ಸಿಂಗಾಪುರದಲ್ಲಿ ಮಾಂಸ ಉತ್ಪನ್ನಗಳ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದ ಭಾರತೀಯನಿಗೆ ಜೈಲು ಶಿಕ್ಷೆ
ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳು ಸಿಂಗಾಪುರದಲ್ಲಿ ಮಾಂಸ ಉತ್ಪನ್ನಗಳ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಲ್ಲಿ ಒಬ್ಬನಿಗೆ 30 ತಿಂಗಳು ಜೈಲು ಶಿಕ್ಷೆಯನ್ನು ನೀಡಲಾಗಿದೆ. ಹಾಗೂ ಮತ್ತೊಬ್ಬನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿಂಗಾಪುರದಲ್ಲಿ ಭಾರತೀಯ ಮೂಲದ ಡೆಲಿವರಿ ಮಾಂಸದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ 170,000 ಮೌಲ್ಯದ ಮಾಂಸವನ್ನು ಕದ್ದು ಮಾರಾಟ ಮಾಡಿದ್ದಾನೆ. ಇದೀಗ ಆತನಿಗೆ 30 ತಿಂಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಇತನನ್ನು ಭಾರತೀಯ ಮೂಲದ ಶಿವಂ ಕರುಪ್ಪನ್ (42) ಎಂದು ಗುರುತಿಸಲಾಗಿದೆ. ಕದ್ದ ಮಾಂಸವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ, ಹಾಗೂ ಅದರಿಂದ ಬಂದ ಹಣವನ್ನು ತಾನು ಮತ್ತು ವಿತರಕ ಚೀ ಸಾಂಗ್ ಫುಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸಹೋದ್ಯೋಗಿ ನೀಡಿದ್ದಾನೆ ಎಂದು ಹೇಳಲಾಗಿದೆ. ಇದೀಗ ಆತನ ಸಹೋದ್ಯೋಗಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಆತನ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಿವಂ ಕರುಪ್ಪನ್ ಅವರ ಸಹೋದ್ಯೋಗಿ ಕೂಡ ಭಾರತೀಯ ಮೂಲದ ನೇಶನ್ ಗುಣಸುಂದ್ರಂ (27) ಎಂದು ಹೇಳಲಾಗಿದೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಹಲವು ದಿನಗಳಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದಾರೆ. ನೇಶನ್ ಗುಣಸುಂದ್ರಂ ಈ ಕಂಪನಿಯಲ್ಲಿ ಗೋದಾಮಿನ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ನೇಶನ್ ಗುಣಸುಂದ್ರಂ ಗೋದಾಮಿನ ಒಳಗೆ ಮತ್ತು ಹೊರಗೆ ಹೋಗುವ ಸರಕುಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದರು. ಇತರ ಕೆಲಸಗಾರರಿಗೆ ಸರಿಯಾದ ಪ್ರಮಾಣದ ಮಾಂಸ ಉತ್ಪನ್ನಗಳನ್ನು ಲೋಡ್ ಮಾಡಲು ಮತ್ತು ಗ್ರಾಹಕರಿಗೆ ತಲುಪಿಸಲು ಜವಾಬ್ದಾರಿಯನ್ನು ನೇಶನ್ ಗುಣಸುಂದ್ರಂಗೆ ನೀಡಲಾಗಿತ್ತು. 2021ರಲ್ಲಿ, ಕರುಪ್ಪನ್ ಕಂಪನಿಯ ಗ್ರಾಹಕರಲ್ಲಿ ಒಬ್ಬರ ಜತೆಗೆ ಮಾಂಸ ರಫ್ತಿನ ಬಗ್ಗೆ ಒಂದು ಸಣ್ಣ ಒಪ್ಪಂದ ಮಾಡಿಕೊಂಡಿದ್ದರು. ಕಡಿಮೆ ಬೆಲೆಯಲ್ಲಿ ಹೆಚ್ಚು ಮಾಂಸವನ್ನು ಪಡೆಯುವ ಒಪ್ಪಂದವಾಗಿತ್ತು. ಮಾಂಸ ಕೊಳ್ಳಲು ನೇರವಾಗಿ ಕರುಪ್ಪನಿಗೆ ಹಣ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಕಂಪನಿಯಿಂದ ಮಾಂಸ ಉತ್ಪನ್ನಗಳನ್ನು ಕದ್ದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ, ಬಂದ ಹಣವನ್ನು ನೇಶನ್ ಗುಣಸುಂದ್ರಂ ಮತ್ತು ಕರುಪ್ಪ ಹಂಚಿಕೊಳ್ಳುತ್ತಿದ್ದರು. ಇನ್ನು ಕಂಪನಿಗೆ ಬಂದ ಆರ್ಡರ್ಗಳನ್ನು, ತಮ್ಮತ್ತ ಸೆಳೆದು, ಕಡಿಮೆ ಬೆಲೆಯಲ್ಲಿ ಹೆಚ್ಚು ಮಾಂಸವನ್ನು ಮಾರಾಟ ಮಾಡುತ್ತಿದ್ದರು. ನಂತರ ತಮ್ಮ ಸಿಬ್ಬಂದಿಗೆ ಹೇಳಿ ಡೆಲಿವರಿ ಟ್ರಕ್‌ಗೆ ಲೋಡ್ ಮಾಡಲು ಹೇಳುತ್ತಿದ್ದರು.
ಇದನ್ನೂ ಓದಿ: ಇಬ್ರಾಹಿಂ ರೈಸಿ ನಿಧನ: ಇರಾನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್
ಕರುಪ್ಪನ್ ಮತ್ತು ಗುಣಸುಂದ್ರಂ ಅವರು ಒಟ್ಟು SGD 170,059.77 (₹105082.04) ಮೌಲ್ಯದ ಮಾಂಸ ಉತ್ಪನ್ನಗಳನ್ನು ಕದ್ದಿದ್ದಾರೆ ಎಂದು ಕೋರ್ಟ್ ಮುಂದೆ ಹೇಳಲಾಗಿದೆ. ಇನ್ನು ಈ ಬಗ್ಗೆ ಅನುಮಾನ ಬಂದು ಜುಲೈ 23, 2022 ರಂದು, ಕಂಪನಿಯ ಕಾರ್ಯಾಚರಣೆ ನಡೆಸಿದ್ದು, ಲಾಜಿಸ್ಟಿಕ್ಸ್ ಮ್ಯಾನೇಜರ್ ಎಡ್ಡಿ ಲೋಹ್ ಅವರು ಆಂತರಿಕ ತನಿಖೆಗಳನ್ನು ನಡೆಸಿದ ನಂತರ ಇವರ ಕಳ್ಳತನ ಬಹಿರಂಗವಾಗಿದೆ.
ಕಂಪನಿಯ ಗೋದಾಮಿನಿಂದ ಮಾಂಸ ಉತ್ಪನ್ನಗಳನ್ನು ಕಳವು ಮಾಡಲಾಗಿದೆ ಎಂಬ ವದಂತಿಗಳ ಕುರಿತು ಲೋಹ್ ಅವರಿಗೆ ತಿಳಿಸಲಾಯಿತು. ಗ್ರಾಹಕರು ಆರ್ಡರ್ ಮಾಡಿದ ಉತ್ಪನ್ನಗಳ ಪ್ರಮಾಣ ಮತ್ತು ವಿತರಣೆಗಾಗಿ ಲೋಡ್ ಮಾಡಿದ ಪ್ರಮಾಣದಲ್ಲಿ ವ್ಯಾತ್ಯಾಸ ಇದೆ ಎಂಬುದು ಪತ್ತೆ ಮಾಡಲಾಗಿದೆ. ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ (ಡಿಪಿಪಿ) ರೋನಿ ಆಂಗ್ ಅವರು ಕರುಪ್ಪನ್ ಅವರ ಈ ಅಪರಾಧಗಳಿಗಾಗಿ 32 ರಿಂದ 38 ತಿಂಗಳ ಜೈಲು ಶಿಕ್ಷೆಯನ್ನು ಕೋರಿದರು. ಉದ್ಯೋಗದಾತರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ