Lahari Pathivada: ಅಮೆರಿಕಾದಲ್ಲಿ ಮತ್ತೊಬ್ಬ ತೆಲುಗು ಯುವತಿಯ ಅನುಮಾನಾಸ್ಪದ ಸಾವು

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲಹರಿ ಹೇಗೆ ಸತ್ತಳು ಎಂಬ ತನಿಖೆ ಇನ್ನೂ ಮುಂದುವರೆದಿದೆ.

Lahari Pathivada: ಅಮೆರಿಕಾದಲ್ಲಿ ಮತ್ತೊಬ್ಬ ತೆಲುಗು ಯುವತಿಯ ಅನುಮಾನಾಸ್ಪದ ಸಾವು
ಅಮೆರಿಕಾದಲ್ಲಿ ಮತ್ತೊಬ್ಬ ತೆಲುಗು ಯುವತಿಯ ಅನುಮಾನಾಸ್ಪದ ಸಾವು
Follow us
ಸಾಧು ಶ್ರೀನಾಥ್​
|

Updated on:May 18, 2023 | 8:19 PM

ಅಮೆರಿಕದಲ್ಲಿ ಭಾರತೀಯ ಮೂಲದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಇತ್ತೀಚೆಗೆ, ಟೆಕ್ಸಾಸ್‌ನಲ್ಲಿ ನಾಪತ್ತೆಯಾಗಿದ್ದ 25 ವರ್ಷದ ತೆಲುಗು ಹುಡುಗಿ ಲಹರಿ ಪತಿವಾಡ (Lahari Pathivada) 322 ಕಿಲೋಮೀಟರ್ ದೂರದ ಓಕ್ಲಹೋಮಾದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕಪ್ಪು ಬಣ್ಣದ ಟೊಯೊಟಾ ಕಾರಿನಲ್ಲಿ ಕೆಲಸಕ್ಕೆ ತೆರಳಿದ್ದ ಲಹರಿ, ಮರುದಿನದಿಂದ ನಾಪತ್ತೆಯಾಗಿದ್ದರು. ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಓಕ್ಲಹೋಮಾದಲ್ಲಿ ಮೃತದೇಹ ಪತ್ತೆಯಾದ ವಿಷಯ ಬೆಳಕಿಗೆ ಬಂದಿದೆ.

ಟೆಕ್ಸಾಸ್‌ನ ಮೆಕ್‌ ಇಂಡಿಯನ್ ಮೂಲದ ಲಹರಿ, ಬ್ಲೂ ವ್ಯಾಲಿ ವೆಸ್ಟ್ ಹೈಸ್ಕೂಲ್‌ನಲ್ಲಿ ಓದಿದ್ದಾರೆ. ಕಾನ್ಸಾಸ್ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ್ದಾರೆ. ಅದರ ನಂತರ ಅವರು ಓವರ್ಲ್ಯಾಂಡ್ ಪ್ರಾದೇಶಿಕ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. ಮೇ 12ರಂದು ಕರ್ತವ್ಯ ಮುಗಿಸಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಡಲ್ಲಾಸ್‌ನ ಉಪನಗರದಲ್ಲಿ ಲಹರಿ ಕೊನೆಯ ಬಾರಿ ಕಾರು ಚಾಲನೆ ಮಾಡಿರುವುದು ತಿಳಿದುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆಕೆ ನಾಪತ್ತೆಯಾದ ಒಂದು ದಿನದ ನಂತರ ಮೇ 13 ರಂದು ಆಕೆಯ ಶವ ಪತ್ತೆಯಾಗಿತ್ತು.

ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರ ಕುಟುಂಬದವರು ಹಾಗೂ ಸ್ನೇಹಿತರು ಆಕೆಯ ಸಾವಿನ ಸುದ್ದಿ ತಿಳಿದು ಕಂಬನಿ ಮಿಡಿದಿದ್ದಾರೆ. ಮತ್ತೊಂದೆಡೆ, ಲಹರಿ ಹೇಗೆ ಸತ್ತಳು ಎಂಬ ತನಿಖೆ ಇನ್ನೂ ಮುಂದುವರೆದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:15 pm, Thu, 18 May 23