Sign In

By signing in or creating an account, you agree with Associated Broadcasting Company's Terms & Conditions and Privacy Policy.

Missing: ಕಂಪನಿಯೊಂದರ ಮುಖ್ಯಸ್ಥ ಎವರೆಸ್ಟ್ ಉತ್ತುಂಗಕ್ಕೆ ಏರಿ ನಾಪತ್ತೆ; ಭಾರತೀಯ ಮೂಲದ ಸಿಂಗಾಪುರ ವ್ಯಕ್ತಿಗಾಗಿ ಹುಡುಕಾಟ

Mt. Everest: ಎವರೆಸ್ಟ್ ಶಿಖರದ ತುದಿ ತಲುಪಿ ಕೆಳಗಿಳಿಯುವಾಗ ಮೇ 19ರಂದು ಭಾರತೀಯ ಮೂಲದ ಸಿಂಗಾಪುರ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇವರನ್ನು ಹುಡುಕಲು ಸಹಾಯ ಮಾಡುವಂತೆ ಸಂಬಂಧಿತ ದೇಶಗಳಿಗೆ ಮನವಿ ಮಾಡಲಾಗುತ್ತಿದೆ.

Missing: ಕಂಪನಿಯೊಂದರ ಮುಖ್ಯಸ್ಥ ಎವರೆಸ್ಟ್ ಉತ್ತುಂಗಕ್ಕೆ ಏರಿ ನಾಪತ್ತೆ; ಭಾರತೀಯ ಮೂಲದ ಸಿಂಗಾಪುರ ವ್ಯಕ್ತಿಗಾಗಿ ಹುಡುಕಾಟ
ಮೌಂಟ್ ಎವರೆಸ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2023 | 4:03 PM

ನವದೆಹಲಿ: ಭಾರತ ಮೂಲದ ಸಿಂಗಾಪುರ ವ್ಯಕ್ತಿಯೊಬ್ಬರು ಎವರೆಸ್ಟ್ ಶಿಖರದ ಉತ್ತುಂಗಕ್ಕೆ (Mount Everest Summit) ಎರಿ ಬಳಿಕ ಕಾಣೆಯಾಗಿದ್ದಾರೆ. ಸಿಂಗಾಪುರದಲ್ಲಿ ರಿಯಲ್ ಎಸ್ಟೇಟ್ ಕಂಪನಿ ಜೋನ್ಸ್ ಲ್ಯಾಂಗ್ ಲಾಸಾಲ್ಲೆಯಲ್ಲಿ (Jones Lang Lasalle) ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ 39 ವರ್ಷದ ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ (Srinivas Sainis Dattatreya) ಅವರು ಮೌಂಟ್ ಎವರೆಸ್ಟ್​ನಲ್ಲಿ ಕಾಣೆಯಾಗಿರುವ ವ್ಯಕ್ತಿ. ಶ್ರೀನಿವಾಸ್ ಅವರು ಶಿಖರದ ತುದಿ ತಲುಪಿ ಕೆಳಗಿಳಿಯಬೇಕಾದರೆ 8,000 ಮೀಟರ್ ಎತ್ತರದಲ್ಲಿ ಕೆಳಗೆ ಕುಸಿದು ಇತರ ಪರ್ವತಾರೋಹಿಗಳಿಂದ ಬೇರ್ಪಟ್ಟಿರಬಹುದು ಎಂಬ ಶಂಕೆ ಇದೆ.

ಶ್ರೀನಿವಾಸ್ ಅವರ ಸಂಬಂಧಿ ದಿವ್ಯಾ ಭರತ್ ಎಂಬಾಕೆ ಚೇಂಜ್ ಡಾಟ್ ಆರ್ಗ್ Change.org ಮೂಲಕ ಪೆಟಿಶನ್ ಹೊರಡಿಸಿದ್ದು, ಸಂಬಂಧಿತ ದೇಶಗಳು ಈ ಘಟನೆಯನ್ನು ಕಾಳಜಿಯಿಂದ ಪರಿಗಣಿಸಿ ಈ ದುರ್ಗಮ ಪರ್ವತದಲ್ಲಿ ಶ್ರೀನಿವಾಸ್ ಅವರನ್ನು ಶೋಧಿಸಲು ಸಹಾಯ ಮಾಡುವಂತೆ ಕೋರಿದ್ದಾರೆ. ಈ ಪೆಟಿಶನ್​ಗೆ ಸಹಿ ಹಾಕಿ ಅದನ್ನು ಸಂಬಂಧಿತ ದೇಶಗಳ ಗಮನಕ್ಕೆ ತರಲು ದಿವ್ಯಾ ಭರತ್ ಪ್ರಯತ್ನಿಸುತ್ತಿದ್ದಾರೆ.

ಶ್ರೀನಿವಾಸ್ ಅವರಿಗೆ ಫ್ರಾಸ್ಟ್​ಬೈಟ್ (ಚಳಿಗೆ ಚರ್ಮ ತೊಂದರೆ) ಮತ್ತು ಅಲ್ಟಿಟ್ಯೂಟ್ ಸಿಕ್ನೆಸ್ ಬಾಧಿಸಿದ್ದಿರಬಹುದು. 8,000 ಮೀಟರ್ ಎತ್ತರದಲ್ಲಿ ಅವರು ಬಿದ್ದಿದ್ದಾರೆ. ಟಿಬೆಟಿಯನ್ ಕಡೆಯ ಭಾಗಕ್ಕೆ ಅವರು ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಶನಿವಾರ ಶೆರ್ಪಾಗಳ ಒಂದು ತಂಡ ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ ಅವರಿಗೆ ಶೋಧ ಕಾರ್ಯಾಚರಣೆ ಕೈಗೊಂಡಿತು. ಆದರೆ, ಅದರಿಂದ ಫಲ ಸಿಕ್ಕಿಲ್ಲ.

ಇದನ್ನೂ ಓದಿMount Everest: ಮೌಂಟ್ ಎವರೆಸ್ಟ್​ ಏರಲು ತೆರಳಿದ್ದ ಭಾರತೀಯ ಮಹಿಳಾ ಆರೋಹಿ ಸಾವು

ನಾನು ವಾಪಸ್ ಬರೋದು ಕಷ್ಟ ಎಂದು ಪತ್ನಿಗೆ ಮೆಸೇಜ್ ಕಳುಹಿಸಿದ್ದ ದತ್ತಾತ್ರೇಯ

ಶ್ರೀನಿವಾಸ್ ಅವರು ಏಪ್ರಿಲ್ 1ರಂದು ಮೌಂಟ್ ಎವರೆಸ್ಟ್ ಹತ್ತಲು ಆರಂಭಿಸಿದರು. ಜೂನ್ 4ಕ್ಕೆ ಅವರು ವಾಪಸ್ ಬರುವ ನಿರೀಕ್ಷೆ ಇತ್ತು. ಶುಕ್ರವಾರ (ಮೇ 19) ಅವರು ತಮ್ಮ ಪತ್ನಿಗೆ ಮೆಸೇಜ್ ಕಳುಹಿಸಿ, ತಾನು ಮೌಂಟ್ ಎವರೆಸ್ಟ್ ತುದಿ ಮುಟ್ಟಿದ್ದಾಗಿ ಹೇಳಿದ್ದರು. ಆದರೆ, ನಂತರ ಅವರು ತಾನು ಕೆಳಗೆ ಬರಲು ಸಾಧ್ಯವಾಗುವುದಿಲ್ಲ ಎಂದೂ ತಿಳಿಸಿದ್ದರು. ಶುಕ್ರವಾರ ಮಧ್ಯಾಹ್ನ 3:30ಕ್ಕೆ ಅವರ ಸಂಪರ್ಕ ಕೊನೆಯದ್ದಾಗಿತ್ತು ಎಂದು ಶ್ರೀನಿವಾಸ್ ಪತ್ನಿ ಸುಷ್ಮಾ ಸೋಮ ಹೇಳಿದ್ದಾರೆ.

ಶ್ರೀನಿವಾಸ್ ಸೈನಿಸ್ ದತ್ತಾತ್ರೇಯ ಅವರ ಜೊತೆ ಇದ್ದ ಇಬ್ಬರು ಶೆರ್ಪಾಗಳು ಹಾಗೂ ಮತ್ತೊಬ್ಬ ವ್ಯಕ್ತಿ ಶಿಖರದಿಂದ ಯಶಸ್ವಿಯಾಗಿ ಕೆಳಗಿಳಿದಿದ್ದಾರೆ. ಆದರೆ, ತಮ್ಮ ಪತಿ ಮಾತ್ರ ಬರಲಿಲ್ಲ ಎಂದು ಸುಷ್ಮಾ ಆತಂಕ ವ್ಯಕ್ತಪಡಿಸಿದ್ದಾರೆ. ಎವರೆಸ್ಟ್ ಪರ್ವತದ ದುರ್ಗಮ ಜಾಗದಲ್ಲಿ ಹುಡುಕಲು ನಿಷ್ಣಾತರಾದ ತಂಡವನ್ನು ಕಳುಹಿಸಿಕೊಡಬೇಕೆಂದು ಚೇಂಜ್ ಡಾಟ್ ಆರ್ಗ್​ನ ಪೆಟಿಶನ್​ನಲ್ಲಿ ಮನವಿ ಮಾಡಲಾಗಿದೆ.

ಇನ್ನಷ್ಟು ವಿಶ್ವ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು