ಬೊಲಿವಿಯಾದ ವಾಯುಪಡೆಯ ವಿಮಾನ (Bolivian Airforce Plane)ವೊಂದು ಅಮೇಜಾನ್ ಅರಣ್ಯದಲ್ಲಿ ಪತನವಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಅಮೆರಿಕಾದ ದೇಶ ಬೊಲಿವಿಯಾದ ಈಶಾನ್ಯದಲ್ಲಿರುವ ಬೆನಿ ಪ್ರದೇಶದ ಅಮೇಜಾನ್ ಕಾಡಿನಲ್ಲಿ ಶನಿವಾರ ಈ ದುರಂತ ನಡೆದಿದ್ದಾಗಿ ಮಾಹಿತಿ ಲಭ್ಯವಾಗಿದೆ.
ವಿಮಾನ ಪತನದಲ್ಲಿ ಇಬ್ಬರು ಸೇನಾ ಪೈಲಟ್ಗಳು, ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಈ ವಿಮಾನ ಅಮೆಜಾನ್ ಕಾಡಿನ ದಟ್ಟವಾದ ಮರಗಳ ಮಧ್ಯೆ ಪತನವಾಗಿದೆ. ಕೆಳಗೆ ಬಿದ್ದ ತಕ್ಷಣ ಬೆಂಕಿ ಹೊತ್ತಿಕೊಂಡು, ಇಡೀ ವಿಮಾನ ಬೆಂಕಿಗೆ ಆಹುತಿಯಾಗಿದೆ. ಅಲ್ಲಿಯೇ ಹತ್ತಿರದಲ್ಲಿ ಇದ್ದ ಅಗುವಾ ಡುಲ್ಸೆ ಎಂಬ ಸಮುದಾಯದ ನಿವಾಸಿಗಳು ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟರೂ, ಸಾಧ್ಯವಾಗಲಿಲ್ಲ ಎಂದು ಬೆನಿ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. ಸೇನಾ ವಿಮಾನ ಪತನಕ್ಕೆ ನೈಜ ಕಾರಣವೇನು ಎಂದು ಪತ್ತೆ ಹಚ್ಚುವ ಸಂಬಂಧ ತನಿಖೆ ನಡೆಯುತ್ತಿದೆ.
ಈ ವಿಮಾನ ಬೊಲಿವಿಯಾದ ಆರೋಗ್ಯ ಸಚಿವಾಲಯದ ಡೆಂಘೆ-ಚಿಕೂನ್ಗುನ್ಯಾ ಕಾರ್ಯಕ್ರಮದ ನಾಲ್ವರು ಅಧಿಕಾರಿಗಳನ್ನು ಕರೆದೊಯ್ಯುತ್ತಿತ್ತು. ಇವರೆಲ್ಲರೂ ಆರೋಗ್ಯಾಧಿಕಾರಿಗಳಾಗಿದ್ದಾರೆ. ಅಧಿಕಾರಿಗಳ ತಂಡವನ್ನು ರಿಬೆರಾಲ್ಟಾದಿಂದ ಕೋಬಿಜಾಗೆ ಕರೆದೊಯ್ಯಲಾಗುತ್ತಿತ್ತು. ಅವರೆಲ್ಲ ಮಲೇರಿಯಾ ರೋಗ ಜಾಗೃತಿ ಮೂಡಿಸುವ ಜತೆಗೆ, ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಕೊಂಡವರಾಗಿದ್ದರು. ನಾಲ್ವರೂ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಪೊಲೀಸರಿಂದಲೇ ಗಾಂಜಾ ಮಾರಾಟ ಪ್ರಕರಣ; ಇನ್ಸ್ಪೆಕ್ಟರ್ ಸೇರಿ ಏಳು ಜನ ಅಮಾನತು
ಚಿಕ್ಕಬಳ್ಳಾಪುರ: ಸ್ನೇಹಿತರಿಗೆ ಚಾಲೆಂಜ್ ಹಾಕಿ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು; ಇನ್ನೂ ಸಿಗದ ಮೃತದೇಹ
Published On - 9:58 am, Sun, 10 October 21