ಬಳ್ಳಾರಿ: ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ: ಬಸ್ನಲ್ಲಿದ್ದ 11 ಜನರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಲಾರಿಗಳು ಡಿಕ್ಕಿಯಾಗಿದ್ದು, ಓರ್ವ ಚಾಲಕನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ನಡೆದಿದೆ.
ಬಳ್ಳಾರಿ: ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿದ್ದು, (Accident) 11 ಜನರಿಗೆ ಗಾಯಗೊಂಡಿರುವಂತಹ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹೊಸಪೇಟೆಗೆ ಬರುತ್ತಿದ್ದ KSRTC ಬಸ್, ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದ್ದು, ಸಾರಿಗೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ನಲ್ಲಿದ್ದ 11 ಜನರಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ನಾಲ್ವರು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸಾವು ಗೆದ್ದ ಬಾಲಕ: ಬೋರ್ವೆಲ್ನಲ್ಲಿ ಸಿಲುಕಿದ್ದ 10 ವರ್ಷದ ಬಾಲಕನ ರಕ್ಷಣೆ, ಫಲ ನೀಡಿದ ಕಾರ್ಯಾಚರಣೆ
ಗ್ರಾಮ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ: ಪೊಲೀಸ್ ಬಂದೋಬಸ್ತ್
ಯಾದಗಿರಿ: ದುಷ್ಕರ್ಮಿಗಳಿಂದ ಗ್ರಾಮದ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ನಡೆದಿದೆ. ಚಿದಾನಂದ ಪೂಜಾರಿ ಹಲ್ಲೆಗೊಳಗಾದ ಗ್ರಾಮದ ಮುಖಂಡ. ಗಾಯಗೊಂಡ ಚಿದಾನಂದ ಪೂಜಾರಿಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಗತೀರ್ಥ ಗ್ರಾಮಕ್ಕೆ ಯಾದಗಿರಿ ಎಸ್.ಪಿ ವೇದಾಮೂರ್ತಿ ಗ್ರಾಮಕ್ಕೆ ಭೇಡಿ ನೀಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ತಿಂಗಳು ಇದೆ ಗ್ರಾಮದಲ್ಲಿ ಎರಡು ಗುಂಪುಗಳ ಮದ್ಯ ಮಾರಮಾರಿ ನಡೆದಿತ್ತು. ಗ್ರಾಮ ಪಂಚಾಯತಿ ಉಪ ಚುನಾವಣೆ ಗೆಲುವಿನ ಸಂಭ್ರಮದ ವೇಳೆ ಮಾರಮಾರಿ ನಡೆದಿತ್ತು. ಈ ವೇಳೆ ಗ್ರಾಮ ಬಾಬುಗೌಡ ಅಗತೀರ್ಥ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಜಗಳ ಸಂಬಂಧ ದೂರು ಪ್ರತಿ ದೂರು ದಾಖಲಾಗಿತ್ತು ಎಂದರು. ಗ್ರಾಮ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಕ್ಕೆ ಕಟ್ಟೇಚ್ಚರ ವಹಿಸಿದ್ದು, ಅಗತೀರ್ಥ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಎರಡು ಲಾರಿಗಳ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎರಡು ಲಾರಿಗಳು ಡಿಕ್ಕಿಯಾಗಿದ್ದು, ಓರ್ವ ಚಾಲಕನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ನಡೆದಿದೆ. ಗಾಯಾಳು ಚಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:41 am, Wed, 15 June 22