಕೊಂಡಿರಬೇಕೇ ಅಥವಾ ಬೇರೆ ಲಸಿಕೆಗಳಿಗೂ ಅಮೆರಿಕದ ಹೊಸ ಧೋರಣೆ ಅನ್ವಯವಾಗುತ್ತದೆಯೇ ಅನ್ನೋದು ಇನ್ನೂ ಖಚಿತಪಟ್ಟಿಲ್ಲ. ರಷ್ಯಾ ಮತ್ತು ಚೀನಾನಲ್ಲಿ ತಯಾರಾಗಿರುವ ಲಸಿಕೆ ತೆಗೆದುಕೊಂಡಿರುವರಿಗೆ ಪ್ರಯಾಣ ಬೆಳಸಲು ಅವಕಾಶ ಸಿಗಲಿದೆಯೇ ಅಂತ ಅಮೆರಿಕ ದೃಢಪಡಿಸಿಲ್ಲ. ಸದರಿ ಗೊಂದಲವನ್ನು ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ನಿವಾರಿಸಲಿದೆ ಎಂದು ಜೀಂಟ್ಸ್ ಹೇಳಿದ್ದಾರೆ.

‘ಕೆನಡಾ ಮತ್ತು ಮೆಕ್ಸಿಕೋನಿಂದ ಅಮೆರಿಕಾಗೆ ಬರುವ ವಾಹನಗಳ ಮೇಲೆ ವಿಧಿಸಿರುವ ನಿಷೇಧ ಮುಂದುವರಿಯಲಿದೆ. ಭೂಗಡಿ ನೀತಿಗಳಿಗೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ ಲಭ್ಯವಿಲ್ಲ,’ ಎಂದು ಜೀಂಟ್ಸ್ ಹೇಳಿದ್ದಾರೆ.

‘ಅಮೇರಿಕಾಗೆ ಹಾರುವ ವಿಮಾನವನ್ನು ಬೋರ್ಡ್ ಮಾಡುವ ಮೊದಲು ಪ್ರಯಾಣಿಕರು ತಾವು ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ದಾಖಲೆ ಒದಗಿಸಬೇಕು ಮತ್ತು ಮೂರು ದಿನಗಳ ಅವಧಿಯೊಳಗೆ ಪಡೆದಿರುವ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು,’ ಎಂದು ಜೀಂಟ್ಸ್ ಹೇಳಿದ್ದಾರೆ.

ಪೂರ್ಣ ಪ್ರಮಾಣದ ಲಸಿಕೆ ಹಾಕಿಸಿಕೊಂಡಿರದ ಅಮೇರಿಕನ್ನರು ಪ್ರಯಾಣಿಸಬಹದಾದರೂ ಒಂದು ದಿನ ಮೊದಲು ಮಾಡಿಸಿದ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು.

‘ಅಮೇರಿಕಾಗೆ ಬರುವ ವಿಮಾನಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಮೆರಿಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಂಟ್ಯಾಕ್ಸ್ ಟ್ರೇಸಿಂಗ್ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳು ಒದಗಿಸಲಿವೆ. ಅಮೆರಿಕಾದ ಹೊಸ ಅಂತರರಾಷ್ಟ್ರೀಯ ಪ್ರಯಾಣ ಸಿಸ್ಟಂ ಅಮೆರಿಕನ್ನರ ಅಂತರರಾಷ್ಟ್ರೀಯ ವಿಮಾನಯಾನ ಸುರಕ್ಷಿತವಾಗಿಸುವ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಆಧಾರಗೊಂಡಿದೆ,’ ಎಂದು ಜೀಂಟ್ಸ್ ಹೇಳಿದ್ದಾರೆ.

ಅಮೇರಿಕಾದ ಪ್ರಕಟಣೆಯನ್ನು ಟ್ರೇಡ್ ಗ್ರೂಪ್ ಏರ್ಲೈನ್ಸ್ ಫಾರ್ ಯುರೋಪ್ ಕೂಡಲೇ ಸ್ವಾಗತಿಸಿದೆ. ‘ಈ ನಿರ್ಧಾರವು ಟ್ರಾನ್ಸ್-ಅಟ್ಲಾಂಟಿಕ್ ಟ್ರಾಫಿಕ್ ಮತ್ತು ಪ್ರವಾಸೋದ್ಯಮಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡುತ್ತದೆ ಮತ್ತು ಕುಟುಂಬಗಳು ಮತ್ತು ಸ್ನೇಹಿತರನ್ನು ಮತ್ತೆ ಒಂದುಗೂಡಿಸುತ್ತದೆ,’ ಎಂದು ಅದು ಹೇಳಿದೆ.

ಗಮ್ಮತ್ತಿನ ಸಂಗತಿಯೆಂದರೆ ಅಮೆರಿಕ, ಕೇವಲ ಯುರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ಗೆ ಮಾತ್ರ ತನ್ನ ವಾಯುಗಡಿಯನ್ನು ತೆರೆಯುತ್ತದೆ ಅಂದುಕೊಳ್ಳಲಾಗಿತ್ತು, ಆದರೆ, ವಿಶ್ವದ ಎಲ್ಲ ರಾಷ್ಟ್ರಗಳಿಗೆ ಹೊಸ ಪ್ರಯಾಣ ನಿಯಮ ಅನ್ವಯಿಸುತ್ತದೆ ಎಂದು ಜೀಂಟ್ಸ್ ಹೇಳಿದ್ದಾರೆ.

ಪ್ರಸ್ತುತವಾಗಿ, ಕೇವಲ ಅಮೆರಿಕದ ನಾಗರಿಕರು, ಮತ್ತು ವಿಶೇಷ ವಿಸಾಗಳನ್ನು ಹೊಂದಿರುವ ಬಹತೇಕ ಯುರೋಪಿಯನ್ ದೇಶಗಳ ನಾಗರಿಕರು ಮಾತ್ರ ಅಮೆರಿಕಾಗೆ ಪ್ರಯಾಣಿಸಲು ಅನುಮತಿ ಗಿಟ್ಟಿಸುತ್ತಾರೆ.

ಅಮೇರಿಕಾದ ಈ ನಿರ್ಧಾರ ಇಯು ಮತ್ತು ಬ್ರಿಟಿಷ್ ಸರ್ಕಾರವನ್ನು ಕೆರಳಿಸಿದೆ. ಸೋಮವಾರದಂದು ತಮ್ಮ ಸದಸ್ಯ ರಾಷ್ಟ್ರಗಳಿಗೆ ಶಿಫಾರಸ್ಸೊಂದನ್ನು ಮಾಡಿರುವ ಯುರೋಪಿಯನ್ ಒಕ್ಕೂಟ, ಲಸಿಕೆ ಹಾಕಿಸಿಕೊಂಡಿರುವ ಅಮೇರಿಕನ್ನರು ಪ್ರಯಾಣಿಸಲು ಅರ್ಹರು ಎಂದಿದ್ದ ನಿಯಮವನ್ನು ಬಿಗಿಗೊಳಿಸಿ ಅವರ ಪ್ರಯಾಣದ ಮೇಲೆ ನಿಬಂಧನೆಗಳನ್ನು ಹೇರುವಂತೆ ಸೂಚಿಸಿದೆ.

ಹೊಸ ರಕ್ಷಣಾ ಮೈತ್ರಿಯ ಭಾಗವಾಗಿ ಯುಎಸ್ ನಿರ್ಮಿತ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸುವ ಬಗ್ಗೆ ಆಸ್ಟ್ರೇಲಿಯ ಸರ್ಕಾರ ಮಾಡಿರುವ ಹಠಾತ್ ಘೋಷಣೆಯ ಬಳಿಕ ಪ್ಯಾರಿಸ್, ಬೈಡನ್ ಸರ್ಕಾರದ ವಿರುದ್ಧ ವಿರುದ್ಧ ಕಿಡಿಕಾರಿದೆ. ಈ ಮೊದಲು ಸಬ್ ಮೆರೀನ್​​ಗಳನ್ನು ಫ್ರಾನ್ಸ್ ನಿಂದ ಖರೀದಿಸುವುದಾಗಿ ಹೇಳಿದ್ದ ಆಸ್ಟ್ರೇಲಿಯ ಈಗ ಅ ಒಪ್ಪಂದವನ್ನು ಕೈಬಿಟ್ಟಿದೆ.

ಬೈಡೆನ್ ಸರ್ಕಾರ ಬೆನ್ನಲ್ಲಿ ಚೂರಿ ಹಾಕುವ ಪರಿಪಾಠ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದ ಫ್ರಾನ್ಸ್, ವಾಷಿಂಗ್ಟನ್​ನಿಂದ ತನ್ನ ರಾಯಭಾರಿಯನ್ನು ವಾಪಸ್ಸು ಕರೆಸಿಕೊಂಡಿದೆ.

ಆದರೆ ಅಮೇರಿಕ, ಫ್ರಾನ್ಸ್ ತನ್ನೊಂದಿಗೆ ಮಾಡಿಕೊಂಡಿರುವ ವೈಮನಸ್ಸನ್ನು ಹೋಗಲಾಡಿಸಲೆಂದೇ ತಾನು ಹೊಸ ಪ್ರಯಾಣ ಧೋರಣೆ ಪ್ರಕಟಿಸಿದೆ ಎಂದು ಹೇಳಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಇನ್ನು ಮಾಸ್ಕ್ ಧರಿಸಬೇಕಾಗಿಲ್ಲ ಆದರೆ ಗುಂಪಿನಲ್ಲಿದ್ದಾಗ ಮಾಸ್ಕ್ ಇರಲಿ! ಅಧ್ಯಕ್ಷ ಜೋ ಬೈಡೆನ್ ಘೋಷಣೆ

Read Full Article

Click on your DTH Provider to Add TV9 Kannada