AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Donald Trump: 1979ರಲ್ಲಿ ಡೊನಾಲ್ಡ್​ ಟ್ರಂಪ್​ ಜತೆಗಿನ ವಿಮಾನಯಾನದ ಕಹಿ ನೆನಪುಗಳ ಬಿಚ್ಚಿಟ್ಟ ಜೆಸ್ಸಿಕಾ

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

Donald Trump: 1979ರಲ್ಲಿ ಡೊನಾಲ್ಡ್​ ಟ್ರಂಪ್​ ಜತೆಗಿನ ವಿಮಾನಯಾನದ ಕಹಿ ನೆನಪುಗಳ ಬಿಚ್ಚಿಟ್ಟ ಜೆಸ್ಸಿಕಾ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on:May 03, 2023 | 11:34 AM

Share

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹೊಸ್ತಿಲಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. 1979ರಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಡೊನಾಲ್ಡ್​ ಟ್ರಂಪ್​ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಎಂಬುವವರು ಆರೋಪಿಸಿದ್ದಾರೆ.

80 ವರ್ಷದ ಜೆಸ್ಸಿಕಾ ಲೀಡ್ಸ್​ ಮಾತನಾಡಿ, ಟ್ರಂಪ್ ನ್ಯೂಯಾರ್ಕ್​ ಸಿಟಿಯಲ್ಲಿ ಫಸ್ಟ್​ ಕ್ಲಾಸ್​ನಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದಾಗ, ತನ್ನ ಸ್ಕರ್ಟ್​ ಮೇಲೆ ಕೈಯಾಡಿಸಿದ್ದರು, ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು. ಆಗ ತಾನು ತಪ್ಪಿಸಿಕೊಂಡು ವಿಮಾನದ ಹಿಂಭಾಗಕ್ಕೆ ಓಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ನ್ಯೂಯಾರ್ಕ್​ನ ಲಾಗಾರ್ಡಿಯಾ ಏರ್​ಪೋರ್ಟ್​ಗೆ ಬ್ರಾನಿಫ್ ಏರ್​ವೇಸ್ ವಿಮಾನದಲ್ಲಿ ಇಬ್ಬರೂ ಪ್ರಯಾಣಿಸುತ್ತಿದ್ದರು, ಆಗ ಇಬ್ಬರೂ ಅಕ್ಕಪಕ್ಕ ಕುಳಿತುಕೊಂಡಿದ್ದರು, ಟ್ರಂಪ್ ಆಗ ರಿಯಲ್ ಎಸ್ಟೇಟ್ ಡೆವಲಾಪರ್​ ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು.

ಯಾವುದೇ ಮಾತುಕತೆ ಇರಲಿಲ್ಲ, ಆದರೆ ನನ್ನನ್ನು ಅವರೆಡೆಗೆ ಸೆಳೆದು ಚುಂಬಿಸಲು ಪ್ರಯತ್ನಿಸುತ್ತಿದ್ದರು. ಆಗ ಮಹಿಳೆಯರು ದೂರು ನೀಡಿದರೂ ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳದ ಸಮಯ, ಹಾಗಾಗಿ ತಾನು ಯಾರಿಗೂ ಹೇಳದೆ ಮೌನವಾಗಿದ್ದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: Donald Trump: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ರೆಡಿ; ಡೊನಾಲ್ಡ್​ ಟ್ರಂಪ್ ಘೋಷಣೆ

ಮೊದಲು ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದ ಡೊನಾಲ್ಡ್‌ ಟ್ರಂಪ್‌ 2006ರ ಜುಲೈನಲ್ಲಿ ಗಾಲ್ಫ್‌ ಟೂರ್ನಮೆಂಟ್‌ ಸಂದರ್ಭದಲ್ಲಿ ವಯಸ್ಕರ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ ಅನ್ನು ಭೇಟಿಯಾಗಿದ್ದರು.

ಆಗ ಡೇನಿಯಲ್ಸ್‌ಗೆ 27 ವರ್ಷ ವಯಸ್ಸಾಗಿದ್ದರೆ, ಡೊನಾಲ್ಡ್‌ ಟ್ರಂಪ್‌ಗೆ 60 ವರ್ಷ ವಯಸ್ಸಾಗಿತ್ತು. ಟ್ರಂಪ್‌ ಅವರ ಮೂರನೇ ಪತ್ನಿ ಮೆಲಾನಿಯಾ ನಾಲ್ಕು ತಿಂಗಳ ಹಿಂದಷ್ಟೇ ಬ್ಯಾರೆನ್‌ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸ್ಟಾರ್ಮಿ ಡೇನಿಯಲ್ಸ್‌ 2018ರಲ್ಲಿ ಪ್ರಕಟವಾಗ ತನ್ನ ಪುಸ್ತಕ ಫುಲ್ ಡಿಸ್ಕ್ಲೋಸರ್ನ ಲ್ಲಿ ಟ್ರಂಪ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಹೇಳಿದ್ದಾರೆ.

ಟ್ರಂಪ್ ಅಂಗರಕ್ಷಕರೊಬ್ಬರು ಟ್ರಂಪ್‌ ಪೆಂಟ್‌ ಹೌಸ್‌  ದಿ ಅಪ್ರೆಂಟಿಸ್​ನಲ್ಲಿ ಊಟಕ್ಕೆ ಆಹ್ವಾನಿಸಿದ್ದರು ಎಂದು ಡೇನಿಯಲ್ಸ್‌ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಅದಲ್ಲದೇ ನಾನು ನನ್ನ ಜೀವನದಲ್ಲಿ ಅನುಭವಿಸಿದ ಅತ್ಯಂತ ಕಡಿಮೆ ಲೈಂಗಿಕ ಅನುಭವ ಎಂದು ಟ್ರಂಪ್‌ ಅವರ ದೇಹ ವರ್ಣನೆಯನ್ನು ಕೂಡ ಡೇನಿಯಲ್ಸ್‌ ತಮ್ಮ ಫುಲ್‌ ಡಿಸ್ಕ್ಲೋಸರ್‌ನಲ್ಲಿ ಬರೆದಿದ್ದಾರೆ. 2006ರ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡದೇ ಇರುವುದಕ್ಕೆ ಹಣ ಪಾವತಿಸಿರುವುದನ್ನು 2018ರಲ್ಲಿ ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ಬಹಿರಂಗಪಡಿಸಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Wed, 3 May 23