Vladimir Putin: ವ್ಲಾಡಿಮಿರ್ ಪುಟಿನ್‌ ಹತ್ಯೆಗೆ ಉಕ್ರೇನ್ ಯತ್ನ ನಡೆಸಿದೆ: ರಷ್ಯಾ ಆರೋಪ

ದಾಳಿಯನ್ನು ಯೋಜಿತ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸುವುದಾಗಿ ಕ್ರೆಮ್ಲಿನ್ ಹೇಳಿದೆ. ಅದೇ ವೇಳೆ ದಾಳಿಗಾಗಿ ಬಳಸಿದ ಎರಡು ಡ್ರೋನ್‌ಗಳನ್ನು  ನಿಷ್ಕ್ರಿಯಗೊಳಿಸಲಾಗಿದೆ ಎಂದು  ರಷ್ಯಾ ಹೇಳಿದೆ.

Vladimir Putin: ವ್ಲಾಡಿಮಿರ್ ಪುಟಿನ್‌ ಹತ್ಯೆಗೆ ಉಕ್ರೇನ್ ಯತ್ನ ನಡೆಸಿದೆ: ರಷ್ಯಾ ಆರೋಪ
ವ್ಲಾಡಿಮಿರ್ ಪುಟಿನ್‌
Follow us
|

Updated on:May 03, 2023 | 6:35 PM

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಕೊಲ್ಲುವ ಉದ್ದೇಶದಿಂದ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿಗೆ(drone strike) ಉಕ್ರೇನ್ (Ukraine) ಪ್ರಯತ್ನಿಸಿದೆ ಎಂದು ರಷ್ಯಾ ಆರೋಪಿಸಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಯನ್ನು ಯೋಜಿತ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸುವುದಾಗಿ ಕ್ರೆಮ್ಲಿನ್ ಹೇಳಿದೆ. ಅದೇ ವೇಳೆ ದಾಳಿಗಾಗಿ ಬಳಸಿದ ಎರಡು ಡ್ರೋನ್‌ಗಳನ್ನು  ನಿಷ್ಕ್ರಿಯಗೊಳಿಸಲಾಗಿದೆ ಎಂದು  ರಷ್ಯಾ ಹೇಳಿದೆ. ಎರಡು ಮಾನವರಹಿತ ವೈಮಾನಿಕ ವಾಹನಗಳನ್ನು ಕ್ರೆಮ್ಲಿನ್‌ಗೆ ಗುರಿಯಾಗಿಸಿ ಬಿಡಲಾಗಿತ್ತು. ಮಿಲಿಟರಿ ಮತ್ತು ವಿಶೇಷ ಸೇವೆಗಳು ರಾಡಾರ್ ಯುದ್ಧ ವ್ಯವಸ್ಥೆಗಳ ಬಳಕೆಯೊಂದಿಗೆ ಸಮಯೋಚಿತ ಕ್ರಮಗಳ ಪರಿಣಾಮವಾಗಿ ಅವುಗಳನ್ನು ಹೊಡೆದುರುಳಿಸಲಾಯಿತು ಎಂದು ಕ್ರೆಮ್ಲಿನ್ ಹೇಳಿಕೆಯಲ್ಲಿ ತಿಳಿಸಿದೆ.

ನಾವು ಈ ಕ್ರಮಗಳನ್ನು ಯೋಜಿತ ಭಯೋತ್ಪಾದಕ ಕೃತ್ಯವೆಂದು ಪರಿಗಣಿಸುತ್ತೇವೆ. ಅಧ್ಯಕ್ಷರ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ವಿಜಯ ದಿನದ ಮುಂಚೆ ನಡೆಸಲಾಯಿತು. ಮೇ 9 ರ ಪರೇಡ್ ನಲ್ಲಿ ವಿದೇಶಿ ಅತಿಥಿಗಳ ಉಪಸ್ಥಿತಿಯನ್ನು ಸಹ ಯೋಜಿಸಲಾಗಿದೆ ಎಂದು ಅದು ಹೇಳಿದೆ.

ರಷ್ಯಾ ಎಲ್ಲಿ ಮತ್ತು ಯಾವಾಗ ಸೂಕ್ತವೆಂದು ತೋರುವ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಹೇಳಿಕೆಯಲ್ಲಿದೆ.

ಇದನ್ನೂ ಓದಿ: Serbia School Shooting: ಸರ್ಬಿಯಾ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಬಾಲಕ; 8 ವಿದ್ಯಾರ್ಥಿಗಳು, ಭದ್ರತಾ ಸಿಬ್ಬಂದಿ ಸಾವು

ವ್ಲಾಡಿಮಿರ್ ಪುಟಿನ್ ಗಾಯಗೊಂಡಿಲ್ಲ.ಕಟ್ಟಡಗಳಿಗೆ ಯಾವುದೇ ವಸ್ತು ಹಾನಿಯಾಗಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ. ಕ್ರೆಮ್ಲಿನ್ ಮೇಲೆ ಹೊಗೆ ಕಾಣಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ಕ್ರೆಮ್ಲಿನ್ ಹೇಳಿಕೆಗೆ ಸ್ವಲ್ಪ ಮೊದಲು, ಮಾಸ್ಕೋ ನಗರದ ಅಧಿಕಾರಿಗಳು ರಾಜಧಾನಿಯಲ್ಲಿ ಡ್ರೋನ್‌ಗಳ ಬಳಕೆಯನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಘಟನೆಯ ಹೊರತಾಗಿಯೂ ಮಾಸ್ಕೋದಲ್ಲಿ ಮೇ 9 ರ ವಿಜಯ ದಿನದ ಮೆರವಣಿಗೆ ಮುಂದುವರಿಯುತ್ತದೆ ಎಂದು ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಕ್ರೆಮ್ಲಿನ್ ಹೇಳಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Wed, 3 May 23