ಅಮೆರಿಕದ ಎಲ್​ಸಾಲ್ವಡಾರ್ ಫುಟ್ಬಾಲ್​​​ ಕ್ರೀಡಾಂಗಣದಲ್ಲಿ ಭೀಕರ ಘಟನೆ: ​ಕಾಲ್ತುಳಿತಕ್ಕೊಳಗಾಗಿ 12 ಜನ ಸಾವು

ಅಲಿಯಾಂಜಾ ಮತ್ತು ಎಫ್‌ಎಎಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಅಮೆರಿಕದ ಎಲ್​ಸಾಲ್ವಡಾರ್ ರಾಜಧಾನಿ ಸ್ಯಾನ್​ ಸಾಲ್ವಡಾರ್​ನಲ್ಲಿ​​​ರುವ ಕಸ್ಕಟ್ಲಾನ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅಭಿಮಾನಿಗಳು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೆರಿಕದ ಎಲ್​ಸಾಲ್ವಡಾರ್ ಫುಟ್ಬಾಲ್​​​ ಕ್ರೀಡಾಂಗಣದಲ್ಲಿ ಭೀಕರ ಘಟನೆ: ​ಕಾಲ್ತುಳಿತಕ್ಕೊಳಗಾಗಿ 12 ಜನ ಸಾವು
ಎಲ್​ಸಾಲ್ವಡಾರ್ ಫುಟ್ಬಾಲ್​​​ ಕ್ರೀಡಾಂಗಣ

Updated on: May 21, 2023 | 2:33 PM

ಸ್ಯಾನ್ ಸಾಲ್ವಡೋರ್: ಅಮೆರಿಕದ ಎಲ್​ಸಾಲ್ವಡಾರ್​​​ ಕ್ರೀಡಾಂಗಣದಲ್ಲಿ(El Salvador Football Stadium) ನಡೆಯುತ್ತಿದ್ದ ಸ್ಥಳೀಯ ಫುಟ್ಬಾಲ್ ಪಂದ್ಯಾವಳಿ ವೀಕ್ಷಿಸಲು ಬಂದಿದ್ದ ಅಭಿಮಾನಿಗಳ ನಡುವೆ ನೂಕುನುಗ್ಗಲಾಗಿದೆ. ಈ ವೇಳೆ ಕಾಲ್ತುಳಿತ ಉಂಟಾಗಿ 12 ಜನ ಮೃತಪಟ್ಟ ಘಟನೆ ನಡೆದಿದೆ. ಅಲಿಯಾಂಜಾ ಮತ್ತು ಎಫ್‌ಎಎಸ್ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಅಮೆರಿಕದ ಎಲ್​ಸಾಲ್ವಡಾರ್ ರಾಜಧಾನಿ ಸ್ಯಾನ್​ ಸಾಲ್ವಡಾರ್​ನಲ್ಲಿ​​​ರುವ ಕಸ್ಕಟ್ಲಾನ್ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳು ಒಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ 12 ಮಂದಿ ಮೃತಪಟ್ಟಿದ್ದು ಅನೇಕರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತುರ್ತು ಸಿಬ್ಬಂದಿ ಕ್ರೀಡಾಂಗಣದಿಂದ ಜನರನ್ನು ಸ್ಥಳಾಂತರಿಸಿದ್ದು ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಕ್ರೀಡಾಂಗಣದಲ್ಲಿ ನೂರಾರು ಪೊಲೀಸ್ ಅಧಿಕಾರಿಗಳು ಮತ್ತು ಆಂಬ್ಯುಲೆನ್ಸ್ ನಿಂತಿವೆ.

ಎಲ್​ಸಾಲ್ವಡಾರ್ ಫುಟ್ಬಾಲ್​​​ ಕ್ರೀಡಾಂಗಣಇದನ್ನೂ ಓದಿ: ಸುಡಾನ್‌ನಲ್ಲಿ ಗುಂಡಿನ ದಾಳಿಗೆ ಪ್ರಾಣ ಕಳೆದುಕೊಂಡ ಭಾರತೀಯ; 1 ತಿಂಗಳ ಬಳಿಕ ಕುಟುಂಬಕ್ಕೆ ಪಾರ್ಥಿವ ಶರೀರ ರವಾನೆ

ದೇಶದ ಆಸ್ಪತ್ರೆಗಳಲ್ಲಿ ಎಲ್ಲಾ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಫ್ರಾನ್ಸಿಸ್ಕೊ ​​ಅಲಾಬಿ ಮಾಹಿತಿ ನೀಡಿದ್ದಾರೆ. ನಾಗರಿಕ ರಕ್ಷಣಾ ಸೇವೆಯ ಮೊದಲ ಪ್ರತಿಸ್ಪಂದಕರು ಸ್ಥಳದಲ್ಲಿದ್ದಾರೆ ಎಂದು ಆಂತರಿಕ ಸಚಿವ ಜುವಾನ್ ಕಾರ್ಲೋಸ್ ಬಿಡೆಗೈನ್ ಹೇಳಿದ್ದಾರೆ. ಆಸ್ಪತ್ರೆಗಳಲ್ಲಿ 500 ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತುರ್ತು ಸೇವೆಗಳ ಗುಂಪಿನ ಕಮಾಂಡೋಸ್ ಡಿ ಸಾಲ್ವಮೆಂಟೊದ ವಕ್ತಾರ ಕಾರ್ಲೋಸ್ ಫ್ಯೂಯೆಂಟೆಸ್ ತಿಳಿಸಿದ್ದಾರೆ.

ವಿದೇಶದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ