ಪಾಕಿಸ್ತಾನದ ಸಂಸದೆ ಒಂದು ಅಚ್ಚರಿ ಹಾಗೂ ಇಡೀ ಪಾಕ್ ನಾಚಿಗೆ ಪಡುವ ದಾಖಲೆಯೊಂದನ್ನು ಟಿವಿ ಡಿಬೆಟ್ ಮೂಲಕ ಜನರ ಮುಂದೆ ಇಟ್ಟಿದ್ದಾರೆ. ಪಾಕ್ ಗಂಡಸರು ಒಂದು ಹೆಣ್ಣನ್ನು ಅದರಲ್ಲೂ ತಮ್ಮ ಸಹೋದರಿಗೆ, ತಾಯಿಯನ್ನು ಹೇಗೆಲ್ಲ ನಡೆಸಿಕೊಳ್ಳುತ್ತಾರೆ ಎಂಬ ಸತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಟಿವಿ ಡಿಬೆಟ್ನಲ್ಲಿ ಪಾಕ್ ಸಂಸದೆ ಇಟ್ಟಿರುವ ಈ ದಾಖಲೆಯ ಸತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪಾಕಿಸ್ತಾನದಲ್ಲಿ 82% ರಷ್ಟು ಮಹಿಳೆಯರು ತಮ್ಮ ಮನೆಯ ಪುರುಷರಿಂದಲ್ಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಅತ್ಯಾಚಾರ ಆಗಿರುವ ಮಹಿಳೆಯರೇ ಹೇಳಿದ್ದಾರೆ. ಅವರ ತಂದೆ, ಸಹೋದರರು, ಅಜ್ಜ ಮತ್ತು ಚಿಕ್ಕಪ್ಪ ಇವರಿಂದಲೇ ನಾವು ಅತ್ಯಾಚಾರಕ್ಕೆ ಒಳಗಾಗಿದ್ದೇವೆ ಎಂದು ಹೇಳಿದ್ದಾರೆ. ವಾರ್ ಆನ್ ರೇಪ್ (WAR) ಸಂಸ್ಥೆಯ ವರದಿಯನ್ನು ಸಂಸದೆ ಷಂಡನಾ ಗುಲ್ಜಾರ್ ಖಾನ್ ಟಿವಿ ಶೋವೊಂದರಲ್ಲಿ ಜನರ ಮುಂದೆ ಇಟ್ಟಿದ್ದಾರೆ.
Pakistani Muslim ladies or girls are raped 82% by their own Fathers, own Brothers, grand fathers, Maternal Uncles and Other Blood Relations!
Indian Muslims are not that bad because they are brought up among Hindu Cultures !@GovtofPakistan @UNICEF_Pakistan pic.twitter.com/mQYpX9BgIU— Nazia Elahi Khan (Modi Ka Parivar) (@NaziaElahiKhan1) September 27, 2024
ಹೆಚ್ಚಿನ ಹುಡುಗಿಯರ ಮೇಲೆ ಅವರ ಮನೆಯ ಸದಸ್ಯರೇ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಈ ದಾಖಲೆಯನ್ನು ನೀಡಿರುವ ಗುಲ್ಜಾರ್ ಒಬ್ಬ ರಾಜಕಾರಣಿಯಾಗಿದ್ದು, ಸಂಸದೆ ಕೂಡ ಹೌದು, ಆಗಸ್ಟ್ 2018 ರಿಂದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ. ಈ ಕಾರಣಕ್ಕೆ ಈ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಒಬ್ಬ ಸಂಸದೆಯೇ ದಾಖಲೆ ಸಹಿತ ಸಾಕ್ಷಿಯನ್ನು ನೀಡಿರುವ ಕಾರಣ ಪಾಕ್ನಲ್ಲಿ ಈ ಬಗ್ಗೆ ತಲ್ಲಣ ಸೃಷ್ಟಿಯಾಗಿದೆ.
ಇದನ್ನೂ ಓದಿ: ಲೆಬನಾನ್‌ದ ಮೇಲೆ ಮತ್ತೆ ದಾಳಿ, ನಿಮ್ಮ ಸರ್ವನಾಶ ಆಗುವವರೆಗೆ ನಮ್ಮ ದಾಳಿ ನಿಲ್ಲುವುದಿಲ್ಲ ಉಗ್ರರಿಗೆ ಎಚ್ಚರಿಕೆ ನೀಡಿದ ಇಸ್ರೇಲ್
ಇನ್ನು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಗರ್ಭಿಣಿಯಾಗುತ್ತಾರೆ. ಅವರು ಯಾವ ಕಾರಣಕ್ಕೂ ಪೊಲೀಸರಿಗೆ ಈ ಬಗ್ಗೆ ದೂರು ನೀಡುವುದಿಲ್ಲ. ಬದಲಿಗೆ ಗರ್ಭಪಾತ ಮಾಡಿಕೊಳ್ಳಲು ಸ್ತ್ರೀರೋಗತಜ್ಞರ ಬಳಿ ಹೋಗುತ್ತಾರೆ. ಮಗಳ ಮೇಲೆ ತನ್ನ ಗಂಡ ಅತ್ಯಾಚಾರ ಮಾಡಿದ್ರು ಆಕೆ ತನ್ನ ಗಂಡನನ್ನು ಬಿಡುವುದಿಲ್ಲ. ಈ ಕಾರಣಕ್ಕೆ ತಾಯಿ ತನ್ನ ಮಗಳ ಮೇಲೆ ಅತ್ಯಾಚಾರ ಅದರೂ ಅದನ್ನು ಪ್ರತಿಭಟಿಸುವುದಿಲ್ಲ, ಪೊಲೀಸರಿಗೆ ದೂರು ನೀಡುವುದಿಲ್ಲ. ಈ ಬಗ್ಗೆ ಪಾಕಿಸ್ತಾನದಲ್ಲಿ ಯಾರೊಬ್ಬರು ಮಾತನಾಡುವುದಿಲ್ಲ, ಅದಕ್ಕಾಗಿ ಪ್ರತಿಭಟಿಸಲು ಯಾರು ಮುಂದೆ ಬರುವುದಿಲ್ಲ. ಯಾಕೆಂದರೆ ಜೀವ ಭಯ ಎಂದು ಸಂಸದೆ ಹೇಳಿದ್ದಾರೆ.
ಮತ್ತಷ್ಟು ವಿಶ್ವದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:01 am, Sat, 28 September 24