AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Queen Victoria: ಇಂದು ರಾಣಿ ವಿಕ್ಟೋರಿಯಾ ಜನ್ಮದಿನ, ಇಲ್ಲಿವೆ ಅವರ ಬಗೆಗಿನ ಆಸಕ್ತಿದಾಯಕ ಸಂಗತಿಗಳು

Queen Victoria Birth Anniversary: 63 ವರ್ಷಗಳ ಕಾಲ ಅವರು ನಡೆಸಿದ ಆಳ್ವಿಕೆಯನ್ನು ಹಿಂದಿನ ಬ್ರಿಷ್​ ದೊರೆಗಳಿಗೆ ಹೋಲಿಸಿದರೆ ದೀರ್ಘಕಾಲದವರೆಗೆ ಆಳ್ವಿಕೆ ನಡೆಸಿದ ಕೀರ್ತಿ ರಾಣಿ ವಿಕ್ಟೋರಿಯಾ ಅವರಿಗೆ ಸಲ್ಲುತ್ತದೆ.

Queen Victoria: ಇಂದು ರಾಣಿ ವಿಕ್ಟೋರಿಯಾ ಜನ್ಮದಿನ, ಇಲ್ಲಿವೆ ಅವರ ಬಗೆಗಿನ ಆಸಕ್ತಿದಾಯಕ ಸಂಗತಿಗಳು
ರಾಣಿ ವಿಕ್ಟೋರಿಯಾ
shruti hegde
|

Updated on: May 24, 2021 | 11:16 AM

Share

ಲಂಡನ್​: ರಾಣಿ ವಿಕ್ಟೋರಿಯಾ ಮೇ 24, 1819ರಂದು ಕೆನ್ಸಿಂಗ್ಟನ್​ ಅರಮನೆಯಲ್ಲಿ ಜನಿಸಿದರು. 1837 ಜೂನ್​ 20 ರಿಂದ 1901ರವರೆಗೆ ಅವರು ಯುನೈಟೆಡ್​ ಕಿಂಗ್​ಡಮ್​ ಆಫ್​ ಗ್ರೇಟ್​ ಬ್ರಿಟನ್​ ಮತ್ತು ಐರ್ಲೆಂಡ್​ ರಾಣಿಯಾಗಿ ಆಳ್ವಿಕೆ ನಡೆಸಿದರು. 63 ವರ್ಷಗಳ ಕಾಲ ಅವರು ನಡೆಸಿದ ಆಳ್ವಿಕೆಯನ್ನು ಹಿಂದಿನ ಬ್ರಿಟಿಷ್​ ದೊರೆಗಳಿಗೆ ಹೋಲಿಸಿದರೆ ದೀರ್ಘಕಾಲದವರೆಗೆ ಆಳ್ವಿಕೆ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರಾಣಿ ವಿಕ್ಟೋರಿಯಾ 1840ರಲ್ಲಿ ತನ್ನ ಸಂಬಂಧಿ ಪ್ರಿನ್ಸ್​ ಆಲ್ಬರ್ಟ್​ರನ್ನು ಮದುವೆಯಾರು. 1876 ರಲ್ಲಿ ಅವರು ಭಾರತದ ಸಮ್ರಾಜ್ಞಿ ಎಂಬ ಬಿರುದಿಗೆ ಪಾತ್ರರಾದರು. 63 ವರ್ಷಗಳ ಕಾಲ ತನ್ನ ಆಳ್ವಿಕೆಯನ್ನು ನಡೆಸಿ 1901 ಜನವರಿ 22ರಂದು ಕೊನೆಯುಸಿರೆಳೆದಳು.

ಈ ವರ್ಷದ ಜನ್ಮದಿನದ ಅಂಗವಾಗಿ ರಾಣಿ ವಿಕ್ಟೋರಿಯಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಂತೆಯೇ ಅವರ ಕುರಿತಾದ ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.

ಅವರ ಮೊದಲ ಹೆಸರು ವಿಕ್ಟೋರೊಯಾ ಎಂಬುದಾಗಿರಲಿಲ್ಲ. ಮೂಲತಃ ಅವರಿಗೆ ಅಲೆಕ್ಸಾಂಡ್ರಿಯಾ ವಿಕ್ಟೋರಿಯಾ ಎಂದು ಹೆಸರಿಡಲಾಯಿತು. ಅವರ ಗಾಡ್​ ಫಾದರ್​ ತ್ಸಾರ್​ ಅಲೆಕ್ಸಾಂಡರ್​ ಅವರಿಗೆ ಎರಡನೇಯ ಹೆಸರಿಟ್ಟು ಕರೆಯಲು ಪ್ರಾರಂಭಿಸಿದರು.

ಅವರು ತನ್ನ 19 ವಯಸ್ಸಿನಲ್ಲಿಯೇ ರಾಣಿಯಾದರು. 1837 ಜೂನ್​ 20ರಂದು ಅವರ ಚಿಕ್ಕಪ್ಪ ಕಿಂಗ್​ ವಿಲಿಯಂ ಹೃದಾಯಾಘಾತದಿಂದ ಕೊನೆಯುಸಿರೆಳೆದರು. ಈ ಬಳಿಕ 18 ವರ್ಷ ತುಂಬಿದ ಒಂದು ತಿಂಗಳೊಳಗೆಯೇ ವಿಕ್ಟೋರಿಯಾ ಅವರಿಗೆ ರಾಣಿ ಪಟ್ಟ ಲಭಿಸಿತು. ವಿಕ್ಟೋರಿಯಾ ರಾಣಿ ಸಿಂಹಾಸನಕ್ಕೆ ಪ್ರವೇಶಿಸಿದ ಬಳಿಕವೇ ಬಕಿಂಗ್​ಹ್ಯಾಮ್​ ಅರಮನೆಗೆ ಸ್ಥಳಾಂತರಗೊಂಡರು.

ತನ್ನ 17ನೇ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭೇಟಿಯಾದ ಸಂಬಂಧಿಯ ಜತೆ ನಾಲ್ಕು ವರ್ಷದ ಬಳಿಕ ಮದುವೆ ಪ್ರಸ್ತಾಪ ಮಾಡಿದರು. ಆ ಬಳಿಕ ಅವರು 1840 ಫೆಬ್ರವರಿ 10ರಂದು ಲಂಡನ್​ನ ಸೇಂಟ್​ ಜೇಮ್ಸ್​ ಪ್ಯಾಲೇಸ್​​ನಲ್ಲಿ ವಿವಾಹವಾದರು. ಪತಿ ಪ್ರಿನ್ಸ್​ ಆಲ್ಬರ್ಟ್​ ಮತ್ತು ರಾಣಿ ವಿಕ್ಟೋರಿಯಾ ಅವರಿಗೆ ಒಂಭತ್ತು ಪುತ್ರರು ಜನಿಸಿದರು. ಅವರೆಲ್ಲರೂ ಯುರೋಪ್​ ರಾಜಪ್ರಭುತ್ವರನ್ನು ಮದುವೆಯಾದರು.

63 ವರ್ಷಗಳ ಕಾಲ ಆಳ್ವಿಕೆ ನಡೆಸಿದ ವಿಕ್ಟೀರಿಯಾ ರಕ್ತ ಹೆಪ್ಪುಗಟ್ಟುವಿಕೆಯ ಕಾಯಿಲೆಯಿಂದ ಬಳಲಿ ಕೊನೆಯುಸಿರೆಳೆದರು. ರೈಲು ಸವಾರಿ ಮಾಡಿದ ಮೊದಲ ದೊರೆ ಅವರು. 1842ರಲ್ಲಿ ಅವರು ಮೊದಲ ಬಾರಿಗೆ ರೈಲು ಸವಾರಿ ಮಾಡಿದರು. ಒಟ್ಟು 30 ನಿಮಿಷಗಳ ಕಾಲ ರೈಲು ಪ್ರಯಾಣ ಕೈಗೊಂಡರು.

ವಿಕ್ಟೋರಿಯಾ ರಾಣಿಯನ್ನು ಹತ್ಯೆಗೈಯ್ಯುವ ಉದ್ದೇಶದಿಂದ ಪ್ರಯತ್ನಗಳು ನಡೆದರು ಅವರು ಜಯಿಸಿ ನಿಂತರು. ಒಟ್ಟು 8 ಹತ್ಯೆ ಪ್ರಕರಣಗಳಿಂದ ಬದುಕುಳಿದ ರಾಣಿ ವಿಕ್ಟೀರಿಯಾ ರಕ್ತಹೆಪ್ಪುಗಟ್ಟುವಿಕೆಯ ಕಾಯಿಲೆಯಿಂದ ಕೊನೆಯುಸಿರೆಳೆದರು.

ಇದನ್ನೂ ಓದಿ: ವಿಕ್ಟೋರಿಯಾ ರಾಣಿ ನಿರ್ಮಿಸಿದ ಕೆರೆ ತುಂಬಿತುಳುಕುತಿದೆ! ಯುವಕರ ಕೈಬೀಸಿ ಕರೀತಿದೆ