Mount Everest: ಮೌಂಟ್ ಎವರೆಸ್ಟ್ ಏರಲು ತೆರಳಿದ್ದ ಭಾರತೀಯ ಮಹಿಳಾ ಆರೋಹಿ ಸಾವು
ನೇಪಾಳದ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್(Mount Everest) ನ ಬೇಸ್ ಕ್ಯಾಂಪ್‌ನಲ್ಲಿ ಭಾರತೀಯ ಮಹಿಳಾ ಆರೋಹಿಯೊಬ್ಬರು ಗುರುವಾರ (ಮೇ 18) ಸಾವನ್ನಪ್ಪಿದ್ದಾರೆ.
ನೇಪಾಳದ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್(Mount Everest) ನ ಬೇಸ್ ಕ್ಯಾಂಪ್‌ನಲ್ಲಿ ಭಾರತೀಯ ಮಹಿಳಾ ಆರೋಹಿಯೊಬ್ಬರು ಗುರುವಾರ (ಮೇ 18) ಸಾವನ್ನಪ್ಪಿದ್ದಾರೆ. 59 ವರ್ಷದ ಮಹಿಳಾ ಪರ್ವತಾರೋಹಿಗೆ ಅನಾರೋಗ್ಯದ ಕಾರಣ ಫೇಸ್ ಮೇಕರ್ ಅಳವಡಿಸಲಾಗಿತ್ತು. ಪೇಸ್ ಮೇಕರ್ ಮೂಲಕ ಮೌಂಟ್ ಎವರೆಸ್ಟ್ ಏರುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಬಯಸಿದ್ದರು. ಮಾಹಿತಿ ನೀಡಿದ ನೇಪಾಳದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಯುವರಾಜ್ ಖತಿವಾಡ, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರುವ ಮೊದಲು ಸುಝೇನ್ ಲಿಯೋಪೋಲ್ಡಿನಾ ಜೀಸಸ್ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದರಿಂದಾಗಿ ಅವರನ್ನು ಸೋಲುಕುಂಬು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಗುರುವಾರ ನಿಧನರಾದರು.
ಆರೋಹಣಕ್ಕೆ ಮೊದಲು ಮಾಡಿದ ವ್ಯಾಯಾಮದಿಂದ ಸಾಮಾನ್ಯ ವೇಗ ಮತ್ತು ಕ್ಲೈಂಬಿಂಗ್‌ನಲ್ಲಿ ತೊಂದರೆಯಾಗುತ್ತಿದೆ ಎಂದು ಖತಿವಾಡ ಹೇಳಿದರು. ಈ ಕಾರಣದಿಂದಾಗಿ ಅವರು ಮೌಂಟ್ ಎವರೆಸ್ಟ್ ಏರದಿರಲು ಸೂಚಿಸಲಾಯಿತು. ಸುಝಾನೆ ಪೇಸ್ ಮೇಕರ್ ಅಳವಡಿಸಿರುವುದರಿಂದ ಸಮಸ್ಯೆಗಳು ಮತ್ತಷ್ಟು ಹೆಚ್ಚಿದ್ದವು.
ಮತ್ತಷ್ಟು ಓದಿ: Mount Everest: 26 ಬಾರಿ ಮೌಂಟ್ ಎವರೆಸ್ಟ್ ಏರಿದ ವಿಶ್ವದ 2ನೇ ವ್ಯಕ್ತಿ ನೇಪಾಳದ ಶೆರ್ಪಾ
ಈ ಸಲಹೆಯನ್ನು ಸ್ವೀಕರಿಸಲು ಸುಝೇನ್ ಸಿದ್ಧರಿರಲಿಲ್ಲ, ಮೌಂಟ್ ಎವರೆಸ್ಟ್ ಶಿಖರ ಏರಲು ಅನುಮತಿ ಪಡೆಯುವ ಶುಲ್ಕವನ್ನು ಈಗಾಗಲೇ ಪಾವತಿಸಿದ್ದೇನೆ ಎಂದು ವಾದಿಸಿದ್ದರು.
ದಂಡಯಾತ್ರೆಯ ಸಂಘಟಕ ಮತ್ತು ಗ್ಲೇಸಿಯರ್ ಹಿಮಾಲಯನ್ ಟ್ರ್ಯಾಕ್‌ನ ಅಧ್ಯಕ್ಷ ಡೆಂಡಿ ಶೆರ್ಪಾ, ಸುಝೇನ್ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನಿಂದ 5,800 ಮೀಟರ್ ಎತ್ತರಕ್ಕೆ ಏರಲು ಸಾಧ್ಯವಾಯಿತು ಎಂದು ಹೇಳಿದರು. ನಂತರ ಅವರನ್ನು ಬಲವಂತವಾಗಿ ಲುಕ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.
ಐದು ದಿನಗಳ ಮುಂಚಿತವಾಗಿ ನಾವು ಸುಝೇನ್ ಎವರೆಸ್ಟ್ ಏರುವುದನ್ನು ನಾವು ನಿರಾಕರಿಸಿದ್ದೆವು, ಆದರೆ ಅವರು ಎವರೆಸ್ಟ್ ಹತ್ತಲೇಬೇಕೆನ್ನುವ ಛಲದಲ್ಲಿದ್ದರು. ಹತ್ತುವ ಮುನ್ನ ನಡೆಸಿದ ಕಸರತ್ತಿನಲ್ಲಿ ಸುಝೇನ್ ಪರ್ವತ ಹತ್ತಲು ಯೋಗ್ಯಳಲ್ಲ ಎಂಬುದು ಗೊತ್ತಾಗಿದೆ ಎಂದೂ ಅವರು ತಿಳಿಸಿದರು. ಈ ಬಗ್ಗೆ ಶೆರ್ಪಾ ಪ್ರವಾಸೋದ್ಯಮ ಇಲಾಖೆಗೂ ಪತ್ರ ಬರೆದಿದ್ದರು.
ಬೇಸ್ ಕ್ಯಾಂಪ್‌ನಿಂದ ಕೇವಲ 250 ಮೀಟರ್ ಎತ್ತರದಲ್ಲಿರುವ ಕ್ರಾಂಪ್ಟನ್ ಪಾಯಿಂಟ್ ತಲುಪಲು ಸುಝೇನ್ಗೆ ಮೊದಲ ಪ್ರಯತ್ನದಲ್ಲಿ 5 ಗಂಟೆಗಳ ಕಾಲ ತೆಗೆದುಕೊಂಡರು. ಅದೇ ಸಮಯದಲ್ಲಿ, ಆರೋಹಿಗಳು ಇಲ್ಲಿಗೆ ತಲುಪಲು ಕೇವಲ 15 ರಿಂದ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ ಎರಡನೇ ಪ್ರಯತ್ನದಲ್ಲಿ 6 ಗಂಟೆ ಮತ್ತು ಮೂರನೇ ಪ್ರಯತ್ನದಲ್ಲಿ 12 ಗಂಟೆ ತೆಗೆದುಕೊಂಡರು.
ವಿಶ್ವದಾಖಲೆ ಮಾಡುವ ಆಸೆ ಇತ್ತು ಪೇಸ್‌ಮೇಕರ್‌ನೊಂದಿಗೆ ಮೌಂಟ್ ಎವರೆಸ್ಟ್ ಅನ್ನು ಹತ್ತಿದ ಏಷ್ಯಾದ ಮೊದಲ ಮಹಿಳೆ ಎಂಬ ವಿಶ್ವ ದಾಖಲೆಯನ್ನು ಮಾಡಲು ಬಯಸುವುದಾಗಿ ಅವರು ಹೇಳಿದರು. ತನ್ನ ಗಂಟಲಿನಲ್ಲಿ ಸಮಸ್ಯೆ ಇದೆ ಮತ್ತು ಆಹಾರವನ್ನು ಸುಲಭವಾಗಿ ನುಂಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.
ಸುಝೇನ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಶುಕ್ರವಾರ ಅವರು ಕಠ್ಮಂಡು ತಲುಪಲಿದ್ದಾರೆ. ಈ ವರ್ಷ ಮೌಂಟ್ ಎವರೆಸ್ಟ್ ಏರುವಾಗ ಸಂಭವಿಸಿದ 8ನೇ ಸಾವು ಇದಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ