Covid Vaccines: 6 ತಿಂಗಳ ಮಗುವಿಗೆ ಕೊವಿಡ್ ಲಸಿಕೆ ನೀಡಲು ಅಮೆರಿಕ ನಿರ್ಧಾರ: ಐತಿಹಾಸಿಕ ಕ್ರಮ ಎಂದ ಜನತೆ

ಫಿಜರ್ ಮತ್ತು ಮಾಡೆರ್ನಾ ಲಸಿಕೆಗಳನ್ನು ಐದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ಕೊಡಲು ಅಮೆರಿಕ ಈಗಾಗಲೇ ಸಮ್ಮತಿಸಿದೆ.

Covid Vaccines: 6 ತಿಂಗಳ ಮಗುವಿಗೆ ಕೊವಿಡ್ ಲಸಿಕೆ ನೀಡಲು ಅಮೆರಿಕ ನಿರ್ಧಾರ: ಐತಿಹಾಸಿಕ ಕ್ರಮ ಎಂದ ಜನತೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 19, 2022 | 7:56 AM

ವಾಷಿಂಗ್​ಟನ್: ಅಮೆರಿಕದಲ್ಲಿ 6 ತಿಂಗಳ ಮಕ್ಕಳಿಗೂ ಕೊವಿಡ್ ಲಸಿಕೆ (Covid Vaccine) ನೀಡಲು ಅಮೆರಿಕದ ಆರೋಗ್ಯ ಇಲಾಖೆ ಅವಕಾಶ ನೀಡಿದೆ. ಎಂಆರ್​ಎನ್​ಎ ಲಸಿಕೆಗಳನ್ನು (mRNA vaccines) ಸಣ್ಣ ಮಕ್ಕಳಿಗೆ ನೀಡಲು ಅನುಮತಿ ನೀಡಿದ ವಿಶ್ವದ ಮೊದಲ ದೇಶವಾಗಿ ಅಮೆರಿಕ ಹೊರಹೊಮ್ಮಲಿದೆ. ಫಿಜರ್ ಮತ್ತು ಮಾಡೆರ್ನಾ ಲಸಿಕೆಗಳನ್ನು ಐದು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ಕೊಡಲು ಅಮೆರಿಕ ಈಗಾಗಲೇ ಸಮ್ಮತಿಸಿದ್ದು, ಅಧ್ಯಕ್ಷ ಜೋ ಬೈಡೆನ್ ಅವರು ಈ ನಿರ್ಧಾರವನ್ನು ‘ಗಮನಾರ್ಹ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (Food and Drug Administration – FDA) ವಿಭಾಗವು ಆರು ತಿಂಗಳು ದಾಟಿದ ಮಕ್ಕಳಿಗೂ ಲಸಿಕೆಯನ್ನು ನೀಡಲು ಅನುಮೋದನೆ ನೀಡಿತು. ಈವರೆಗೆ ಅಮೆರಿಕದಲ್ಲಿ ಕೊರೊನಾ ಲಸಿಕೆ ಪಡೆಯಲು ಕನಿಷ್ಠ 5 ವರ್ಷದ ವಯೋಮಿತಿ ಇತ್ತು. 6 ತಿಂಗಳ ವಯೋಮಿತಿಯ ಹೊಸ ಆದೇಶ ಜಾರಿಗೆ ಬರಲು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಭಾಗದ (Centers for Disease Control and Prevention – CDC) ಅನುಮೋದನೆ ಸಿಗಬೇಕಿದೆ.

‘ಅಮೆರಿಕದ ಲಕ್ಷಾಂತರ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಬೇಕೆಂದು ಉತ್ಸುಕರಾಗಿದ್ದಾರೆ. ಇಂದಿನ ನಿರ್ಧಾರದಿಂದ ಅವರಿಗೆ ಅವಕಾಶ ಸಿಗುತ್ತದೆ’ ಎಂದು ಸಿಡಿಸಿ ನಿರ್ದೇಶಕ ರೊಚೆಲ್ಲೆ ವಾಲೆನ್​ಸ್ಕೆ ಹೇಳಿದರು. ಮುಂದಿನ ದಿನಗಳಲ್ಲಿ ಅಮೆರಿಕಾದ್ಯಂತ ಮಕ್ಕಳಿಗೆ ನೀಡುವ ಲಸಿಕೆಯನ್ನು ಸರ್ಕಾರ ಹಂಚಿಕೆ ಮಾಡಲಿದೆ.

ಮುಂದಿನ ವಾರದಿಂದಲೇ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಆಸ್ಪತ್ರೆಗಳಲ್ಲಿ ಸಮಯ ಗೊತ್ತು ಮಾಡಿಕೊಳ್ಳಬಹುದು. ಈ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ ಎಂದು ಅಮೆರಿಕದ ಆರೋಗ್ಯ ಇಲಾಖೆ ಹೇಳಿದೆ. 6 ತಿಂಗಳಿನಿಂದ 5 ವರ್ಷದೊಳಗಿರುವ ಮಕ್ಕಳಿಗೆ ಎರಡು ಡೋಸ್​ಗಳ ಲಸಿಕೆಯಾಗಿರುವ ಮಾಡೆರ್ನಾ ಕೊವಿಡ್ ಲಸಿಕೆಯನ್ನು ಎರಡು ತಿಂಗಳ ಅಂತರದಲ್ಲಿ ಕೊಡಲಾಗುತ್ತದೆ. ಪ್ರತಿ ಡೋಸ್​ 25 ಮಿಲಿಗ್ರಾಮ್​ (25 ಎಂಜಿ) ಪ್ರಮಾಣದಲ್ಲಿರುತ್ತದೆ. 6ರಿಂದ 11 ವರ್ಷದ ಮಕ್ಕಳಿಗೆ 50 ಎಂಜಿ ಮತ್ತು 12 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 75 ಎಂಜಿ ಪ್ರಮಾಣದ ಲಸಿಕೆ ನೀಡಲಾಗುತ್ತದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:55 am, Sun, 19 June 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ