AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನನ್ನು 10 ವರ್ಷಗಳ ಕಾಲ ಜೈಲಿನಲ್ಲಿಡಲು ಸೇನೆ ಸಂಚು: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ

ಪಾಕಿಸ್ತಾನದ ಜನರಿಗೆ ನನ್ನ ಸಂದೇಶ; ನನ್ನ ರಕ್ತದ ಕೊನೆಯ ಹನಿಯವರೆಗೂ ನಾನು ಹಖೀಕಿ ಆಜಾದಿಗಾಗಿ ಹೋರಾಡುತ್ತೇನೆ ಏಕೆಂದರೆ ಈ ವಂಚಕರ ವರ್ಗಗಳ ಗುಲಾಮರಾಗುವುದಕ್ಕಿಂತ ಸಾವು ನನಗೆ ಒಳ್ಳೆಯದು ಎಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ತನ್ನನ್ನು 10 ವರ್ಷಗಳ ಕಾಲ ಜೈಲಿನಲ್ಲಿಡಲು ಸೇನೆ ಸಂಚು: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ
ಇಮ್ರಾನ್ ಖಾನ್
ರಶ್ಮಿ ಕಲ್ಲಕಟ್ಟ
|

Updated on:May 15, 2023 | 5:31 PM

Share

ಲಾಹೋರ್: ದೇಶದ್ರೋಹದ ಆರೋಪದಡಿ ಮುಂದಿನ 10 ವರ್ಷಗಳ ಕಾಲ ತನ್ನನ್ನು ಜೈಲಿನಲ್ಲಿಡಲು ದೇಶದ ಪ್ರಬಲ ಸೇನಾ (Pakistan Military) ಸಂಸ್ಥೆ ಯೋಜಿಸಿದೆ ಎಂದು ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan)  ಹೇಳಿದ್ದಾರೆ. ಸೋಮವಾರ ಸರಣಿ ಟ್ವೀಟ್ ಮಾಡಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರು ಖಾನ್,  ಈಗ ಸಂಪೂರ್ಣ ಲಂಡನ್ ಯೋಜನೆ ಗೊತ್ತಾಗಿದೆ. ನಾನು ಜೈಲಿನೊಳಗೆ ಇದ್ದಾಗ ಹಿಂಸಾಚಾರದ ನೆಪವನ್ನು ಬಳಸಿ, ಅವರು ನ್ಯಾಯಾಧೀಶರು, ತೀರ್ಪುಗಾರರು ಮತ್ತು ಮರಣದಂಡನೆಕಾರ ಪಾತ್ರ ವಹಿಸಿದ್ದಾರೆ. ಬುಶ್ರಾ ಬೇಗಂ (ಖಾನ್ ಅವರ ಪತ್ನಿ) ಅವರನ್ನು ಜೈಲಿಗೆ ಹಾಕುವ ಮೂಲಕ ಮತ್ತು ಮುಂದಿನ ಹತ್ತು ವರ್ಷಗಳ ಕಾಲ ನನ್ನನ್ನು ಒಳಗೆ ಇಡಲು ಕೆಲವು ದೇಶದ್ರೋಹದ ಕಾನೂನನ್ನು ಬಳಸಿಕೊಂಡು ನನ್ನನ್ನು ಅವಮಾನಿಸುವುದು ಈಗ ಯೋಜನೆಯಾಗಿದೆ ಎಂದಿದ್ದಾರೆ. ಖಾನ್ ತಮ್ಮ ಲಾಹೋರ್ ನಿವಾಸದಲ್ಲಿ ಪಿಟಿಐ ನಾಯಕರ ಸಭೆ ನಡೆಸಿದ ನಂತರ ಈ ಟ್ವೀಟ್‌ಗಳು ಬಂದಿವೆ.

100 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಇರುವ 70 ವರ್ಷದ ನಾಯಕ ಇಮ್ರಾನ್ ಖಾನ್,ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು, ಅವರು ಎರಡು ಕೆಲಸಗಳನ್ನು ಮಾಡಿದ್ದಾರೆ.ಮೊದಲನೆದ್ದು ಉದ್ದೇಶಪೂರ್ವಕ ಭಯೋತ್ಪಾದನೆಯನ್ನು ಪಿಟಿಐ ಕಾರ್ಯಕರ್ತರ ಮೇಲೆ ಮಾತ್ರ ಅಲ್ಲ ಆದರೆ ಸಾಮಾನ್ಯ ನಾಗರಿಕರ ಮೇಲೂ ಮಾಡಿದ್ದು.ಎರಡನೆಯದಾಗಿ, ಮಾಧ್ಯಮವನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದು. ಈ “ಅಪರಾಧಿಗಳು” ಮಾಡುತ್ತಿರುವ ರೀತಿಯಲ್ಲಿ ಚಾದರ್ ಮತ್ತು ಚಾರ್ ದಿವಾರಿಯ ಪವಿತ್ರತೆಯನ್ನು ಎಂದಿಗೂ ಉಲ್ಲಂಘಿಸಲಾಗಿಲ್ಲ ಎಂದು ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪಾಕಿಸ್ತಾನ ಪರ ಘೋಷಣೆ: ಸ್ವಯಂಪ್ರೇರಿತ ದೂರು ದಾಖಲು

ಇದು ಉದ್ದೇಶಪೂರ್ವಕವಾಗಿ ಜನರಲ್ಲಿ ತುಂಬಾ ಭಯವನ್ನು ಹುಟ್ಟುಹಾಕುವ ಪ್ರಯತ್ನವಾಗಿದೆ, ಅವರು ನಾಳೆ ನನ್ನನ್ನು ಬಂಧಿಸಲು ಬಂದಾಗ ಜನರು ಹೊರಗೆ ಬರುವುದಿಲ್ಲ. ನಾಳೆ ಅವರು ಮತ್ತೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುತ್ತಾರೆ (ಇದು ಭಾಗಶಃ ಮಾತ್ರ ತೆರೆದಿರುತ್ತದೆ). ನಾವು ಮಾತನಾಡುವಾಗ, ಮನೆಗಳನ್ನು ಒಡೆಯಲಾಗುತ್ತಿದೆ ಮತ್ತು ನಾಚಿಕೆಯಿಲ್ಲದೆ ಪೊಲೀಸರು ಮನೆಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಪಾಕಿಸ್ತಾನದ ಜನರಿಗೆ ನನ್ನ ಸಂದೇಶವಿದು. ನನ್ನ ರಕ್ತದ ಕೊನೆಯ ಹನಿಯವರೆಗೂ ನಾನು ಹಖೀಕಿ ಆಜಾದಿಗಾಗಿ ಹೋರಾಡುತ್ತೇನೆ ಏಕೆಂದರೆ ಈ ವಂಚಕರ ವರ್ಗಗಳ ಗುಲಾಮರಾಗುವುದಕ್ಕಿಂತ ಸಾವು ನನಗೆ ಒಳ್ಳೆಯದು.

“ನಾವು ಲಾ ಇಲಹ ಇಲ್ಲಲ್ಲಾ ಎಂದು ಪ್ರತಿಜ್ಞೆ ಮಾಡಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಲು ನಾನು ನನ್ನ ಜನರನ್ನು ಒತ್ತಾಯಿಸುತ್ತೇನೆ,.ನಾವು ಒಬ್ಬನಿಗೆ (ಅಲ್ಲಾ) ಹೊರತುಪಡಿಸಿ ಯಾರಿಗೂ ನಮಸ್ಕರಿಸುವುದಿಲ್ಲ. ನಾವು ಭಯದ ಮೂರ್ತಿಗೆ ನಮಸ್ಕರಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಅವಮಾನ. ಅನ್ಯಾಯ ಮತ್ತು ಜಂಗಲ್ ರಾಜ್ ಕಾನೂನು ಚಾಲ್ತಿಯಲ್ಲಿರುವ ದೇಶಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂದಿದ್ದಾರೆ ಖಾನ್.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Mon, 15 May 23