ಕಳೆದ ಒಂದು ವಾರದಿಂದ ವಿಶ್ವದ ವಿವಿಧ ನಾಯಕರ ಮೇಲಿದೆ ಸಾವಿನ ತೂಗುಗತ್ತಿ

|

Updated on: May 20, 2024 | 3:04 PM

ವಿಶ್ವದ ವಿವಿಧ ದೇಶಗಳ ನಾಯಕರ ಮೇಲೆ ಸಾವಿನ ತೂಗುಗತ್ತಿ ಇದೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರನ್ನು ಸಹಜ ಸಾವಲ್ಲ ಹತ್ಯೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಕಳೆದ ಒಂದು ವಾರದಲ್ಲಿ ಯಾವ್ಯಾವ ಜಾಗತಿಕ ನಾಯಕರಿಗೆ ಬೆದರಿಕೆ ಬಂದಿದೆ ಅಥವಾ ಹಲ್ಲೆ ನಡೆದಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕಳೆದ ಒಂದು ವಾರದಿಂದ ವಿಶ್ವದ ವಿವಿಧ ನಾಯಕರ ಮೇಲಿದೆ ಸಾವಿನ ತೂಗುಗತ್ತಿ
Follow us on

ಹೆಲಿಕಾಪ್ಟರ್​ ಪತನದಿಂದಾಗಿ ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ(Ebrahim Raisi) ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್​ ಪತನ ಸಹಜವೆಂಬಂತೆ ಕಂಡರೂ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇಬ್ರಾಹಿಂ ರೈಸಿ ಮತ್ತು ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ನೇತೃತ್ವದಲ್ಲಿ ಇರಾನ್ ಕಳೆದ ತಿಂಗಳು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತ್ತು. ಯುರೇನಿಯಂನ್ನು ಶಸ್ತ್ರಾಸ್ತ್ರ-ದರ್ಜೆಯ ಮಟ್ಟಕ್ಕೆ ಹಿಂದೆಂದಿಗಿಂತಲೂ ಉತ್ಕ್ರೃಷ್ಠಗೊಳಿಸಿತ್ತು ಇದೀಗ ಇಬ್ರಾಹಿಂ ಸಾವಿಗೂ ಇಸ್ರೇಲ್​ಗೂ ಸಂಬಂಧವಿದೆಯೇ ಎನ್ನುವ ಅನುಮಾನ ಹುಟ್ಟಿದೆ. ಹಾಗೆಯೇ ಮೇ 7ರಿಂದೀಚೆಗೆ ಹಲವು ವಿಶ್ವ ನಾಯಕರ ಮೇಲೆ ದಾಳಿಗಳು ನಡೆದಿವೆ ಎಂಬುದು ಗಮನಿಸಬೇಕಾದ ಅಂಶ.

ಸೌದಿ ಅರೇಬಿಯಾದ ಕ್ರೌನ್​ ಪ್ರಿನ್ಸ್​ ಮೊಹಮ್ಮದ್ ಬಿನ್ ಸಲ್ಮಾನ್​ ಹತ್ಯೆಗೆ ಯತ್ನ
ಮೇ 7ರಂದು ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್​ ಹತ್ಯೆಗೆ ಪ್ರಯತ್ನ ನಡೆದಿತ್ತು ಎಂಬುದನ್ನು ವಿಡಿಯೋ ಒಂದು ಬಹಿರಂಗಪಡಿಸಿದೆ.

ಟರ್ಕಿ ಅಧ್ಯಕ್ಷರ ತುರ್ತು ಸಭೆ
ಸಂಭಾವ್ಯ ದಂಗೆಯ ಎಚ್ಚರಿಕೆ ಸಿಕ್ಕ ಹಿನ್ನೆಲೆಯಲ್ಲಿ ಮೇ 13ರಂದು ಟರ್ಕಿ ಅಧ್ಯಕ್ಷರು ತುರ್ತು ಸಭೆ ನಡೆಸಿದ್ದರು. 2016ರ ರೀತಿಯ ದಂಗೆ ಪುನರಾವರ್ತಿತಗೊಳ್ಳಬಹುದು ಎನ್ನುವ ಎಚ್ಚರಿಕೆ ಸಿಕ್ಕಿತ್ತು.

ಮತ್ತಷ್ಟು ಓದಿ: Ebrahim Raisi Death: ಹೆಲಿಕಾಪ್ಟರ್ ಪತನ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಮೇಲೆ ಗುಂಡಿನ ದಾಳಿ
ಮೇ 15ರಂದು ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಫಿಕೊ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಡನೆಸಿದ್ದರು, ಹೊಟ್ಟೆಗೆ ಗುಂಡು ತಾಗಿತ್ತು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ.

ಸೆರ್ಬಿಯಾ ಅಧ್ಯಕ್ಷರ ಹತ್ಯೆ ಬೆದರಿಕೆ
ಸೆರ್ಬಿಯಾದ ಅಧ್ಯಕ್ಷ ವುಸಿಕ್ರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮೇ 16ರಂದು ಪೊಲೀಸರು ಬಂಧಿಸಿದ್ದರು.

ಸೌದಿ ಅರೇಬಿಯಾ ರಾಜಕುಮಾರ ಆಸ್ಪತ್ರೆಗೆ ದಾಖಲು
ಮೇ 19ರಂದು ಸೌದಿ ಅರೇಬಿಯಾ ರಾಜಕುಮಾರ ಸಲ್ಮಾನ್ ನಾಲ್ಕು ವಾರಗಳಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು.

ಹೆಲಿಕಾಪ್ಟರ್​ ಅಪಘಾತದಲ್ಲಿ ಇಬ್ರಾಹಿಂ ರೈಸಿ ಸಾವು
ಮೇ 19ರಂದು ಸಂಭವಿಸಿದ ಹೆಲಿಕಾಪ್ಟರ್​ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಜೀವದಹನವಾಗಿರುವ ಮಾಹಿತಿ ಲಭ್ಯವಾಗಿದೆ. ಇದೆಲ್ಲಾ ಘಟನೆಗಳು ವಾರದೊಳಗೆ ನಡೆದಿದ್ದು, ವಿಶ್ವ ನಾಯಕರನ್ನು ಏಕೆ ಟಾರ್ಗೆಟ್​ ಮಾಡುತ್ತಿದ್ದಾರೆ ಎನ್ನುವ ಆಲೋಚನೆ ಮೂಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ