ಮಾಸ್ಕೋ: ಅತ್ಯಂತ ಹೆಚ್ಚಿನ ಅಪಾಯ ತಂದೊಡ್ಡಬಹುದಾದ ಕೊವಿಡ್ ರೂಪಾಂತರಿ ತಳಿಗಳಿಂದ ರಕ್ಷಣೆ ಪಡೆಯಲು ಕೊವಿಡ್ ವಾರಿಯರ್ಗಳಿಗೆ 3ನೇ ಡೋಸ್ ಲಸಿಕೆ ಹಾಕಬೇಕು ಎಂದು ಮೊಡೆರ್ನಾ ಲಸಿಕೆ ಉತ್ಪಾದನಾ ಕಂಪೆನಿಯ ಸಿಇಒ ಸ್ಫೀಫನ್ ಬನ್ಸೆಲ್ ಅಭಿಪ್ರಾಯಪಟ್ಟಿದ್ದಾರೆ. ಕೊವಿಡ್ ವಿರುದ್ಧ ನಾವು ಉತ್ಪಾದಿಸಿರುವ ಲಸಿಕೆಯು ಒಂದು ನಿಗದಿತ ಅವಧಿಯವರೆಗೆ ಕೊವಿಡ್ ಬರದಂತೆ ತಡೆಗಟ್ಟುತ್ತದೆ. ಆದರೆ ಕೊವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಸೋಂಕು ತಗಲುವ ಅಪಾಯ ಇರುತ್ತದೆ. ಹೀಗಾಗಿ ಅಂತಹ ವ್ಯಕ್ತಿಗಳಿಗೆ ಮೂರನೇ ಡೋಸ್ ಲಸಿಕೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಕೊವಿಡ್ ಲಸಿಕೆ ನೀಡುವುದೇ ಜನರನ್ನು ಸೋಂಕಿನಿಂದ ಕಾಪಾಡಬಹುದಾದ ಅತ್ಯುತ್ತಮ ಮಾರ್ಗ. ಈವರೆಗೆ ಲಸಿಕೆ ಹಾಕಿಸಿಕೊಳ್ಳದಿರುವವರು ಆದಷ್ಟು ಬೇಗನೆ ಲಸಿಕೆ ಪಡೆಯಬೇಕು ಎಂದಿರುವ ಅವರು, ಫ್ರಾನ್ಸ್ ದೇಶದಲ್ಲಿ ಕೊವಿಡ್ನ 4ನೇ ಅಲೆಯ ಕುರಿತು ಎಚ್ಚರಿಕೆ ನೀಡಿದ್ದಾರೆ. ಫ್ರಾ ಲಿಸಕೆ ವಿತರಣೆ ಇನ್ನೂ ಎರಡರಿಮದ ಮೂರು ತಿಂಗಳು ತಡವಾದಲ್ಲಿ ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಜನರ ಸಂಖ್ಯೆ ಹೆಚ್ಚಾಗಬಹುದು. ಅಲ್ಲದೇ, ಸಾವುನೋವುಗಳ ಸಂಖ್ಯೆಯಲ್ಲೂ ಹೆಚ್ಚಳವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಮೊಡೆರ್ನಾ ಮೂರು ಪ್ರಯೋಗಗಳಲ್ಲಿ ನಿರತವಾಗಿದೆ. ವುಹಾನ್ನ ಪ್ರಯೋಗಾಲಯದಿಂದ ಹೊರಬಿದ್ದ ಮೂಲ ವೈರಸ್ನ ವಿರುದ್ಧ ಹೊರಾಡಬಲ್ಲ ಲಸಿಕೆ ಒಂದಾದರೆ, ದಕ್ಷಿಣ ಆಫ್ರಿಕಾದ ರೂಪಾಂತರಿ ಕೊವಿಡ್ ವೈರಾಣುವಿನ ವಿರುದ್ಧ ಹೋರಾಡಬಲ್ಲ ಲಸಿಕೆ ಎರಡನೇಯದು. ಮತ್ತು ಈ ಎರಡೂ ವೈರಾಣುವಿನ ವಿರುದ್ಧ ಹೋರಾಡಬಲ್ಲ ಸಮ್ಮಿಶ್ರ ಲಸಿಕೆಯ ಕುರಿತು ಮಾಡೆರ್ನಾ ಕಂಪನಿ ಸಂಶೋಧನೆ ನಡೆಸುತ್ತಿದೆ.
Bengaluru Air: ಲಾಕ್ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ
(3rd dose of the vaccine to protect against Covid 19 says Moderna CEO)