America: ಗೆಳತಿ ಗರ್ಭಪಾತ ಮಾಡಿಸಿಕೊಂಡಿದ್ದಕ್ಕೆ ಹತ್ಯೆ ಮಾಡಿದ ಪ್ರಿಯಕರ
ಗೆಳತಿ ಗರ್ಭಪಾತ ಮಾಡಿಸಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯಕರನೊಬ್ಬ ಆಕೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಗೆಳತಿ ಗರ್ಭಪಾತ ಮಾಡಿಸಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯಕರನೊಬ್ಬ ಆಕೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. 22 ವರ್ಷದ ಹೆರಾಲ್ಡ್ ಥಾಂಪ್ಸನ್, 26 ವರ್ಷದ ಗೇಬ್ರಿಯೆಲಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ, ಆಕೆಯನ್ನು ಸ್ಟ್ರಿಪ್ ಮಾಲ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ಡಲ್ಲಾಸ್ ಪೊಲೀಸರು ತಿಳಿಸಿದ್ದಾರೆ. ಕೊಲೊರಾಡೊಗೆ ಸುಮಾರು 800 ಕಿ.ಮೀ ಪ್ರಯಾಣ ಬೆಳೆಸಿ ಹಿಂದಿನ ದಿನ ರಾತ್ರಿ ಬಂದಿದ್ದರು, ಅಲ್ಲಿ ಗರ್ಭಾವಸ್ಥೆಯ ಯಾವ ಹಂತದಲ್ಲಾದರೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಲಾಗಿದೆ.
ಟೆಕ್ಸಾಸ್‌ನಲ್ಲಿ, ವೈದ್ಯಕೀಯ ತುರ್ತುಸ್ಥಿತಿ ಸಂಭವಿಸದ ಹೊರತು ಸುಮಾರು ಆರು ವಾರಗಳ ನಂತರ ಗರ್ಭಪಾತವು ಕಾನೂನುಬಾಹಿರವಾಗಿದೆ. ಪ್ರಿಯಕರನಿಗೆ ಆಕೆ ಗರ್ಭಪಾತ ಮಾಡಿಸಿಕೊಳ್ಳುವುದು ಇಷ್ಟವಿರಲಿಲ್ಲ ಎಂದು ತಿಳಿದುಬಂದಿದೆ. ಪಾರ್ಕಿಂಗ್ ಸ್ಥಳದಲ್ಲಿದ್ದ ಸಿಸಿಟಿವಿ ಗಮನಿಸಿದಾಗ ಬೆಳಗ್ಗೆ 7.30ರ ಸುಮಾರಿಗೆ ಅವರಿಬ್ಬರು ಜಗಳವಾಡುತ್ತಿದ್ದುದು ಕಂಡುಬಂದಿದೆ.
ಮತ್ತಷ್ಟು ಓದಿ: ತರಗತಿಯಲ್ಲಿ ಗರ್ಭಪಾತ: ಕೊಠಡಿಯೊಳಕ್ಕೆ ನುಗ್ಗಿ ಬಾಗಿಲು ಹಾಕಿಕೊಂಡ ಬಿ ಟೆಕ್ ವಿದ್ಯಾರ್ಥಿನಿ, ತೀವ್ರ ರಕ್ತಸ್ರಾವದಿಂದ ಸಾವು
ಪ್ರಿಯಕರ ಆ ಸಮಯದಲ್ಲಿ ಜೇಬಿನಿಂದ ಬಂದೂಕು ತೆಗೆದು ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ, ಆಕೆ ಕುಸಿದು ಕೆಳಗೆ ಬಿದ್ದಿದ್ದಾಳೆ ಅಷ್ಟಾದ ಮೇಲೂ ಆತ ಗುಂಡಿನ ದಾಳಿ ಮುಂದುವರೆಸಿದ್ದ ಎನ್ನಲಾಗಿದೆ. ನ್ಯೂಯಾರ್ಕ್ ಪೋಸ್ಟ್ನ ವರದಿ ಪ್ರಕಾರ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.