ಚೀನಾದ ಪರಮಾಣು ಚಾಲಿತ ಜಲಾಂತರ್ಗಾಮಿ ಮುಳುಗಿ 55 ಸಾವು: ವರದಿ
ತೈವಾನ್‌ನಂತೆ ಜಲಾಂತರ್ಗಾಮಿ ಮುಳುಗಿದೆ ಎಂಬುದನ್ನು ಚೀನಾ ನಿರಾಕರಿಸಿದೆ. ಆದರೆ ಬ್ರಿಟಿಷ್ ಗುಪ್ತಚರ ವರದಿಯು PLA ನೌಕಾಪಡೆಯ ಜಲಾಂತರ್ಗಾಮಿ ನೌಕೆಯನ್ನು 093-417 ಎಂದು ಗುರುತಿಸಿದೆ. ಆಗಸ್ಟ್ 21 ರಂದು ಈ ದುರಂತ ಸಂಭವಿಸಿದ್ದು ಸಿಬ್ಬಂದಿ ವಿಷಪೂರಿತ ಗಾಳಿ ಸೇವಿಸಿ ಸಾವಿಗೀಡಾಗಿದ್ದಾರೆ. ಸತ್ತವರಲ್ಲಿ ಕ್ಯಾಪ್ಟನ್ ಮತ್ತು 21 ಅಧಿಕಾರಿಗಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಮಾಸ್ಕೋ ಅಕ್ಟೋಬರ್ 04: ಅಮೆರಿಕನ್ ಮತ್ತು ಬ್ರಿಟಿಷ್ ಹಡಗುಗಳಿಗೆ ಉದ್ದೇಶಿಸಲಾದ ಟ್ರ್ಯಾಪ್ಗೆ ಸಿಲುಕಿದ ನಂತರ ಪರಮಾಣು-ಚಾಲಿತ ಜಲಾಂತರ್ಗಾಮಿ (Submarine) ಮುಳುಗಿ ಚೀನಾದ (China) 55 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಯುಕೆ ಮೂಲದ ದಿ ಟೈಮ್ಸ್ ಸೋರಿಕೆಯಾದ ಬ್ರಿಟಿಷ್ ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಹಳದಿ ಸಮುದ್ರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ತಿಳಿಸಿದೆ. ಆದಾಗ್ಯೂ, ತೈವಾನ್‌ನಂತೆ ಜಲಾಂತರ್ಗಾಮಿ ಮುಳುಗಿದೆ ಎಂಬುದನ್ನು ಚೀನಾ ನಿರಾಕರಿಸಿದೆ. ಆದರೆ ಬ್ರಿಟಿಷ್ ಗುಪ್ತಚರ ವರದಿಯು PLA ನೌಕಾಪಡೆಯ ಜಲಾಂತರ್ಗಾಮಿ ನೌಕೆಯನ್ನು 093-417 ಎಂದು ಗುರುತಿಸಿದೆ. ಆಗಸ್ಟ್ 21 ರಂದು ಈ ದುರಂತ ಸಂಭವಿಸಿದ್ದು ಸಿಬ್ಬಂದಿ ವಿಷಪೂರಿತ ಗಾಳಿ ಸೇವಿಸಿ ಸಾವಿಗೀಡಾಗಿದ್ದಾರೆ. ಸತ್ತವರಲ್ಲಿ ಕ್ಯಾಪ್ಟನ್ ಮತ್ತು 21 ಅಧಿಕಾರಿಗಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ನೌಕೆಯು ಶಾಂಘೈನ ಉತ್ತರದ ಶಾಂಡೋಂಗ್ ಪ್ರಾಂತ್ಯದ ಬಳಿ ತನ್ನ ಸ್ವಂತ ಪಡೆಗಳಿಂದ ಸ್ಥಾಪಿಸಲಾದ ಸಮುದ್ರತಳದ ಟ್ರ್ಯಾಪ್ನಲ್ಲಿ ಸಿಕ್ಕಿಬಿದ್ದ ನಂತರ ಆಮ್ಲಜನಕದ ಕೊರತೆ ಅನುಭವಿಸಿದೆ ಎಂದು ಹೇಳಲಾಗಿದೆ ಎಂದು ಟೈಮ್ಸ್ ವರದಿ ಹೇಳಿದೆ.
ಜಲಾಂತರ್ಗಾಮಿ ನೌಕೆಯಲ್ಲಿನ ಸಿಸ್ಟಮ್ ದೋಷದಿಂದಾಗಿ ಹೈಪೋಕ್ಸಿಯಾ (ಆಮ್ಲಜನಕದ ಕೊರತೆ) ಯಿಂದ ಉಂಟಾಗುವ ಸಾವು ಎಂಬುದು ನಮ್ಮ ತಿಳುವಳಿಕೆಯಾಗಿದೆ ಎಂದು ಬ್ರಿಟಿಷ್ ಗುಪ್ತಚರ ಅಧಿಕಾರಿಗಳು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕ ಮತ್ತು ಅವುಗಳ ಮಿತ್ರ ದೇಶಗಳ ಜಲಾಂತರ್ಗಾಮಿ ನೌಕೆಗಳನ್ನು ಬಲೆಗೆ ಬೀಳಿಸಲು ಚೀನೀ ನೌಕಾಪಡೆಯು ಬಳಸುತ್ತಿದ್ದ ಚೈನ್ ಮತ್ತು ಆಂಕರ್ ಅಡಚಣೆಯನ್ನು ಜಲಾಂತರ್ಗಾಮಿ ಭೇದಿಸಿದ್ದು, ಇದರಿಂದ ನೌಕೆಗೆ ಹಾನಿಯುಂಟಾಗಿತ್ತು, ಇದನ್ನು ಸರಿಮಾಡಲು 6 ಗಂಟೆ ತೆಗೆದುಕೊಂಡಿತ್ತು. ಇದಾದ ನಂತರ ಆಮ್ಲಜನಕದ ಕೊರೆತೆ ಅನುಭವಕ್ಕೆ ಬಂದಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಮೆರಿಕ: ಸ್ವಪಕ್ಷೀಯರಿಂದಲೇ ರಿಪಬ್ಲಿಕನ್ ಸ್ಪೀಕರ್ ಕೆವಿನ್ ಮೆಕಾರ್ಥಿ ಪದಚ್ಯುತಿ
ಶಾಂಗ್-ಕ್ಲಾಸ್ ಜಲಾಂತರ್ಗಾಮಿಯನ್ನು ಒಳಗೊಂಡ ಘಟನೆಯ ಬಗ್ಗೆ ವದಂತಿಗಳು ಒಂದು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದರೂ ಬೀಜಿಂಗ್ ಅದನ್ನು ನಿರಾಕರಿಸಿತ್ತು. ಚೀನಾ ಆರು ಟೈಪ್-093 ದಾಳಿ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ, ಇದು 6,096 ಟನ್‌ಗಳ ಸ್ಥಳವಕಾಶ ಹೊಂದಿದೆ ಮತ್ತು 553 ಎಂಎಂ ಟಾರ್ಪಿಡೊಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳು, ಹಿಂದಿನ ಮಾದರಿಗಳಿಗಿಂತ ನಿಶ್ಯಬ್ದವಾಗಿರುವಂತೆ ವಿನ್ಯಾಸಗೊಳಿಸಲಾಗಿದ್ದು, ಕಳೆದ 15 ವರ್ಷಗಳಲ್ಲಿ ಸೇವೆಯನ್ನು ಪ್ರವೇಶಿಸಿವೆ ಎಂದು ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ