ಮೆಕ್ಸಿಕೋ ಸಿಟಿ: ಧಾರ್ಮಿಕ ಯಾತ್ರೆಗೆ ಪ್ರಯಾಣಿಸುತ್ತಿದ್ದ ಬಸ್ (Bus Accident) ಒಂದು ಇದ್ದಕ್ಕಿದ್ದಂತೆ ಅಪಘಾತಕ್ಕೀಡಾದ ಆಘಾತಕಾರಿ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ದಕ್ಷಿಣ ಮೆಕ್ಸಿಕೋದಲ್ಲಿ (southern Mexico) ಧಾರ್ಮಿಕ ಯಾತ್ರೆಗೆ ಜನರನ್ನು ಕೊಂಡೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮವಾಗಿ ಸುಮಾರು 9 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 40 ಮಂದಿ ಗಾಯಗೊಂಡಿದ್ದಾರೆ.
ತಿಲಾ ಟೌನ್‌ಶಿಪ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ ಎಂದು ದಕ್ಷಿಣ ರಾಜ್ಯ ಚಿಯಾಪಾಸ್‌ನಲ್ಲಿರುವ ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಫೀಸ್ಟ್ ಆಫ್ ಕಾರ್ಪಸ್ ಕ್ರಿಸ್ಟಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ತಬಾಸ್ಕೊದಲ್ಲಿರುವ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾಗ ಬಸ್ ಪಲ್ಟಿಯಾಗಿದೆ.
At least nine people dead, 40 injured in southern Mexico as bus carrying people on religious outing overturns, reports AP
— Press Trust of India (@PTI_News) June 18, 2022
ಇದನ್ನೂ ಓದಿ: Accident: ಉತ್ತರ ಪ್ರದೇಶದ ಬದೌನ್ನಲ್ಲಿ ಭೀಕರ ಅಪಘಾತ; 6 ಮಂದಿ ಸಾವು, 14 ಜನರಿಗೆ ಗಾಯ
ಈ ಅಪಘಾತದ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ. ಗಾಯಗೊಂಡ 40 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 am, Sat, 18 June 22