ವೈದ್ಯರ ಎಡವಟ್ಟು, ಬಾಣಂತಿ ಜೀವ ತೆಗೆಯಿತಾ ಅನಸ್ತೇಶಿಯಾ?
ಉತ್ತರಕನ್ನಡ: ಸಹಜ ಹೆರಿಗೆಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ, 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಗೀತಾ ಶಿವನಾಥ್ ಬಾನಾವಳಿಕರ್ ( 28) ಮೃತ ದುರ್ದೈವಿಯಾಗಿದ್ದಾರೆ. ಕಾರವಾರ ಬಳಿಯ ಸರ್ವೋದಯ ನಗರದ ನಿವಾಸಿಯಾಗಿರುವ ಗೀತಾ, ಎರಡನೇ ಹೆರಿಗೆಯಾದ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದರು. ಹೀಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗೀತಾ, ಇದ್ದಕ್ಕಿದಂತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗೀತಾರವರ ಸಾವಿನಿಂದ ರೊಚ್ಚಿಗೆದ […]
ಉತ್ತರಕನ್ನಡ: ಸಹಜ ಹೆರಿಗೆಯಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ, 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಸಾವನ್ನಪ್ಪಿರುವ ಘಟನೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಗೀತಾ ಶಿವನಾಥ್ ಬಾನಾವಳಿಕರ್ ( 28) ಮೃತ ದುರ್ದೈವಿಯಾಗಿದ್ದಾರೆ. ಕಾರವಾರ ಬಳಿಯ ಸರ್ವೋದಯ ನಗರದ ನಿವಾಸಿಯಾಗಿರುವ ಗೀತಾ, ಎರಡನೇ ಹೆರಿಗೆಯಾದ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದರು.
ಹೀಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗೀತಾ, ಇದ್ದಕ್ಕಿದಂತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗೀತಾರವರ ಸಾವಿನಿಂದ ರೊಚ್ಚಿಗೆದ ಕುಟುಂಬಸ್ಥರು, ವೈದ್ಯರ ಎಡವಟ್ಟಿನಿಂದ ಗೀತಾ ಸಾವನ್ನಪ್ಪಿದ್ದಾರೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸ್ಥಿರವಾಗಿದ್ದ ಗೀತಾಗೆ ಆಸ್ಪತ್ರೆ ವೈದ್ಯರು ಅನಸ್ತೇಶಿಯಾ ನೀಡಿ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್ ಮಾಡಲು ಮುಂದಾಗಿದ್ದಾರೆ. ವೈದ್ಯರು ಅನಸ್ತೇಶಿಯಾ ನೀಡಿದರಿಂದಲೇ ಬಾಣಂತಿ ಸಾವಾಗಿದೆಯೆಂದು ಕುಟುಂಸಬಸ್ಥರ ಆರೋಪ ಮಾಡಿದ್ದು, ಕಾರವಾರ ಜಿಲ್ಲಾಸ್ಪತ್ರೆಯ ಡೆಲಿವರಿ ವಾರ್ಡ್‌ನ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.