Australia: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಮೊಸಳೆಯೊಳಗೆ ಪತ್ತೆ

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದು, ಬಳಿಕ ಮೃತದೇಹ ಮೊಸಳೆಯೊಳಗೆ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನಲ್ಲಿ ಈ ಘಟನೆ ನಡೆದಿದೆ.

Australia: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಮೊಸಳೆಯೊಳಗೆ ಪತ್ತೆ
ಮೊಸಳೆ
Follow us
|

Updated on: May 03, 2023 | 2:25 PM

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದು, ಬಳಿಕ ಮೃತದೇಹ ಮೊಸಳೆಯೊಳಗೆ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನಲ್ಲಿ ಈ ಘಟನೆ ನಡೆದಿದೆ. 65 ವರ್ಷದ ಕೆವಿನ್ ಡಾರ್ಮೊಡಿ ಎಂಬುವವರು ಸಾಲ್ಟ್​ವಾಟರ್ ಕ್ರೊಕೊಟೈಲ್ ಹ್ಯಾಬಿಟ್ಯಾಟ್​ಗೆ ಮೀನು ಹಿಡಿಯಲೆಂದು ತೆರಳಿದ್ದರು.

ಮೀನು ಹಿಡಿಯುತ್ತಿದ್ದವರು ಜೋರಾಗಿ ಕಿರುಚಿದ್ದರು, ಬಳಿಕ ನೀರು ಚಿಮ್ಮಿತ್ತು ಯಾರು ಎಲ್ಲಿ ಹೋದರು ಎನ್ನುವ ಸುಳಿವೇ ಇರಲಿಲ್ಲ. ಅಂತಿಮವಾಗಿ ಅನಿವಾರ್ಯವಾಗಿ 4.2 ಮೀಟರ್ ಮತ್ತೊಂದು 2.8 ಮೀಟರ್​ ಉದ್ದದ ಮೊಸಳೆಯನ್ನು ರೇಂಜರ್​ ಹತ್ಯೆ ಮಾಡಿದ್ದಾರೆ.

ಮತ್ತಷ್ಟು ಓದಿ: ಮೊಸಳಿಲೇ ಅದು, ಅಲ್ಲಲೇ ಪಾ! ರಾತ್ರಿ ವೇಳೆ ಮೊಸಳೆ ಪ್ರತ್ಯಕ್ಷ

ಬಳಿಕ ಪರೀಕ್ಷೆ ನಡೆಸಿದಾಗ ಎರಡೂ ಮೊಸಳೆಯ ಹೊಟ್ಟೆಯೊಳಗೆ ಮಾನವರ ಅವಶೇಷಗಳು ಕಂಡುಬಂದಿವೆ. ಇದು ದುರಂತ ಸಾವು ಎಂದು ಹೇಳಲಾಯಿತು.

ಸುಮಾರು 130 ಮಂದಿ ಜನಸಂಖ್ಯೆಯನ್ನು ಹೊಂದಿರುವ ಗ್ರಾಮೀಣ ಉತ್ತರ ಕ್ವೀನ್ಸ್​ಲ್ಯಾಂಡ್​ ಪಟ್ಟಣವಾದ ಲಾರಾದವರಾಗಿದ್ದ ಅವರು ತಮ್ಮ ಉತ್ತಮ ಸ್ನೇಹಿತ ಎಂದು ಹೆಂಡರ್ಸನ್ ಹೇಳಿದ್ದಾರೆ. ಕ್ವೀನ್ಸ್​ಲ್ಯಾಂಡ್ ರಾಜ್ಯದ ವನ್ಯಜೀವಿ ಅಧಿಕಾರಿ ಮೈಕೆಲ್ ಜಾಯ್ಸ್ ಜನರು ಜಾಗರೂಕರಾಗಿರುವಂತೆ ಒತ್ತಾಯಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ