Video: ರಷ್ಯಾದ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿಗೆ 8 ಜನ ಸಾವು; ಕಿಟಕಿಯಿಂದ ಜಿಗಿದು ಓಡಿದ ವಿದ್ಯಾರ್ಥಿಗಳು

Video: ರಷ್ಯಾದ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿಗೆ 8 ಜನ ಸಾವು; ಕಿಟಕಿಯಿಂದ ಜಿಗಿದು ಓಡಿದ ವಿದ್ಯಾರ್ಥಿಗಳು
ರಷ್ಯಾದ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಿಟಿಕಿಯಿಂದ ಜಿಗಿದು ಓಡುತ್ತಿರುವುದು

ರಷ್ಯಾದಲ್ಲಿ ನಡೆದ ದಾಳಿಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣ ಸಿಗಲಿಲ್ಲ. ದುಷ್ಕರ್ಮಿ ಮಾರಕವಲ್ಲದ ಬಂದೂಕು ಬಳಿಸಿದ್ದ ಎಂದು ಕೆಲವು ವರದಿಗಳು ಹೇಳಿದ್ದರೆ, ಇಲ್ಲ ಆತ ಮಾರಕವಾದ ಗನ್​ ಬಳಿಸಿಯೇ ದಾಳಿ ನಡೆಸಿದ್ದಾನೆ ಎಂದೂ ಹೇಳಲಾಗಿದೆ.

TV9kannada Web Team

| Edited By: Sushma Chakre

Sep 20, 2021 | 1:49 PM

ರಷ್ಯಾದ ಪರ್ಮ್ ಸ್ಟೇಟ್​​ ವಿಶ್ಯವಿದ್ಯಾಲಯದಲ್ಲಿ ಅಪರಿಚಿತನೊಬ್ಬ ಗುಂಡಿನ ಗುಂಡಿನ ದಾಳಿ ನಡೆಸಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ ಬಂದೂಕು ಅಷ್ಟೊಂದು ಮಾರಕವಾಗಿರಲಿಲ್ಲ ಎಂದು ರಷ್ಯಾದ ಸ್ಥಳೀಯ ಮಾಧ್ಯಮ ಟಿಎಎಸ್​ಎಸ್​ ವರದಿ ಮಾಡಿದೆ. ಇನ್ನು ವ್ಯಕ್ತಿ ಯೂನಿವರ್ಸಿಟಿಯನ್ನು ಪ್ರವೇಶಿಸಿ ಗುಂಡಿನ ದಾಳಿ ನಡೆಸುತ್ತಿದ್ದಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಲಾಸ್​ ರೂಂಗೆ ಹೋಗಿ ಒಳಗಿನಿಂದ ಬೀಗ ಹಾಕಿಕೊಂಡಿದ್ದಾರೆ. ಉಳಿದಂತೆ ಕೆಲವು ವಿದ್ಯಾರ್ಥಿಗಳು ಕಿಟಕಿಗಳ ಮೂಲಕ ಜಿಗಿದು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.  

ರಷ್ಯಾದಲ್ಲಿ ನಡೆದ ದಾಳಿಯ ಬಗ್ಗೆ ಇನ್ನೂ ಸ್ಪಷ್ಟವಾದ ಚಿತ್ರಣ ಸಿಗಲಿಲ್ಲ. ದುಷ್ಕರ್ಮಿ ಮಾರಕವಲ್ಲದ ಬಂದೂಕು ಬಳಿಸಿದ್ದ ಎಂದು ಕೆಲವು ವರದಿಗಳು ಹೇಳಿದ್ದರೆ, ಇಲ್ಲ ಆತ ಮಾರಕವಾದ ಗನ್​ ಬಳಿಸಿಯೇ ದಾಳಿ ನಡೆಸಿದ್ದಾನೆ ಎಂದೂ ಹೇಳಲಾಗಿದೆ. ಭದ್ರತಾ ಸಿಬ್ಬಂದಿ ಯೂನಿವರ್ಸಿಟಿ ಕ್ಯಾಂಪಸ್​ಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಅಪರಿಚಿತ ದಾಳಿ ನಡೆಸುತ್ತಿದ್ದಂತೆ ಇತ್ತ ಕೆಲವು ವಿದ್ಯಾರ್ಥಿಗಳು ಕಿಟಕಿಯಿಂದ ಜಿಗಿದು, ಓಡಿ ಹೋಗುತ್ತಿರುವ ವಿಡಿಯೋಗಳು ಟ್ವಿಟರ್​​ನಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಪ್ರತಿನಿತ್ಯ ರನ್ನಿಂಗ್​ ಮಾಡುವ ಅಭ್ಯಾಸ ಇದೆಯೇ? ಈ ವಿಷಯಗಳನ್ನು ನೀವು ತಿಳಿಯಲೇಬೇಕು

Kirit Somaiya ಕೊಲ್ಹಾಪುರ ಭೇಟಿಗೆ ಮುನ್ನ ಕಿರೀಟ್ ಸೋಮಯ್ಯ ಪೊಲೀಸ್ ವಶಕ್ಕೆ; ಠಾಕ್ರೆ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

(Russia Firing 8 People Killed after Gunman opens fire in Perm State University of Russia 6 Injured)

Follow us on

Related Stories

Most Read Stories

Click on your DTH Provider to Add TV9 Kannada