ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆಯ ಭೂಕಂಪನ, ಸುನಾಮಿ ಎಚ್ಚರಿಕೆ ನೀಡಿದ ಯುಎಸ್ ಏಜೆನ್ಸಿ

|

Updated on: Dec 02, 2023 | 9:07 PM

Philippines earthquake: ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಭೂಕಂಪದ ಬೆನ್ನಲ್ಲೇ ಅಮೆರಿಕದ ಏಜೆನ್ಸಿ ಸುನಾಮಿ ಎಚ್ಚರಿಕೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫಿಲಿಪೈನ್ಸ್‌ನಲ್ಲಿ 7.5 ತೀವ್ರತೆಯ ಭೂಕಂಪನ, ಸುನಾಮಿ ಎಚ್ಚರಿಕೆ ನೀಡಿದ ಯುಎಸ್ ಏಜೆನ್ಸಿ
ಪ್ರಾತಿನಿಧಿಕ ಚಿತ್ರ
Follow us on

ಮಿಂಡಾನಾವೊ ಡಿಸೆಂಬರ್ 02: ಶನಿವಾರ ಫಿಲಿಪೈನ್ಸ್‌ನ(Philippines )ಮಿಂಡಾನಾವೊದಲ್ಲಿ 7.5 ತೀವ್ರತೆಯ ಭೂಕಂಪ (earthquake) ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ. ಭೂಕಂಪವು 63 ಕಿಮೀ (39 ಮೈಲುಗಳು) ಆಳದಲ್ಲಿದೆ ಎಂದು ಇಎಂಎಸ್​​ಸಿ ತಿಳಿಸಿದೆ.ಭೂಕಂಪದ ನಂತರ ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಸುನಾಮಿ ಎಚ್ಚರಿಕೆಯನ್ನು ನೀಡಿದೆ.

ಸುನಾಮಿ ಶೀಘ್ರದಲ್ಲೇ ಫಿಲಿಪೈನ್ಸ್ ಮತ್ತು ಜಪಾನ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ  ಎಂದು ರಾಯಿಟರ್ಸ್ ವರದಿ ಮಾಡಿದೆ

ಫಿಲಿಪೈನ್ ಭೂಕಂಪಶಾಸ್ತ್ರ ಏಜೆನ್ಸಿ PHIVOLCS ಪ್ರಕಾರ ಸುನಾಮಿ ಅಲೆಗಳು ಫಿಲಿಪೈನ್ಸ್ ಅನ್ನು ಮಧ್ಯರಾತ್ರಿಯ ವೇಳೆಗೆ ಅಪ್ಪಳಿಸಬಹುದು (1600 GMT) ಮತ್ತು ಗಂಟೆಗಳವರೆಗೆ ಮುಂದುವರಿಯಬಹುದು. ಜಪಾನಿನ ಬ್ರಾಡ್‌ಕಾಸ್ಟರ್ NHK, ಒಂದು ಮೀಟರ್ (3 ಅಡಿ) ಎತ್ತರದ ಸುನಾಮಿ ಅಲೆಗಳು ಸ್ವಲ್ಪ ಸಮಯದ ನಂತರ ಅಂದರೆ ಭಾನುವಾರದಂದು (ಶನಿವಾರ 1630 GMT) 1:30 ಕ್ಕೆ ಜಪಾನ್‌ನ ಪಶ್ಚಿಮ ಕರಾವಳಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ

ಕಳೆದ ತಿಂಗಳ ಆರಂಭದಲ್ಲಿ ದಕ್ಷಿಣ ಫಿಲಿಪೈನ್ಸ್‌ನಲ್ಲಿ 6.7 ತೀವ್ರತೆಯ ಕಡಲಾಚೆಯ ಭೂಕಂಪದಲ್ಲಿ ಎಂಟು ಜನರು ಸಾವಿಗೀಡಾಗಿದ್ದರು

ನವೆಂಬರ್ 17 ರ ಭೂಕಂಪದಲ್ಲಿ ಸಾವುಗಳು ಸಾರಂಗನಿ, ದಕ್ಷಿಣ ಕೊಟಾಬಾಟೊ ಮತ್ತು ದಾವೊ ಆಕ್ಸಿಡೆಂಟಲ್ ಪ್ರಾಂತ್ಯಗಳಿಂದ ವರದಿಯಾಗಿದೆ. ಆದರೆ ಕಂಪನದಿಂದ 13 ಜನರು ಗಾಯಗೊಂಡಿದ್ದಾರೆ, ಇದು ಹಲವಾರು ಜನರನ್ನು ಭಯಭೀತರನ್ನಾಗಿ ಮಾಡಿತು. ಇದು  50 ಕ್ಕೂ ಹೆಚ್ಚು ಮನೆಗಳು ಮತ್ತು ಇತರ ಕಟ್ಟಡಗಳನ್ನು ಹಾನಿಗೊಳಿಸಿತು.

ಇದನ್ನೂ ಓದಿTim Southee: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಟಿಮ್ ಸೌಥಿ

ಪೆಸಿಫಿಕ್ “ರಿಂಗ್ ಆಫ್ ಫೈರ್” ನಲ್ಲಿ ನೆಲೆಗೊಂಡಿರುವ ಫಿಲಿಪೈನ್ಸ್‌ನಲ್ಲಿ ಭೂಕಂಪಗಳು ಆಗಾಗ್ಗೆ ಸಂಭವಿಸುತ್ತವೆ, ಇದನ್ನು U.S. ಭೂವೈಜ್ಞಾನಿಕ ಸಮೀಕ್ಷೆಯು “ವಿಶ್ವದ ಅತ್ಯಂತ ಭೂಕಂಪನ ಮತ್ತು ಜ್ವಾಲಾಮುಖಿ ಸಕ್ರಿಯ ವಲಯ” ಎಂದು ವಿವರಿಸುತ್ತದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:42 pm, Sat, 2 December 23