AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರ ಎಡವಟ್ಟು: ಸತ್ತಿದ್ದಾನೆಂದು ಬದುಕಿದ್ದವನನ್ನೇ ಕೊಂದರು, ಆಗಿದ್ದೇನು?

ಬ್ರೆಜಿಲ್‌ನಲ್ಲಿ 90 ವರ್ಷದ ವೃದ್ದಯೊಬ್ಬರು ಸತ್ತು ಬದುಕಿರುವ ಘಟನೆಯೊಂದು ನಡೆದಿದೆ. ಬ್ರೆಜಿಲ್‌ನ ಆಸ್ಪತ್ರೆಯೊಂದರ ವೈದ್ಯರ ಎಡವಟ್ಟಿನಿಂದ 90ರ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆತನ ಮೃತದೇಹವನ್ನು ಪ್ಲಾಸಿಕ್ಟ್​​​​ ಬ್ಯಾಗ್​​ನಲ್ಲಿ ಪ್ಯಾಕ್​​​ ಮಾಡಿ, ಶವಗಾರಕ್ಕೆ ಕಳುಹಿಸಲಾಗಿದೆ. ಶವಗಾರದಲ್ಲಿರುವ ಸಿಬ್ಬಂದಿ ಈ ಮೃತ ದೇಹವನ್ನು ಕೂಲ್​​​ ಮಾಡಲು ತೆಗೆದುಕೊಂಡು ಹೋಗಲು ಬಂದಿದ್ದಾರೆ. ಈ ವೇಳೆ ವ್ಯಕ್ತಿ ಉಸಿರಾಡುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ವೈದ್ಯರ ಎಡವಟ್ಟು: ಸತ್ತಿದ್ದಾನೆಂದು ಬದುಕಿದ್ದವನನ್ನೇ ಕೊಂದರು, ಆಗಿದ್ದೇನು?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Dec 02, 2023 | 12:56 PM

Share

ಬ್ರೆಜಿಲ್‌ನಲ್ಲಿ 90 ವರ್ಷದ ವೃದ್ದಯೊಬ್ಬರು ಸತ್ತು ಬದುಕಿರುವ ಘಟನೆಯೊಂದು ನಡೆದಿದೆ. ಬ್ರೆಜಿಲ್‌ನ ಆಸ್ಪತ್ರೆಯೊಂದರ ವೈದ್ಯರ ಎಡವಟ್ಟಿನಿಂದ 90ರ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆತನ ಮೃತದೇಹವನ್ನು ಪ್ಲಾಸಿಕ್ಟ್​​​​ ಬ್ಯಾಗ್​​ನಲ್ಲಿ ಪ್ಯಾಕ್​​​ ಮಾಡಿ, ಶವಗಾರಕ್ಕೆ ಕಳುಹಿಸಲಾಗಿದೆ. ಶವಗಾರದಲ್ಲಿರುವ ಸಿಬ್ಬಂದಿ ಈ ಮೃತ ದೇಹವನ್ನು ಕೂಲ್​​​ ಮಾಡಲು ತೆಗೆದುಕೊಂಡು ಹೋಗಲು ಬಂದಿದ್ದಾರೆ. ಈ ವೇಳೆ ವ್ಯಕ್ತಿ ಉಸಿರಾಡುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ 90 ವರ್ಷದ ವ್ಯಕ್ತಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಈ ವ್ಯಕ್ತಿ ಶುಕ್ರುವಾರ ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದಾರೆ. ಇದರ ನಂತರ ಆ ವ್ಯಕ್ತಿಯ ಜತೆಗೆ ಆತನ ಪತ್ನಿ ಮಾತನಾಡಿದ್ದಾರೆ. ಆದರೆ ಅದೇ ದಿನ ರಾತ್ರಿ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ರಾತ್ರಿ 11:40ಕ್ಕೆ ಮಹಿಳೆಗೆ ಮರಣ ಪ್ರಮಾಣಪತ್ರವನ್ನು ಆಸ್ಪತ್ರೆ ನೀಡಿದೆ. ಈ ವರದಿಯಲ್ಲಿ ಆತ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು ಹೇಳಲಾಗಿದೆ. ಸಾವನ್ನಪ್ಪಿದ್ದ ನಂತರ ಆ ವ್ಯಕ್ತಿಯ ಮನೆಯವರಿಗೆ ಆತನ ಮುಖ ನೋಡಲು ಸಹ ಬಿಡದೆ. ತರಾತುರಿಯಲ್ಲಿ ಆತನ ದೇಹವನ್ನು ಶವಗಾರಕ್ಕೆ ಕಳುಹಿಸಲಾಗಿದೆ. ನಂತರ ಸ್ಮಶಾನದ ಸಿಬ್ಬಂದಿ 1:30 ರ ಸುಮಾರಿಗೆ ದೇಹವನ್ನು ಸಂಗ್ರಹ ಮಾಡಲು ಶವಗಾರಕ್ಕೆ ಬಂದಿದ್ದಾರೆ. ಈ ವೇಳೆ ಪ್ಯಾಸ್ಲಿಕ್​​​​ ಒಳಗೆ ಇದ್ದ ದೇಹವನ್ನು ಹೊರಗೆ ತೆಗೆದಾಗ ದೇಹ ಬಿಸಿಯಾಗಿರುವುದನ್ನು ಕಂಡು ಸ್ಮಶಾನದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ನಂತರ ಶವವನ್ನು ಮತ್ತೆ ಕೂಲ್​​​ಗೆ ಹಾಕಿದಾಗ, ದೇಹ ನಿಧಾನವಾಗಿ ಉಸಿರಾಡಲು ಶುರು ಮಾಡಿದೆ. ತಕ್ಷಣ ಈ ಬಗ್ಗೆ ಸ್ಮಶಾನ ಸಿಬ್ಬಂದಿ ವೈದ್ಯರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಹಲ್ಲಿನ ಚಿಕಿತ್ಸೆ ಪಡೆದ ಯುವ ನಟಿಗೆ ಇಂಥ ದುಸ್ಥಿತಿ; ವೈದ್ಯರ ಎಡವಟ್ಟಿನಿಂದ ಮುಖ ವಿರೂಪ

ವೈದ್ಯರು ಪರೀಕ್ಷೆ ನಡೆಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 90 ವರ್ಷದ ವ್ಯಕ್ತಿ ಸೋಮವಾರದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಆತನ ಪತ್ನಿ Ms ಜೆಸ್ಸಿಕಾ ನನ್ನ ಪತಿಯನ್ನು ಪ್ಯಾಸ್ಟಿಕ್​​​​ನ ಒಳಗೆ ಹಾಕಿ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ. ಅವರು ಅನ್ಯಾರೋಗದಿಂದ ಬಳಲುತ್ತಿದ್ದ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಯಾವುದೇ ಅಪ್ಡೇಟ್​​ನ್ನು ವೈದ್ಯರು ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನನ್ನ ಪತಿ ಸಾವಿನ ಸಂಬಂಧಿಸಿದಂತೆ ಎರಡು ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಇದರ ಬಗ್ಗೆ ಆಸ್ಪತ್ರೆ ವೈದ್ಯರು ನಮಗೆ ಉತ್ತರ ನೀಡಬೇಕು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ Ms ಜೆಸ್ಸಿಕಾ ಅವರ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಈ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:53 pm, Sat, 2 December 23

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ