
ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ (America) ಶೂಟೌಟ್ (Shootout) ಪ್ರಕರಣಗಳು ಮುಂದುವರೆದಿವೆ. 18 ವರ್ಷದ ಯುವಕ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿರುವ ಘಟನೆ ನ್ಯೂ ಮೆಕ್ಸಿಕೋದ (New Mexico) ಫಾರ್ಮಿಂಗ್ಟನ್‌ನಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 50,000 ಜನಸಂಖ್ಯೆ ಇರುವ ಪುಟ್ಟ ಪಟ್ಟಣವಾದ ಫಾರ್ಮಿಂಗ್ಟನ್‌ನಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ದುರಂತ ಸಂಭವಿಸಿದೆ.
ಇನ್ನು ಪೊಲೀಸರು ಆರೋಪಿಯನ್ನು ಎನ್ಕೌಂಟರ್ ಮಾಡಿದ್ದಾರೆ. ಘಟನೆಯಲ್ಲಿ “ಅನೇಕ ನಾಗರಿಕ ಸಾವನ್ನಪ್ಪಿದ್ದಾರೆ” ಎಂದು ಫಾರ್ಮಿಂಗ್ಟನ್ ಪೊಲೀಸರು ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗುಂಡಿನ ದಾಳಿಯ ನಂತರ, ನಗರದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಟೆಕ್ಸಾಸ್ನ ಶಾಪಿಂಗ್ ಮಾಲ್ನಲ್ಲಿ ಗುಂಡಿನ ದಾಳಿ, 9 ಮಂದಿ ಸಾವು, 7 ಜನರಿಗೆ ಗಾಯ
ಬೆಳಿಗ್ಗೆ 11 ಗಂಟೆಯ ನಂತರ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಬ್ರೂಕ್ಸೈಡ್ ಪಾರ್ಕ್ ಪ್ರದೇಶದಲ್ಲಿನ, ಮತ್ತು ನಗರದ ಎಲ್ಲಾ ಶಾಲೆಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದಾರೆ. ಅಮೆರಿಕಾದಲ್ಲಿ ಈ ವರ್ಷ 215 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ಸಂಭವಿಸಿವೆ ಎಂದು ಗನ್ ವಯಲೆನ್ಸ್ ಆರ್ಕೈವ್ ವರದಿ ಹೇಳಿದೆ.
ಗೆಳತಿ ಗರ್ಭಪಾತ ಮಾಡಿಸಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯಕರನೊಬ್ಬ ಆಕೆಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದಲ್ಲಿ ನಡೆದಿತ್ತು. 22 ವರ್ಷದ ಹೆರಾಲ್ಡ್ ಥಾಂಪ್ಸನ್, 26 ವರ್ಷದ ಗೇಬ್ರಿಯೆಲಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ, ಆಕೆಯನ್ನು ಸ್ಟ್ರಿಪ್ ಮಾಲ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ಡಲ್ಲಾಸ್ ಪೊಲೀಸರು ತಿಳಿಸಿದ್ದರು. ಕೊಲೊರಾಡೊಗೆ ಸುಮಾರು 800 ಕಿ.ಮೀ ಪ್ರಯಾಣ ಬೆಳೆಸಿ ಹಿಂದಿನ ದಿನ ರಾತ್ರಿ ಬಂದಿದ್ದರು, ಅಲ್ಲಿ ಗರ್ಭಾವಸ್ಥೆಯ ಯಾವ ಹಂತದಲ್ಲಾದರೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿಸಲಾಗಿತ್ತು.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 am, Tue, 16 May 23