ಬೋಟ್ಸ್ವಾನ: ಕಳೆದ ಕೆಲವು ದಿನಗಳಲ್ಲಿ ಸುಮಾರು 500 ಆನೆಗಳು ಆಫ್ರಿಕಾದ ಬೋಟ್ಸ್ವಾನಾದಲ್ಲಿ ಮೃತಪಟ್ಟಿವೆ. ಈ ರೀತಿ ಆನೆಗಳ ನಿಗೂಢ ಸಾವಿಗೆ ಸಂರಕ್ಷಣಾ ವಿಪತ್ತು ಕಾರಣ ಎಂದು ವಿವರಿಸಲಾಗಿದೆ. ಆದರೆ ಆನೆಗಳ ಸಾವು ಮಾತ್ರ ತುಂಬಾ ದುರಂತದ ಸಂಗತಿ.
ಮೇ ತಿಂಗಳ ಆರಂಭದಲ್ಲಿ ಒಕಾವಾಂಗೊ ಡೆಲ್ಟಾದಲ್ಲಿ ಆನೆಗಳ ಸಾವು ಸಂಭವಿಸಿದೆ ಎಂದು ಇದೇ ರೀತಿ ವರದಿಯಾಗಿತ್ತು. ತಿಂಗಳ ಅಂತ್ಯದ ವೇಳೆಗೆ 169 ಆನೆಗಳು ಸಾವನ್ನಪ್ಪಿದ್ದವು. ಜೂನ್ ಮಧ್ಯದ ವೇಳೆಗೆ, ಈ ಸಂಖ್ಯೆ ದ್ವಿಗುಣಗೊಂಡಿತ್ತು. 70% ಸಾವುಗಳು ವಾಟರ್‌ಹೋಲ್‌ಗಳ ಸಮೀಪವೇ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.
ಬೋಟ್ಸ್ವಾನ ಸರ್ಕಾರ ಇನ್ನೂ ಆನೆಗಳ ಸಾಮೂಹಿಕ ಸಾವಿಗೆ ಕಾರಣ ಹುಡುಕಲು ಮುಂದಾಗಿಲ್ಲ. ಇನ್ನು ಮಾದರಿಗಳನ್ನು ಪರೀಕ್ಷಿಸಿಲ್ಲ ಆದ್ದರಿಂದ ಸಾವಿಗೆ ಕಾರಣವೇನು ಅಥವಾ ಅವು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಎರಡು ಮುಖ್ಯ ಸಾಧ್ಯತೆಗಳು ಎಂದರೆ ವಿಷ ಅಥವಾ ಮಾರಕ ರೋಗ ಕಾರಣವಾಗಿರಬಹುದು.
Around 500 elephants have died in Botswana in last few days. Described as a ‘conservation disaster’ in which elephants are dying mysteriously in clusters. Tragic. https://t.co/ZcGKM5zonK pic.twitter.com/GgQtw4mtBA
— Parveen Kaswan, IFS (@ParveenKaswan) July 2, 2020
Published On - 10:16 am, Fri, 3 July 20