ಪಾಕ್​​ನ ಸಿಂಧ್​ನಲ್ಲಿ 60 ಮಂದಿ ಹಿಂದೂಗಳು ಇಸ್ಲಾಂಗೆ ಮತಾಂತರ; ಬಲವಂತವಾಗಿ ನಡೆಯುತ್ತಿದೆ ಈ ಪ್ರಕ್ರಿಯೆ

| Updated By: Lakshmi Hegde

Updated on: Jul 11, 2021 | 5:36 PM

ಪಾಕಿಸ್ತಾನದ ಸಿಂಧ್​​ನಿಂದ ಹೀಗೆ ಮತಾಂತರದ ಬಗ್ಗೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಮಾರ್ಚ್​ನಲ್ಲಿ 13 ವರ್ಷದ ಬಾಲಕಿ ಕವಿತಾ ಎಂಬುವಳನ್ನು ಅಪಹರಿಸಿ, ನಂತರ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿತ್ತು.

ಪಾಕ್​​ನ ಸಿಂಧ್​ನಲ್ಲಿ 60 ಮಂದಿ ಹಿಂದೂಗಳು ಇಸ್ಲಾಂಗೆ ಮತಾಂತರ; ಬಲವಂತವಾಗಿ ನಡೆಯುತ್ತಿದೆ ಈ ಪ್ರಕ್ರಿಯೆ
ಮತಾಂತರ ಸ್ಥಳದ ಫೋಟೋ
Follow us on

ಇಸ್ಲಮಾಬಾದ್​: ಪಾಕಿಸ್ತಾನದ ಸಿಂಧ್ ಪ್ರಾಂತದ ಮಲ್ಟಿ ಎಂಬ ಪ್ರದೇಶದಲ್ಲಿ ಸುಮಾರು 60 ಮಂದಿ ಹಿಂದುಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ. ಅಲ್ಲಿನ ಮುನ್ಸಿಪಲ್​ ಅಧ್ಯಕ್ಷನ ಎದುರಿಗೇ ಈ ಮತಾಂತರ ನಡೆದಿದ್ದು, ಇವರ ಬಳಿ ಒತ್ತಾಯ ಪೂರ್ವಕವಾಗಿ ಇಸ್ಲಾಂನ ಪ್ರಮಾಣವಚನ ಓದಿಸಲಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದಲ್ಲಿ ಹಿಂದುಗಳು ಅಲ್ಪಸಂಖ್ಯಾತರು. ಕೇವಲ 4.5 ಮಿಲಿಯನ್​​ಗಳಷ್ಟೇ ಅಂದರೆ ಪಾಕಿಸ್ತಾನದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.2ರಷ್ಟು ಮಾತ್ರ ಹಿಂದೂಗಳಿದ್ದಾರೆ. ಅದರಲ್ಲೂ ಈ ಸಿಂಧ್​ ಪ್ರಾಂತದಲ್ಲೇ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದಾರೆ. ಇಲ್ಲಿನ ಪುರಸಭೆ ಅಧ್ಯಕ್ಷ ಅಬ್ದುಲ್​ ರವೂಫ್​ ನಿಜಾಮಾನಿಯೇ ಖುದ್ದಾಗಿ ನಿಂತು ಮತಾಂತರ ನಡೆಸುತ್ತಿರುವುದು ಗೊತ್ತಾಗಿದೆ. ಅವರು ತಮ್ಮ ಫೇಸ್​ಬುಕ್​​ನಲ್ಲಿ ಪೋಸ್ಟ್ ಹಾಕಿ, ಇವತ್ತು ನನ್ನ ನೇತೃತ್ವದಲ್ಲಿ 60 ಹಿಂದೂಗಳು ಮುಸ್ಲಿಂ ಧರ್ಮ ಸ್ವೀಕರಿಸಿದರು. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಹಾಗೇ, ಒಂದಷ್ಟು ಜನರನ್ನು ಕೂರಿಸಿಕೊಂಡು ಅವರಿಗೆ ಇಸ್ಲಾಂ ಬಗ್ಗೆ ಬೋಧಿಸುತ್ತಿರುವ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ಸಿಂಧ್​​ನಿಂದ ಹೀಗೆ ಮತಾಂತರದ ಬಗ್ಗೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಮಾರ್ಚ್​ನಲ್ಲಿ 13 ವರ್ಷದ ಬಾಲಕಿ ಕವಿತಾ ಎಂಬುವಳನ್ನು ಅಪಹರಿಸಿ, ನಂತರ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿತ್ತು. ಆಕೆಯನ್ನು ಮಧ್ಯದಲ್ಲಿ ಕೂರಿಸಿ, ಹಲವು ಮುಸ್ಲಿಂ ಮುಖಂಡರು ಸೇರಿ ಮತಾಂತರ ಮಾಡಿದ ಪ್ರಕ್ರಿಯೆಯ ವಿಡಿಯೋ ಕೂಡ ವೈರಲ್​ ಆಗಿತ್ತು.

ಇದನ್ನೂ ಓದಿ: ‘ಇದರಲ್ಲಿ ಯಾರೇ ಇದ್ರೂ ಬಿಡಲ್ಲ‘; ವಂಚನೆ ಪ್ರಯತ್ನದ ಬಗ್ಗೆ ದರ್ಶನ್​ ಎಚ್ಚರಿಕೆ

60 Hindus forcibly converted to Islam in Sindh province of Pakistan