AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mount Everest: 26 ಬಾರಿ ಮೌಂಟ್ ಎವರೆಸ್ಟ್ ಏರಿದ ವಿಶ್ವದ 2ನೇ ವ್ಯಕ್ತಿ ನೇಪಾಳದ ಶೆರ್ಪಾ

ನೇಪಾಳಿ ಶೆರ್ಪಾ ಎಂಬ ಮಾರ್ಗದರ್ಶಿಯೊಬ್ಬರು ಭಾನುವಾರ 26ನೇ ಬಾರಿಗೆ ಮೌಂಟ್ ಎವರೆಸ್ಟ್​​ನ್ನು ಏರಿದ್ದರೆ, ಈ ಸಾಧನೆ ಮಾಡಿದ ವಿಶ್ವದ ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ಹೈಕಿಂಗ್ ಅಧಿಕಾರಿಗಳು ತಿಳಿಸಿದ್ದಾರೆ.

Mount Everest: 26 ಬಾರಿ ಮೌಂಟ್ ಎವರೆಸ್ಟ್ ಏರಿದ ವಿಶ್ವದ 2ನೇ ವ್ಯಕ್ತಿ ನೇಪಾಳದ ಶೆರ್ಪಾ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: May 14, 2023 | 2:35 PM

Share

ಕಠ್ಮಂಡು: ನೇಪಾಳಿ ಶೆರ್ಪಾ ಎಂಬ ಮಾರ್ಗದರ್ಶಿಯೊಬ್ಬರು ಭಾನುವಾರ 26ನೇ ಬಾರಿಗೆ ಮೌಂಟ್ ಎವರೆಸ್ಟ್​​ನ್ನು ಏರಿದ್ದರೆ, ಈ ಸಾಧನೆ ಮಾಡಿದ ವಿಶ್ವದ ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ಹೈಕಿಂಗ್ ಅಧಿಕಾರಿಗಳು ತಿಳಿಸಿದ್ದಾರೆ. 46 ವರ್ಷದ ಪಸಾಂಗ್ ದಾವಾ ಶೆರ್ಪಾ ಅವರು 8,849 ಮೀ (29,032-ಅಡಿ) ಶಿಖರದಲ್ಲಿ ನಿಂತು, ಕಾಮಿ ರೀಟಾ ಶೆರ್ಪಾ ಅವರೊಂದಿಗೆ ದಾಖಲೆ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ ಎಂದು ಸರ್ಕಾರಿ ಪ್ರವಾಸೋದ್ಯಮ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಹೇಳಿದ್ದಾರೆ. ಇದೀಗ ಎವರೆಸ್ಟ್ ಏರುತ್ತಿರುವ ಕಾಮಿ ರೀಟಾ ಅಗ್ರಸ್ಥಾನಕ್ಕೇರಿದರೆ ಮತ್ತೊಂದು ದಾಖಲೆ ಬರೆಯಬಹುದು.

ಪಸಾಂಗ್ ದಾವಾ ಅವರು ಹಂಗೇರಿಯ ಕ್ಲೈಂಟ್‌ನೊಂದಿಗೆ ಈ ಶಿಖರವನ್ನು ತಲುಪಿದ್ದಾರೆ ಎಂದು ಅವರ ಉದ್ಯೋಗದಾತ ಇಮ್ಯಾಜಿನ್ ನೇಪಾಲ್ ಟ್ರೆಕ್ಸ್, ಹೈಕಿಂಗ್ ಕಂಪನಿಯ ಅಧಿಕಾರಿ ಹೇಳಿದರು. ಅವರು ಈಗ ಮೌಂಟ್ ಎವರೆಸ್ಟ್ ಮೇಲಿನಿಂದ ಕೆಳಗಿಳಿಯುತ್ತಿದ್ದಾರೆ ಮತ್ತು ಯಾವುದೇ ತೊಂದರೆ ಆಗಿಲ್ಲ ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ರಾಯಿಟರ್ಸ್ಗೆ ತಿಳಿಸಿದರು.

ಇದನ್ನೂ ಓದಿ:Mount Everest : ಮೌಂಟ್ ಎವರೆಸ್ಟ್ ಮೇಲೆ ಉಕ್ರೇನಿಯನ್ ಧ್ವಜ ಹಾರಿಸಿದ ರಷ್ಯಾದ ಮಹಿಳೆ

ಇವರನ್ನು ಹೆಚ್ಚಾಗಿ ಶೆರ್ಪಾಗಳು ಎಂದು ಕರೆಯುವುದಕ್ಕಿಂತ ಕ್ಲೈಂಬಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಮುಖ್ಯವಾಗಿ ಪರ್ವತಗಳಲ್ಲಿ ವಿದೇಶಿ ಗ್ರಾಹಕರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಭಾನುವಾರ ಶಿಖರವನ್ನು ಏರಿದ ಪಾಕಿಸ್ತಾನಿ ಮಹಿಳೆ ನೈಲಾ ಕಿಯಾನಿ ಅವರು ಮಾರ್ಚ್‌ನಿಂದ ಮೇ ವರೆಗೆ ನಡೆಯುವ ಈ ವರ್ಷದ ಕ್ಲೈಂಬಿಂಗ್ ಋತುವಿನಲ್ಲಿ ಎವರೆಸ್ಟ್ ಶಿಖರವನ್ನು ಏರಿದ ಮೊದಲ ವಿದೇಶಿ ಆರೋಹಿ ಎಂದು ದಾವಾ ಫುಟಿ ಹೇಳಿದರು. ಅನೇಕ ವಿದೇಶಿ ಆರೋಹಿಗಳು ಈಗ ಶಿಖರದತ್ತ ಸಾಗುತ್ತಿರುವ ಕಾರಣ ಎಲ್ಲರಿಗೂ ಅನುಮತಿ ನೀಡುವ ಬಗ್ಗೆ ಕೆಲವೊಂದು ಕ್ರಮಗಳನ್ನು ತರಲಾಗುತ್ತದೆ.