ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದೆ, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ: ಪುಟಿನ್

|

Updated on: May 09, 2023 | 4:09 PM

ರೆಡ್ ಸ್ಕ್ವೇರ್‌ನಲ್ಲಿ 10 ನಿಮಿಷಗಳ ಭಾಷಣದಲ್ಲಿ ಪುಟಿನ್, ಉಕ್ರೇನ್‌ನಲ್ಲಿ ರಷ್ಯಾ ಸುಮಾರು 15 ತಿಂಗಳುಗಳಲ್ಲಿ ನಡೆಸುತ್ತಿದ್ದ ಯುದ್ಧದ ವೇಳೆ ಹಲವು ಬಾರಿ ನೀಡಿದ ಪರಿಚಿತ ಸಂದೇಶಗಳನ್ನು ಪುನರಾವರ್ತಿಸಿದರು.

ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದೆ, ರಷ್ಯಾ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ: ಪುಟಿನ್
ವ್ಲಾಡಿಮಿರ್ ಪುಟಿನ್
Follow us on

ಮಾಸ್ಕೋ: ಮಾಸ್ಕೋದ ರೆಡ್ ಸ್ಕ್ವೇರ್ ವಿಕ್ಟರಿ ಡೇ ಪರೇಡ್‌ನಲ್ಲಿ (Victory Day parade) ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಜಗತ್ತು ಟರ್ನಿಂಗ್ ಪಾಯಿಂಟ್​​ನಲ್ಲಿದೆ ಎಂದು ಹೇಳಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ನಾಝಿ ಜರ್ಮನಿಯ ವಿರುದ್ಧದ ವಿಜಯದ ವಾರ್ಷಿಕೋತ್ಸವವನ್ನು ದೇಶವು ಆಚರಿಸುತ್ತಿರುವಾಗ, ಜಗತ್ತು ಟರ್ನಿಂಗ್ ಪಾಯಿಂಟ್​ನಲ್ಲಿದೆ. ನಾವು ದೇಶದ ಭವಿಷ್ಯಕ್ಕಾಗಿ ದೇಶಭಕ್ತಿಯ ಹೋರಾಟದಲ್ಲಿ ತೊಡಗಿರುವುದಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ರಷ್ಯನ್ನರಿಗೆ ತಿಳಿಸಿದ್ದಾರೆ.

ಇಂದು, ನಾಗರಿಕತೆಯು ಮತ್ತೊಮ್ಮೆ ನಿರ್ಣಾಯಕ ತಿರುವಿನ ಹಂತದಲ್ಲಿದೆ. ನಮ್ಮ ತಾಯ್ನಾಡಿನ ವಿರುದ್ಧ ನಿಜವಾದ ಯುದ್ಧ ಶುರುವಾಗಿದೆ. ನಾವು ಅಂತರಾಷ್ಟ್ರೀಯ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಿದ್ದೇವೆ, ನಾವು ಡೊನ್ಬಾಸ್ ನಿವಾಸಿಗಳನ್ನು ರಕ್ಷಿಸುತ್ತೇವೆ, ನಮ್ಮ ಭದ್ರತೆಯನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಪುಟಿನ್ ಹೇಳಿದ್ದಾರೆ.

ರೆಡ್ ಸ್ಕ್ವೇರ್‌ನಲ್ಲಿ 10 ನಿಮಿಷಗಳ ಭಾಷಣದಲ್ಲಿ ಪುಟಿನ್, ಉಕ್ರೇನ್‌ನಲ್ಲಿ ರಷ್ಯಾ ಸುಮಾರು 15 ತಿಂಗಳುಗಳಲ್ಲಿ ನಡೆಸುತ್ತಿದ್ದ ಯುದ್ಧದ ವೇಳೆ ಹಲವು ಬಾರಿ ನೀಡಿದ ಪರಿಚಿತ ಸಂದೇಶಗಳನ್ನು ಪುನರಾವರ್ತಿಸಿದರು.

ಪಾಶ್ಚಿಮಾತ್ಯ ಜಾಗತಿಕ ಗಣ್ಯರು ರಷ್ಯಾಫೋಬಿಯಾ ಮತ್ತು ಆಕ್ರಮಣಕಾರಿ ರಾಷ್ಟ್ರೀಯತೆಯನ್ನು ಬಿತ್ತುತ್ತಿದ್ದಾರೆ. ಆದರೆ ಉಕ್ರೇನಿಯನ್ ಜನರು ರಾಜ್ಯ ದಂಗೆಗೆ ಒತ್ತೆಯಾಳುಗಳಾಗಿ ಮತ್ತು ಪಶ್ಚಿಮದ ಮಹತ್ವಾಕಾಂಕ್ಷೆಗಳಿಗೆ ಮಾರ್ಪಟ್ಟಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: Strong Armies: ವಿಶ್ವ ಮಿಲಿಟರಿ ದೈತ್ಯರ ಪಟ್ಟಿ; ಟಾಪ್-4ನಲ್ಲಿ ಭಾರತ; ಪಾಕಿಸ್ತಾನ, ಚೀನಾದ ಸೇನಾ ಶಕ್ತಿ ಎಷ್ಟಿದೆ? ಇಲ್ಲಿದೆ ಜಿಎಫ್​ಪಿ ಮಾಹಿತಿ

ಉಕ್ರೇನ್‌ನಿಂದ ನಿರೀಕ್ಷಿತ ಪ್ರಮುಖ ಪ್ರತಿದಾಳಿಗಾಗಿ ಅದರ ಪಡೆಗಳು ತಯಾರಿ ನಡೆಸುತ್ತಿರುವಾಗ ರಷ್ಯಾ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪುಟಿನ್ ಮಾತಾಡಿಲ್ಲ. ಒಂದು ವಾರದ ಹಿಂದೆ ಕ್ರೆಮ್ಲಿನ್ ಸಿಟಾಡೆಲ್ ಮೇಲೆ ಡ್ರೋನ್ ದಾಳಿ ನಡೆದ ನಂತರ, ರೆಡ್ ಸ್ಕ್ವೇರ್‌ನಾದ್ಯಂತ ಬೃಹತ್ ಮಿಲಿಟರಿ ಮೆರವಣಿಗೆ ನಡೆದಿತ್ತು. ಇದಾದ ನಂತರ ರಷ್ಯಾ ಅಧ್ಯಕ್ಷರು ಭಾಷಣ ಮಾಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Tue, 9 May 23